ಕಾಬೂಲ್: ಆಫ್ಘಾನಿಸ್ತಾನ ವಶ ಪಡಿಸಿಕೊಂಡಿರುವ ತಾಲಿಬಾನ್ ಉಗ್ರರು ಕಾಬೂಲ್ ನಲ್ಲಿರುವ ಅಮ್ಯೂಸ್ಮೆಂಟ್ ಪಾರ್ಕ್ ವೊಂದಕ್ಕೆ ನುಗ್ಗಿ ಅಲ್ಲಿನ ಮಕ್ಕಳ ಆಟಿಕೆ ಕಾರುಗಳಲ್ಲಿ ಆಟವಾಡುತ್ತಾ ಸಂಭ್ರಮದಿಂದ ಕುಣಿಯುತ್ತಿರುವ ವಿಡಿಯೋ ವೈರಲ್ ಆಗಿದೆ. ಕಾಬೂಲ್ ನಲ್ಲಿರುವ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿಗಾರರೊಬ್ಬರು ಇದನ್ನು ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದಾರೆ. ಉಗ್ರರು ಬಂದೂಕು ಹಿಡಿದು ಮಕ್ಕಳ ಆಟಿಕೆ ಕಾರುಗಳನ್ನು ಚಲಾಯಿಸುತ್ತಾ ಹರ್ಷ ವ್ಯಕ್ತಪಡಿಸುತ್ತಿರುವ ವಿಡಿಯೋ ಇದಾಗಿದೆ.