ಕ್ರೈಂದೇಶ-ವಿದೇಶವೈರಲ್ ನ್ಯೂಸ್

ತೈವಾನ್‌ ನಲ್ಲಿ ಪ್ರಬಲ ಭೂಕಂಪ, ನಡುಗಿದ ಕಟ್ಟಡಗಳು..! ಎರಡು ದಿನಗಳೊಳಗೆ 200ಕ್ಕೂ ಹೆಚ್ಚು ಬಾರಿ ಕಂಪಿಸಿದ ಭೂಮಿ..!

ನ್ಯೂಸ್ ನಾಟೌಟ್: ತೈವಾನ್‌ನ ಪೂರ್ವ ನಗರವಾದ ಹುವಾಲಿಯನ್‌ ನಿಂದ 34 ಕಿಮೀ ದೂರದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ದ್ವೀಪದ ಹವಾಮಾನ ಆಡಳಿತವು ತಿಳಿಸಿದೆ.

ಭೂಕಂಪದಿಂದಾಗಿ ರಾಜಧಾನಿ ತೈಪೆ ಎಂಬಲ್ಲಿನ ಕಟ್ಟಡಗಳು ನಡುಗಿವೆ. ಭೂಕಂಪವು 9.7 ಕಿಮೀ ಆಳದಲ್ಲಿ ಸಂಭವಿಸಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹಾನಿಗಳ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.

ಇಲ್ಲಿನ ಪೂರ್ವ ಕರಾವಳಿಯಲ್ಲಿ ಸೋಮವಾರ ರಾತ್ರಿ ಮತ್ತು ಮಂಗಳವಾರ ಮಧ್ಯಾಹ್ನದ ನಡುವೆ ಸುಮಾರು 200ಕ್ಕೂ ಹೆಚ್ಚು ಬಾರಿ ಭೂಮಿ ಕಂಪಿಸಿದೆ ಎಂದು ತೈವಾನ್ ಕೇಂದ್ರೀಯ ಹವಾಮಾನ ಇಲಾಖೆ ತಿಳಿಸಿದೆ. ಇದೇ ಏಪ್ರಿಲ್ 3 ರಂದು 7.2 ತೀವ್ರತೆಯ ಭೂಕಂಪ ಸಂಭವಿಸಿತ್ತು. ಘಟನೆಯಲ್ಲಿ ಕನಿಷ್ಠ 14 ಜನರು ಮೃತಪಟ್ಟಿದ್ದರು.
ಇತ್ತೀಚೆಗೆ ಜಪಾನ್‌ ನ ದಕ್ಷಿಣ ಕರಾವಳಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿ ಸಾವು-ನೋವುಗಳು ಉಂಟಾಗಿದ್ದವು. ರಿಕ್ಟರ್‌ ಮಾಪಕದಲ್ಲಿ 7.1 ತೀವ್ರತೆಯ ದಾಖಲಾಗಿತ್ತು.

Click

https://newsnotout.com/2024/08/case-on-constable-and-he-selected-for-cm-medal-award-in-independence-day/
https://newsnotout.com/2024/08/guarantee-scheme-ddd-fkarnataka-govt-bpl-viral-news/
https://newsnotout.com/2024/08/doctor-issue-misbehaviour-west-bengal-kannada-news-cm/
https://newsnotout.com/2024/08/atal-bihari-vajpayee-remembering-kannada-news-narendra-modi-and-others/

Related posts

ಪ್ರವಾಹದ ಮಧ್ಯೆಯೇ ಆನ್​​ಲೈನ್​ ಮದುವೆ..! ವಧುವಿನ ಮನೆಗೆ ತೆರಳಲಾಗದೆ ಒದ್ದಾಡಿದ ವರ!

ಸರ್ಕಾರಿ ಬಸ್ ಡಿಕ್ಕಿಯಾಗಿ ಪಾದಾಚಾರಿ ಸ್ಥಳದಲ್ಲೇ ಸಾವು..! ಮಂತ್ರಾಲಯಕ್ಕೆ ಹೊರಟಿದ್ದ ಬಸ್ ಚಾಲಕ ಪರಾರಿ..!

ಏನಿದು ಡಾ.ವಿಷ್ಣುವರ್ಧನ್ ಪುಣ್ಯಭೂಮಿ ಉಳಿವಿನ ಹೋರಾಟ..? ಕಿಚ್ಚ ಸುದೀಪ್ ಬೆಂಬಲ ಸೂಚಿಸಿದ್ದೇಕೆ..?