ನ್ಯೂಸ್ ನಾಟೌಟ್: ತಮಿಳಿನ ಖ್ಯಾತ ನಟ ಧನುಷ್ (Actor Dhanush) ಅವರ ಸಿನಿಮಾ ಚಿತ್ರೀಕರಣದ ಸೆಟ್‌ನಲ್ಲಿ ಬೆಂಕಿ ಅವಘಡವಾಗಿರುವ ಘಟನೆ ನಡೆದಿದೆ.
ಧನುಷ್ ನಟನೆಯ ʼಇಡ್ಲಿ ಕಡೈʼ ಚಿತ್ರೀಕರಣದ ಸೆಟ್ ನಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಅವಘಡ ಉಂಟಾಗಿದೆ. ತಮಿಳುನಾಡಿನ ಆಂಡಿಪಟ್ಟಿ ಬ್ಲಾಕ್ ನಲ್ಲಿರುವ ಅನುಪ್ಪಪಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿರುವುದು ವರದಿಯಾಗಿದೆ.
ಘಟನೆಗೂ ಮುನ್ನ ಚಿತ್ರತಂಡ ಇಲ್ಲಿ ಚಿತ್ರೀಕರಣ ಮುಗಿಸಿ ತೆರಳಿತ್ತು. ಆ ಕಾರಣದಿಂದ ಯಾರಿಗೂ ಹಾನಿ ಉಂಟಾಗಿಲ್ಲ. ಈ ಬೆಂಕಿ ಅವಘಡಕ್ಕೆ ಕಾರಣ ಏನು ಎನ್ನುವುದು ಇನ್ನೂ ತಿಳಿದುಬಂದಿಲ್ಲ.
ಬೆಂಕಿಯಿಂದ ಉಂಟಾದ ಹಾನಿ ಅಥವಾ ನಷ್ಟದ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ.
#WATCH | Theni, Tamil Nadu | A fire broke out at the Idly Kadai movie set yesterday in Anuppapatti village in Andipatti block. The film, directed and co-produced by Dhanush and starring the actor, is set for release later this year. The filming for Idly Kadai had completed its… pic.twitter.com/fKVSnZFeIm
— ANI (@ANI) April 20, 2025
ʼಇಡ್ಲಿ ಕಡೈʼ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿರುವ ಬಹು ನಿರೀಕ್ಷಿತ ಸಿನಿಮಾವಾಗಿತ್ತು. ಧನುಷ್ ಚಿತ್ರವನ್ನು ನಿರ್ದೇಶನ ಮಾಡುವುದರ ಜತೆಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿಯಾಗಿ ನಿತ್ಯಾ ಮೆನನ್ ಕಾಣಿಸಿಕೊಳ್ಳಲಿದ್ದಾರೆ.
ಮಧ್ಯಪ್ರದೇಶದ ಸಿಎಂ ಅನ್ನು ಭೇಟಿಯಾದ ನಟ ಯಶ್..! ಖುದ್ದಾಗಿ ಆಹ್ವಾನ ನೀಡಿದ್ದ ಸಿಎಂ