ನ್ಯೂಸ್ ನಾಟೌಟ್: ರಾಜ್ಯದೆಲ್ಲೆಡೆ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭಗೊಂಡಿದೆ. ಆದರೆ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ವಲ್ಲಿಯೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.ವಿದ್ಯಾರ್ಥಿಯ ತಾಯಿ ಪರೀಕ್ಷಾ ದಿನವೇ ಮೃತಪಟ್ಟಿದ್ದು, ಅದೇ ದಿನ ಹೋಗಿ ವಿದ್ಯಾರ್ಥಿ ಪರೀಕ್ಷೆ ಬರೆದಿದ್ದಾನೆ.
ಪರೀಕ್ಷೆಯ ತಯಾರಿ ನಡೆಸಿ ಇನ್ನೇನು ಪರೀಕ್ಷೆಗೆ ಹೋರಡಬೇಕು ಎನ್ನುವಷ್ಟರಲ್ಲಿ ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ತಿರುನಲ್ವೇಲಿ ಜಿಲ್ಲೆಯ ವಲ್ಲಿಯೂರಿನ ನಿವಾಸಿಯಾಗಿರುವ ಸುಬಾಲಕ್ಷ್ಮಿ ಮೃತ ಮಹಿಳೆ.
ಸುಬಾಲಕ್ಷ್ಮಿಗೆ ಸುನಿಲ್ ಹಾಗೂ ಯುವಶಿನಿ ಎಂಬ ಇಬ್ಬರು ಮಕ್ಕಳು, ಅದರಲ್ಲಿ ಸುನಿಲ್ ದ್ವಿತೀಯ ಪಿಯಿಸಿ ಓಡುತ್ತಿದ್ದಾನೆ. ಸುನಿಲ್ ತಂದೆ ಕೃಷ್ಣಮೂರ್ತಿ ಅವರು ಆರು ವರ್ಷಗಳ ಹಿಂದೆ ನಿಧನರಾಗಿದ್ದರು ಅಂದಿನಿಂದ ಸುಬಲಕ್ಷ್ಮಿ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಆಶೀರ್ವಾದ ಪಡೆದು ಪರೀಕ್ಷೆಗೆ ತೆರಳಿದ
ಅಂತ್ಯ ಸಂಸ್ಕಾರಕ್ಕೆ ತಯಾರಿ ನಡೆಸಿ ತಾಯಿಯ ಮೃತದೇಹವನ್ನು ಕುರ್ಚಿಯ ಮೇಲೆ ಕೂರಿಸಿದ್ದು ಈ ವೇಳೆ ಪರೀಕ್ಷೆಗೆ ತೆರಳಲು ಸಿದ್ಧತೆ ನಡೆಸಿದ ಮಗ ದುಃಖದ ನಡುವೆ ಮೃತ ತಾಯಿಯ ಪಾದ ಮುಟ್ಟಿ ನಮಸ್ಕರಿಸಿ ಬಳಿಕ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆದು ಮಧ್ಯಾಹ್ನ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾನೆ.