ಕ್ರೈಂವೈರಲ್ ನ್ಯೂಸ್ಸಿನಿಮಾ

ಖ್ಯಾತ ತಮಿಳು ನಟನ ‘ಕಂಗುವಾ’ ಸಿನಿಮಾದ ‘ಎಡಿಟರ್’ ಕೇರಳದಲ್ಲಿ ಶವವಾಗಿ ಪತ್ತೆ..! ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದ ನಿಶಾದ್ ನಿಗೂಢ ಸಾವು..!

234

ನ್ಯೂಸ್ ನಾಟೌಟ್: ಖ್ಯಾತ ಸಿನಿಮಾ ಸಂಕಲನಕಾರ(editor) ನಿಶಾದ್ ಯೂಸುಫ್ ಇಂದು(ಅ.30) ಮುಂಜಾನೆ ಕೊಚ್ಚಿಯ ಅಪಾರ್ಟ್‌ಮೆಂಟ್‌ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಡರಾತ್ರಿ 2 ಗಂಟೆ ಸುಮಾರಿಗೆ ಪಣಂಪಳ್ಳಿ ನಗರದ ಅಪಾರ್ಟ್‌ಮೆಂಟ್‌ ನಲ್ಲಿ ಅವರ ಶವ ಪತ್ತೆಯಾಗಿದೆ. ನಿಶಾದ್ ಅವರ ಸಾವನ್ನು ಆತ್ಮಹತ್ಯೆ ಎಂದು ಶಂಕಿಸಲಾಗಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

‘ತಲ್ಲುಮಾಲ’ ಸಿನಿಮಾದ ಅತ್ಯುತ್ತಮ ಸಂಕಲನಕ್ಕಾಗಿ 2022ರಲ್ಲಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದ ನಿಶಾದ್ , ಚಾವೆರ್, ಉಂಡಾ, ಸೌದಿ ವೆಲ್ಲಕ್ಕ, ಒನ್‌, ಆಪರೇಷನ್ ಜಾವಾ, ಬಾಜೂಕಾ, ಮತ್ತು ಕಂಗುವ ಮುಂತಾದ ಚಿತ್ರಗಳಿಗೆ ಸಂಕಲನ ಮಾಡಿದ್ದಾರೆ. ನಟ ಮಮ್ಮುಟಿ ಅಭಿನಯದ ‘ಬಾಜೂಕಾ’ ಮತ್ತು ತಮಿಳು ನಟ ಸೂರ್ಯ ನಟನೆಯ ‘ಕಂಗುವ’ ಚಿತ್ರಗಳು ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಫಿಲ್ಮ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಕೇರಳ (ಫೆಫ್ಕಾ) ನಿರ್ದೇಶಕರ ಒಕ್ಕೂಟವು ತನ್ನ ಅಧಿಕೃತ ಫೇಸ್‌ ಬುಕ್ ಪುಟದಲ್ಲಿ ಸಾವಿನ ಸುದ್ದಿ ಖಚಿತಪಡಿಸಿದೆ.

Click

https://newsnotout.com/2024/10/darshan-thugudeepa-got-bail-kannada-news-viral-news-d/
https://newsnotout.com/2024/10/house-car-issue-cctv-putage-viral-news-madyapradesh/
https://newsnotout.com/2024/10/social-media-kananda-news-7-people-arrested-viral-news-s/
https://newsnotout.com/2024/10/yash-acting-kannada-cinema-toxic-tree-cutting-eshwar-kandre-allegation/
https://newsnotout.com/2024/10/goa-and-karnataka-police-join-operation-kannada-news-v-thief/
See also  ಉಡುಪಿ : ಕಂಗುವಾದಿಂದ ಕಂಗಾಲಾದ ನಟ ಸೂರ್ಯನಿಂದ ಕೊಲ್ಲೂರು ಮೂಕಾಂಬಿಕೆಯ ದರ್ಶನ, ಚಂಡಿಕಾಯಾಗದಲ್ಲಿ ಭಾಗಿಯಾದ ಸ್ಟಾರ್ ದಂಪತಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget