ಕ್ರೈಂರಾಜ್ಯವೈರಲ್ ನ್ಯೂಸ್

ತಹಶೀಲ್ದಾರ್‌ ಕಚೇರಿಯೊಳಗೆ ಸಿಬ್ಬಂದಿ ಆತ್ಮಹತ್ಯೆ..! ಸಚಿವೆಯ ಬಳಿಯೂ ಅಳಲು ತೋಡಿಕೊಂಡಿದ್ದ ಈತನಿಗೆ ಪರಿಹಾರವೇ ಸಿಕ್ಕಿರಲಿಲ್ಲ..!

80
Spread the love

ನ್ಯೂಸ್ ನಾಟೌಟ್: ಬೆಳಗಾವಿಯ ತಹಸೀಲ್ದಾರ್‌ ಕಚೇರಿಯೊಳಗೆ ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು(ನ.5) ನಡೆದಿದೆ.

ಏಕಾಏಕಿ ವರ್ಗಾವಣೆ ಮಾಡಿದ ಹಿನ್ನೆಲೆ, ತಹಶೀಲ್ದಾರ್ ಕಚೇರಿಯ ದ್ವೀತಿಯ ದರ್ಜೆ ಗುಮಾಸ್ತ ರುದ್ರಣ್ಣ ಯಡವಣ್ಣ ಎಂಬವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿಗಳು, ನಿನ್ನೆ ಬೆಳಗಾವಿ ತಹಶೀಲ್ದಾರ್‌ ಕಚೇರಿಯಿಂದ ಸವದತ್ತಿ ಎಲ್ಲಮ್ಮ ಆಡಳಿತ ಕಚೇರಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರು.

ವರ್ಗಾವಣೆ ರದ್ದುಗೊಳಿಸುವಂತೆ ತಹಶೀಲ್ದಾರ್‌ ಹಾಗೂ ಡಿಸಿ ಮೊಹಮ್ಮದ್ ರೋಷನ್ ಗೆ ರುದ್ರಣ್ಣ ಮನವಿ ಮಾಡಿದ್ದರು. ಈ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಚೇರಿಗೂ ಹೋಗಿ ಅಳಲು ತೋಡಿಕೊಂಡಿದ್ದರು. ಈ ಸಂಬಂಧ ಸೋಷಿಯಲ್‌ ಮೀಡಿಯಾದಲ್ಲಿ ಕೆಲವೊಂದು ಪೋಸ್ಟ್‌ ಕೂಡ ಹಾಕಿದ್ದರು.
ನಾನು ಜೀವ ಕಳೆದುಕೊಂಡರೆ ಅದಕ್ಕೆ ತಹಶೀಲ್ದಾರ್‌ ಹಾಗೂ ಡಿಸಿ ಕಾರಣ ಎಂದು ವಾಟ್ಸಪ್‌ ನಲ್ಲಿ ಪೋಸ್ಟ್‌ ಕೂಡ ಮಾಡಿದ್ದರು ಎನ್ನಲಾಗಿದೆ. ಘಟನೆ ನಂತರ ಪೋಸ್ಟ್‌ ಡಿಲೀಟ್‌ ಆಗಿದ್ದು ಚರ್ಚೆಗೆ ಗ್ರಾಸವಾಗಿದೆ. ಸ್ಥಳಕ್ಕೆ ಡಿಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Click

https://newsnotout.com/2024/11/police-constable-kannada-news-viral-news-marriage-man/
https://newsnotout.com/2024/11/kannada-news-child-nomore-inside-the-car-which-was-locked/
https://newsnotout.com/2024/11/hd-kumaraswami-kannada-news-hd-kumaraswami-viral-news/
See also  ಡ್ರಗ್ಸ್‌ ಖರೀದಿಸಲು ಅಪ್ಪ-ಅಮ್ಮ ಮಕ್ಕಳನ್ನೇ ಮಾರಿದರೇ..? ಮಕ್ಕಳಿಗೂ ರೇಟ್ ಫಿಕ್ಸ್ ಮಾಡಿದ್ರಾ ಹೆತ್ತವರು? ಇಲ್ಲಿದೆ ಭಯಾನಕ ಸ್ಟೋರಿ..!
  Ad Widget   Ad Widget   Ad Widget   Ad Widget   Ad Widget   Ad Widget