ಕರಾವಳಿಸುಳ್ಯ

ಕೆ.ವಿ.ಜಿ.ಪಾಲಿಟೆಕ್ನಿಕ್ ನ ಐ.ಎಸ್.ಟಿ.ಇ ವಿದ್ಯಾರ್ಥಿ ಘಟಕದಿಂದ ಪ್ರತಿಭಾ ಶೋಧ ಮತ್ತು ರಸಪ್ರಶ್ನೆ ಕಾರ್ಯಕ್ರಮ

465

ನ್ಯೂಸ್ ನಾಟೌಟ್ : ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನ ಐ.ಎಸ್.ಟಿ.ಇ ವಿದ್ಯಾರ್ಥಿ ಘಟಕದ ವತಿಯಿಂದ ಸದಸ್ಯರಿಗೆ ಗುರುತು ಚೀಟಿ ವಿತರಣೆ, ರಸಪ್ರಶ್ನೆ ಹಾಗೂ ಪ್ರತಿಭಾ ಶೋಧ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾಲೇಜಿನ ಪ್ರಾಂಶುಪಾಲ ಜಯಪ್ರಕಾಶ. ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ಶ್ರೀಧರ ಎಂ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಅಕಾಡೆಮಿಕ್ ಡೀನ್ ಚಂದ್ರಶೇಖರ್ ಎಂ.ಎನ್. ವಿದ್ಯಾರ್ಥಿ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಿದರು. ವಿದ್ಯಾರ್ಥಿ ಘಟಕದ ನಾಯಕಿ ಅಂಕಿತಾ ವೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭಾಕಾರ್ಯಕ್ರಮದ ನಂತರ ರಸಪ್ರಶ್ನೆ ಹಾಗೂ ಪ್ರತಿಭಾ ಪ್ರದರ್ಶನ ನಡೆಯಿತು. ಐ.ಎಸ್.ಟಿ.ಇ ವಿದ್ಯಾರ್ಥಿ ಘಟಕದ ಸಂಚಾಲಕ ಫಾಲಚಂದ್ರ ವೈ.ವಿ‌. ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಆಂತರಿಕ ಗುಣಮಟ್ಟ ಖಾತರಿ ಕೋಶ(ಐ.ಕ್ಯು.ಎ.ಸಿ) ದ ಸಂಚಾಲಕ ವಿವೇಕ್ ಪಿ. ವಂದಿಸಿದರು.

See also  ಪಾಣೆಮಂಗಳೂರಿನ ನಿಷೇಧಿತ ಹಳೆಯ ಸೇತುವೆಯಲ್ಲಿ ನುಗ್ಗಿಸಿ ಸಿಕ್ಕಿಹಾಕಿಕೊಂಡ ವಾಹನ, ಚಾಲಕನ ಹುಚ್ಚಾಟಕ್ಕೆ ತಲೆ ಮೇಲಾದ ಟೆಂಪೋ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget