Latestಕ್ರೈಂವೈರಲ್ ನ್ಯೂಸ್ಸಿನಿಮಾ

ಹೆಸರಾಂತ ತಮಿಳು ನಟ ಅರೆಸ್ಟ್ ..! ಮಾದಕ ವಸ್ತು ಖರೀದಿ ಮತ್ತು ಸೇವನೆ..!

353

ನ್ಯೂಸ್ ನಾಟೌಟ್: ಕೂಟಂ, ಮನಸೆಲ್ಲಂ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿರುವ ತಮಿಳು ಹಾಗೂ ತೆಲುಗು ನಟ ಶ್ರೀಕಾಂತ್ ನನ್ನು ಡ್ರಗ್ಸ್ ಕೇಸ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬೆಳಗ್ಗೆಯಷ್ಟೇ ವಿಚಾರಣೆಗಾಗಿ ಚೆನ್ನೈ ಪೊಲೀಸರು ಶ್ರೀಕಾಂತ್ ಅಲಿಯಾಸ್ ಶ್ರೀರಾಮ್‌ ನನ್ನು ವಶಕ್ಕೆ ಪಡೆದಿದ್ದರು. ಶ್ರೀಕಾಂತ್ ಡ್ರಗ್ಸ್ ಸೇವನೆ ಧೃಡಪಟ್ಟಿರುವುದರಿಂದ ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಡ್ರಗ್ಸ್ ಸೇವೆನೆ ಪತ್ತೆ ಹಚ್ಚುವುದಕ್ಕಾಗಿ ನುಂಗಂಬಾಕ್ಕಂ ಪೊಲೀಸರು ಶ್ರೀಕಾಂತ್ ರನ್ನು ಕರೆತಂದು, ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದರು. ಸದ್ಯ ರಕ್ತದ ಪರೀಕ್ಷೆಯ ವರದಿ ಬಂದಿದ್ದು, ಶ್ರೀಕಾಂತ್ ಡ್ರಗ್ಸ್ ಸೇವಿಸಿರುವುದು ಪತ್ತೆಯಾಗಿದೆ. ಜೊತೆಗೆ ಡ್ರಗ್ಸ್ ವ್ಯವಹಾರವನ್ನೂ ಮಾಡಿದ್ದು ಬೆಳಕಿಗೆ ಬಂದಿದೆ. ಹಾಗಾಗಿ ಎನ್ ಡಿಪಿಎಸ್ ಕಾಯ್ದೆ ಅಡಿ ಶ್ರೀಕಾಂತ್ ನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

ಎಐಎಇಎಂಕೆಯ ಐಟಿ ವಿಭಾಗದ ಮಾಜಿ ಸದಸ್ಯ ಪ್ರಸಾದ್ ಎಂಬಾತನನ್ನು ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಅನ್ನುವ ಕಾರಣಕ್ಕೆ ಬಂಧಿಸಲಾಗಿತ್ತು. ಆತ ಡ್ರಗ್ಸ್ ಅನ್ನು ಶ್ರೀಕಾಂತ್‌ ಗೆ ಸಪ್ಲೈ ಮಾಡಿದ್ದಾಗಿ ಹೇಳಿಕೊಂಡಿದ್ದ. ನಂತರ ಶ್ರೀಕಾಂತ್ ನನ್ನು ಪೊಲೀಸರು ವಿಚಾರಣೆಗೆ ಕರೆತಂದಿದ್ದರು. ಪ್ರತಿ ಗ್ರಾಂಗೆ ಶ್ರೀಕಾಂತ್ ಹನ್ನೆರಡು ಸಾವಿರದ ದರದಂತೆ 40 ಬಾರಿ ಕೊಕೇನ್ ಖರೀದಿಸಿರುವುದು ಪತ್ತೆಯಾಗಿದೆ.

ಸಲ್ಮಾನ್​ ಖಾನ್ ​ಗೆ ಗಂಭೀರ ಕಾಯಿಲೆ..! ಈ ಬಗ್ಗೆ ನಟ ಹಂಚಿಕೊಂಡ ಮಾಹಿತಿಗಳೇನು..?

ಪ್ರಸಿದ್ಧ ಪುಣ್ಯಕ್ಷೇತ್ರ ಮುರುಡೇಶ್ವರದಲ್ಲಿ ವಸ್ತ್ರ ಸಂಹಿತೆ ಜಾರಿ..! ಈ ಬಗ್ಗೆ ಆಡಳಿತ ಮಂಡಳಿ ಹೇಳಿದ್ದೇನು..?

See also  ನಿಮ್ಮ ಧ್ವನಿ ಮೂಲಕವೇ ಇನ್ನು ಮುಂದೆ UPI ಪಾವತಿ ಮಾಡಬಹುದು..? ಓದಲು ಮತ್ತು ಬರೆಯಲು ಬಾರದವರೂ ಬಳಸಬಹುದು ಎಂದ ಗೂಗಲ್..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget