ಕ್ರೈಂಸಿನಿಮಾ

ಹಿರಿಯ ತಮಿಳು ನಟ ವಿಧಿವಶ..! 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದ ಕಲಾವಿದ

224

ನ್ಯೂಸ್ ನಾಟೌಟ್: 400ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದ ತಮಿಳು ಚಿತ್ರರಂಗದ ಪ್ರಸಿದ್ಧ ನಟ ಡೆಲ್ಲಿ ಗಣೇಶ್​ ಶನಿವಾರ ರಾತ್ರಿ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರಿಗೆ 80 ವರ್ಷ ವಯಸ್ಸಾಗಿತ್ತು.

ಡೆಲ್ಲಿ ಗಣೇಶ್​ ಸಾವಿನ ಬಗ್ಗೆ ಪುತ್ರ ಮಹದೇವನ್​ ಸಾಮಾಜಿಕ ಜಾಲತಾಣದಲ್ಲಿ, “ನಮ್ಮ ತಂದೆ ಡೆಲ್ಲಿ ಗಣೇಶ್​ ಅವರು ನವೆಂಬರ್​ 9ರಂದು ರಾತ್ರಿ 11 ಗಂಟೆಗೆ ನಿಧನರಾದರು ಎಂದು ಹೇಳಲು ವಿಷಾಧಿಸುತ್ತೇನೆ” ಎಂದು ತಿಳಿಸಿದ್ದಾರೆ.

ಪಾರ್ಥಿವ ಶರೀರವನ್ನು ಚೆನ್ನೈನ ರಾಂಪುರದಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗಿದೆ. ಅಂತ್ಯಕ್ರಿಯೆ ನ.11ರಂದು ಬೆಳಗ್ಗೆ ನಡೆದಿದೆ.
ದೆಹಲಿಯ ದಕ್ಷಿಣ ಭಾರತ್​ ನಾಟಕ ಸಭಾದಲ್ಲಿ ಸಕ್ರಿಯರಾಗಿದ್ದ ಗಣೇಶನ್​, ಭಾರತೀಯ ವಾಯುಸೇನೆ ಹುದ್ದೆ ತೊರೆದು ತಮಿಳು ಚಿತ್ರರಂಗ ಪ್ರವೇಶಿಸಿದ್ದರು. 1976ರಲ್ಲಿ ನಿರ್ದೇಶಕ ಬಾಲಚಂದರ್​ ಅವರ ‘ಪತ್ತಿನ ಪ್ರವೇಶಂ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ಬಾಲಚಂದರ್​ ಅವರೇ ಡೆಲ್ಲಿ ಗಣೇಶ್​ ಎಂದು ಸ್ಟೇಜ್​ ನೇಮ್​ ನೀಡಿದ್ದರು.

ಡೆಲ್ಲಿ ಗಣೇಶ್​ ನಾಲ್ಕು ದಶಕಗಳ ತಮ್ಮ ಸಿನಿಪಯಣದಲ್ಲಿ ತಮಿಳು ಮಾತ್ರವಲ್ಲದೆ ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಸುಮಾರು 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.

Click

https://newsnotout.com/2024/11/railway-engline-and-coach-joining-man-d-nomore-nd/
https://newsnotout.com/2024/11/bjp-kannada-news-viral-news-social-media-hadling-d/
https://newsnotout.com/2024/11/collage-students-beard-issue-kannada-news-govt-college/
https://newsnotout.com/2024/11/husband-and-wife-issue-nomore-kananda-news-shikaripura/
See also  ಬಂಟ್ವಾಳ ಬಿಜೆಪಿ ಶಾಸಕರಿಗೆ ಕಾರು ಡಿಕ್ಕಿ..! ರಾಜೇಶ್ ನಾಯ್ಕ್ ಆಸ್ಪತ್ರೆಗೆ ದಾಖಲು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget