ಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಚಂಡಮಾರುತಕ್ಕೆ ತಿರುವಣ್ಣಾಮಲೈನಲ್ಲಿ ಭೂಕುಸಿತ..! ಅವಶೇಷಗಳಡಿ ಸಿಲುಕಿದ 7 ಜನ..!

ನ್ಯೂಸ್ ನಾಟೌಟ್: ಫೆಂಗಲ್ ಚಂಡಮಾರುತದ ಪರಿಣಾಮವಾಗಿ ತಮಿಳನಾಡಿನ ತಿರುವಣ್ಣಾಮಲೈನಲ್ಲಿ ಭೂ ಕುಸಿತ ಸಂಭವಿಸಿದ್ದು, ಏಳು ಮಂದಿ ಭಾನುವಾರ(ನ.1) ಸಂಜೆಯಿಂದ ಅವಶೇಷಗಳಡಿ ಸಿಲುಕಿದ್ದಾರೆ. ರಕ್ಷಣಾ ತಂಡವೊಂದು ಸ್ಥಳಕ್ಕೆ ಧಾವಿಸಿದ್ದು, ಸುಮಾರು 12 ಗಂಟೆಯಿಂದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಸಿಬ್ಬಂದಿ, ಕಮಾಂಡೋ, ತಮಿಳುನಾಡಿನ ಅಗ್ನಿ ಶಾಮಕ ದಳ ಸೇರಿದಂತೆ ಸುಮಾರು 170 ಜನರು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬೃಹತ್ ಗಾತ್ರದ ಕಲ್ಲುಗಳು ಇರುವುದರಿಂದ ಸಂತ್ರಸ್ತರನ್ನು ಪತ್ತೆ ಹಚ್ಚಲು ಸ್ಕ್ಯಾನಿಂಗ್ ಯಂತ್ರಕ್ಕೆ ಕಷ್ಟವಾಗುತ್ತಿದೆ ಎಂದು ರಕ್ಷಣಾಧಿಕಾರಿ ತಿಳಿಸಿದ್ದಾರೆ.

ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ಮಾನವಶಕ್ತಿಯನ್ನು ಅವಲಂಬಿಸಿದ್ದೇವೆ. ಸಂತ್ರಸ್ತರು ಕೆಸರಿನಡಿಯಲ್ಲಿ ಹೂತು ಹೋಗಿರುವುದು ದೃಢಪಟ್ಟಿದ್ದು, ಮೊದಲು ಕಲ್ಲುಗಳನ್ನು ತೆಗೆಯುವುದು ನಮ್ಮ ಆದ್ಯತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Related posts

ಕೊಳ್ಳೇಗಾಲದಿಂದ ಬರುತ್ತಿರುವಾಗ ಏಕಾಏಕಿ ಸಿಡಿದ KSRTC ಬಸ್ ನ ಟಯರ್..!‌ ಪವಾಡವೆಂಬಂತೆ ಪಾರಾದ ಪ್ರಯಾಣಿಕರು..!

ರಾಮಮಂದಿರಕ್ಕೆ ಬಂದ ದೇಣಿಗೆ ಎಷ್ಟು ಕೋಟಿ ಗೊತ್ತಾ..? ಇಲ್ಲಿದೆ ಅಯೋಧ್ಯಾ ರಾಮನ ಬ್ಯಾಂಕ್ ಖಾತೆಯ ವಿವರ

ಬೆಳಗಾವಿಯಲ್ಲಿ ಭೀಕರ ಅಪಘಾತ, ಕಾಂಗ್ರೆಸ್ ನಾಯಕ ಶಿವಕುಮಾರ್ ಕೌಡಿಚ್ಚಾರ್ ಸಾವು