ಕ್ರೀಡೆ/ಸಿನಿಮಾಕ್ರೈಂ

ಖ್ಯಾತ ನಟ ಸೂರ್ಯ ಆಸ್ಪತ್ರೆಗೆ ದಾಖಲು..! ಶೂಟಿಂಗ್ ವೇಳೆ ನಡೆಯಿತಾ ಅವಘಡ? ಮುಂದೇನಾಯ್ತು?

ನ್ಯೂಸ್‌ ನಾಟೌಟ್‌: ತಮಿಳಿನ ಹೆಸರಾಂತ ನಟ ಸೂರ್ಯಗೆ (Surya) ಶೂಟಿಂಗ್ ವೇಳೆ ತೀವ್ರ ಗಾ* ಯಗಳಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ (Hospital) ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.

ಕಂಗುವ ಶೂಟಿಂಗ್ ವೇಳೆ ಭುಜದ ಮೇಲೆ ಕ್ಯಾಮೆರಾ ಬಿದ್ದ ಕಾರಣದಿಂದಾಗಿ ಏಟಾಗಿದೆ ಎನ್ನಲಾಗಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವಿಷಯ ಕೇಳುತ್ತಿದ್ದಂತೆಯೇ ಸೂರ್ಯನ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು.

ಈ ಕುರಿತಂತೆ ಸ್ವತಃ ಸೂರ್ಯ ಸೋಷಿಯಲ್ ಮಿಡಿಯಾದಲ್ಲಿ ಬರೆದುಕೊಂಡಿದ್ದು, ಆತಂಕ ಪಡುವಂಥದ್ದು ಏನೂ ಆಗಿಲ್ಲ. ಚೇತರಿಸಿಕೊಳ್ಳುತ್ತಿದ್ದೇನೆ. ಹಾರೈಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು. ಆದಷ್ಟು ಬೇಗ ಮತ್ತೆ ಚಿತ್ರೀಕರಣದಲ್ಲಿ ಭಾಗಿ ಆಗುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಈ ನಡುವೆ ‘ಕಂಗುವ’ (Kanguva) ಸಿನಿಮಾ ಟೀಮ್ ನಿಂದ ಭರ್ಜರಿ ಅಪ್ ಡೇಟ್ ಸಿಕ್ಕಿದೆ. ಈ ಸಿನಿಮಾವನ್ನು ಬರೋಬ್ಬರಿ 38 ಭಾಷೆಗಳಲ್ಲಿ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಜೊತೆಗೆ 3 ಡಿ ತಂತ್ರಜ್ಞಾನದಲ್ಲೂ ಈ ಸಿನಿಮಾವನ್ನು ನೋಡಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.

Related posts

ವೃದ್ಧ ಮಾವನಿಗೆ ಮನಬಂದಂತೆ ಚಪ್ಪಲಿಯಲ್ಲಿ ಹೊಡೆದ ಸೊಸೆ..! ತಡೆಯಲು ಪ್ರಯತ್ನಿಸಿದ ಸಾಕು ನಾಯಿ..! ಇಲ್ಲಿದೆ ವೈರಲ್ ವಿಡಿಯೋ

ಸುರತ್ಕಲ್‌: ಅಡುಗೆ ಮನೆ ಗ್ಯಾಸ್‌ ಸೋರಿಕೆಯಾಗಿ ಮಹಿಳೆಯರ ಮೇಲೆ ಹೊತ್ತಿಕೊಂಡ ಬೆಂಕಿ..! ಮೈಗೆ ಅಂಟಿದ್ದ ಸೀರೆಯನ್ನು ಕತ್ತರಿಸಿ ರಕ್ಷಿಸಿದ ಸ್ಥಳೀಯರು..!

ಮಂಗಳೂರು: ಕುಡಿದು ಆರೇಳು ಅಡಿ ಆಳವಿದ್ದ ಮೋರಿಗೆ ಬಿದ್ದ ವ್ಯಕ್ತಿ..! ಸಂಚಾರಿ ಪೊಲೀಸರಿಂದ ರಕ್ಷಣೆ..!