ಬೆಂಗಳೂರು

ಬಿಗ್‌ ಬಾಸ್‌ ನಿಂದ ಬೆಂಕಿ ತನಿಷಾ ಔಟಾದ್ರಾ..?ಅಭಿಮಾನಿಗಳಿಗೆ ಶಾಕ್..!,ವೈರಲ್ ಆದ ಪ್ರೋಮೋದಲ್ಲೇನಿದೆ?

ನ್ಯೂಸ್ ನಾಟೌಟ್‌ : ಈ ಬಾರಿಯ ಬಿಗ್ ಬಾಸ್ ಮನೆ ಕುತೂಹಲದ ಗೂಡಾಗಿತ್ತು. ತಿರುವುಗಳ ಮೇಲೆ (Bigg Boss Kannada 10) ಮಹಾ ತಿರುವೇ ಕಂಡು ಬಂದಿತ್ತು.ವೀಕೆಂಡ್‌ ಬಂದಾಗ ಯಾರು ಎಲಿಮಿನೇಟ್‌ ಆಗ್ತಾರೆ ಅನ್ನೋದನ್ನು ಊಹಿಸುವುದಕ್ಕೂ ಕಷ್ಟವಾಗುತ್ತಿತ್ತು.ಒಂದು ವೇಳೆ ಊಹಿಸಿದ್ರೂ ಕೂಡ ನಮ್ಮ ಕಲ್ಪನೆ ತಪ್ಪಾಗಿಯೂ ಇರಬಹುದು.ಹೀಗೆ ಈ ಸ್ಪರ್ಧೆಯೇ ಒಂಥರಾ ಇಂಟ್ರೆಸ್ಟಿಂಗ್‌ ಆಗಿದ್ದು, ಇದೀಗ ದೊಡ್ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆದಿದೆ. ದೊಡ್ಮನೆ ಆಟದಿಂದ ತನಿಷಾ ಕುಪ್ಪಂಡ (Tanisha Kuppanda) ಔಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

ಹೌದು, ಈಗಾಗ್ಲೇ ದೊಡ್ಮನೆಯಲ್ಲಿ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದ ತನಿಷಾ ಕುಪ್ಪಂಡ ಅವರಿಗೆ ‘ಬಿಗ್ ಬಾಸ್’ ಬಿಗ್ ಶಾಕ್ ಕೊಟ್ಟಿದ್ದಾರೆ. ತನಿಷಾ ಈ ಮನೆಯಲ್ಲಿ ನಿಮ್ಮ ಪಯಣ ಅಂತ್ಯ ಎಂದು ಹೇಳಿ ‘ಬಿಗ್ ಬಾಸ್’ (Bigg Boss) ಅಚ್ಚರಿ ಮೂಡಿಸಿದ್ದಾರೆ.ಕಳೆದ 60 ದಿನಗಳಿಂದ ಎದುರಾಳಿಗಳಿಗೆ ಠಕ್ಕರ್ ಕೊಡುತ್ತಲೇ ತನಿಷಾ ಆಟ ಆಡುತ್ತಿದ್ದರು. ಟಾಸ್ಕ್‌ವೊಂದರಲ್ಲಿ ತನಿಷಾ ಕಾಲಿಗೆ ಏಟಾದ ಮೇಲೆ ಕೊಂಚ ಡಲ್ ಆದರು. ಕಳೆದ ವಾರ ವರ್ತೂರು ಸಂತೋಷ್ ಮತ್ತು ತುಕಾಲಿ ಸಂತೂ ಡೇಂಜರ್ ಝೋನ್‌ನಲ್ಲಿದ್ದರು.

ಆದರೆ ಈ ವಾರ ತುಕಾಲಿ ಸಂತೂ ನಾಮಿನೇಟ್ ಆಗಿಲ್ಲ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಮೂಲಗಳ ಪ್ರಕಾರ, ತನಿಷಾ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗುತ್ತಿದೆ.ಬಿಗ್ ಬಾಸ್ ಮನೆಯ ಆಟದಲ್ಲಿ ಕಳೆದ ವಾರ ಎಲಿಮಿನೇಷನ್ ಪ್ರಕ್ರಿಯೆ ನಡೆದಿರಲಿಲ್ಲ. ಈಗ ಸಡನ್ ಆಗಿ ತನಿಷಾ ಅವರ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ. ಈ ಕುರಿತ ವಾಹಿನಿಯ ಪ್ರೋಮೋ ಭಾರಿ ವೈರಲ್ ಆಗುತ್ತಿದೆ.

Related posts

ಮಹಿಳೆಯರಿಗೆ ‘ಫ್ರೀ ಬಸ್’ ಬಳಿಕ ‘ಗೃಹಲಕ್ಷ್ಮೀ’ ಗ್ಯಾರಂಟಿ, ನಾಳೆಯಿಂದಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರು

‘ವ್ಲಾಗ್’ ಮಾಡುತ್ತಾ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಎದೆ ಸ್ಪರ್ಶಿಸಿ ಓಡಿ ಹೋದ ಬಾಲಕ..! ಕಣ್ಣೀರಿಟ್ಟ ಯುವತಿ, ಇಲ್ಲಿದೆ ವಿಡಿಯೋ

ಮೆಟ್ರೋ ಕಾಮಗಾರಿ ವೇಳೆ ದುರಂತ: ತಾಯಿ, ಮಗು ಸ್ಥಳದಲ್ಲೇ ಸಾವು