ಕರಾವಳಿಕೊಡಗುವೈರಲ್ ನ್ಯೂಸ್ಸುಳ್ಯ

ಕೊಡಗು: ನಾಳೆ (ಸೆ.17) ಕಾವೇರಿ ತೀರ್ಥೋದ್ಭವ, ಎಷ್ಟು ಹೊತ್ತಿಗೆ ಮುಹೂರ್ತ..? ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ಕೊಡಗಿನ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗಧಿಯಾಗಿದೆ. ಅದರಂತೆ ತಲಕಾವೇರಿಯಲ್ಲಿರುವ ತೀರ್ಥ ಕುಂಡದಲ್ಲಿ ಅ.17 ರಂದು ಗುರುವಾರ ಬೆಳಗ್ಗೆ 7:40 ಕ್ಕೆ ಸಲ್ಲುವ ತುಲಾ ಲಗ್ನದಲ್ಲಿ ಕಾವೇರಿ ತೀರ್ಥ ರೂಪದಲ್ಲಿ ಉಗಮವಾಗಲಿದೆ ಎಂದು ವರದಿ ತಿಳಿಸಿದೆ.

ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿಯ ಬ್ರಹ್ಮಕುಂಡದಲ್ಲಿ ಮಾತೆ ಕಾವೇರಿ ಜಲರೂಪದಲ್ಲಿ ದರ್ಶನ ಕೊಡುತ್ತಾಳೆ ಎಂದು ನಂಬಲಾಗುವ ಪವಿತ್ರ ತೀರ್ಥೋದ್ಭವಕ್ಕೆ ಈಗಾಗಲೇ ‌ಸಿದ್ಧತೆ ನಡೆಸಲಾಗುತ್ತಿದೆ.

ಈ ದೇವತಾ ಕಾರ್ಯದಲ್ಲಿ ಭಾಗವಹಿಸಲು ರಾಜ್ಯದ ನಾನಾ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಅಗಮಿಸುವ ನಿರೀಕ್ಷೆ ಇದೆ ಎನ್ನಲಾಗಿದೆ. ಪ್ರತಿ ವರ್ಷವೂ ತುಲಾ ಮಾಸದಲ್ಲಿ ನಡೆಯುವ ಈ ಜಾತ್ರೆಗೆ ಸೆ.26 ರಿಂದಲೇ ಸಿದ್ಧತೆ ಶುರುವಾಗುತ್ತದೆ. ಅಕ್ಟೋಬರ್‌ ಕಾಲಿಡುತ್ತಿದ್ದಂತೆಯೇ ಭಾಗಮಂಡಲ, ತಲಕಾವೇರಿಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣ ಆಗುತ್ತದೆ.

Click

https://newsnotout.com/2024/09/mangaluru-masjid-issue-vhp-protest-in-bc-road-kannada-news/
https://newsnotout.com/2024/09/darshan-thugudeepa-in-ballary-and-secrete-latter-to-him-from-lawyer/
https://newsnotout.com/2024/09/palestain-flag-in-chikkamagaluru-minor-boys-are-under-police-custody-kannada-news/

Related posts

ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರ ಕಲಿಕೆ ಅಗತ್ಯ : ಡಾ|ಕೆ.ವಿ. ಚಿದಾನಂದ

‘ಸರ್ ಹೆಲ್ಮೆಟ್ ಹಾಕಿಲ್ಲ ಯಾಕೆ?’ ಎಂದು ಕೇಳಿದವಳೇ ಸೀಟ್ ಬೆಲ್ಟ್‌ ಹಾಕಿರ್ಲಿಲ್ಲ..! ಪ್ರಶ್ನೆ ಮಾಡಿ ಪೇಚಿಗೆ ಸಿಲುಕಿದ್ದೇಗೆ ಮಹಿಳೆ? ಇಲ್ಲಿದೆ ವೈರಲ್ ವಿಡಿಯೋ

ಬೆಳ್ತಂಗಡಿ: ನಾಳೆಯಿಂದ (ಜು.7) ಪ್ರವಾಸಿಗರ ನೆಚ್ಚಿನ ತಾಣ ಗಡಾಯಿಕಲ್ಲು ಚಾರಣಕ್ಕೆ ತಾತ್ಕಾಲಿಕ ನಿಷೇಧ, ಅಷ್ಟಕ್ಕೂ ನಿಷೇಧ ಹೇರಿದ್ದು ಏಕೆ ಗೊತ್ತಾ..?