ದೇಶ-ಪ್ರಪಂಚವಿಡಿಯೋವೈರಲ್ ನ್ಯೂಸ್

ಟೇಬಲ್ ಕ್ಲೋತ್ ಸಮೇತ ರ್‍ಯಾಂಪ್‌ ವಾಕ್‌ ಮಾಡಿದ ಬೆಡಗಿ- ವಿಡಿಯೋ ವೈರಲ್‌

ನ್ಯೂಸ್ ನಾಟೌಟ್: ಫ್ಯಾಶನ್‌ನಲ್ಲಿ ಎಂದೂ ಹೊಸತನ ಇರಬೇಕು ಅಂದರೆ ಟ್ರೆಂಡ್ ಗಳ ಹಿಂದೆ ಓಡುವ ಜಗತ್ತಿನಲ್ಲಿ ಆಗಾಗ ವಿಚಿತ್ರ ಉಡುಗೆಗಳಿಂದಲೇ ಹಲವರು ಸುದ್ದಿಯಲ್ಲಿರುತ್ತಾರೆ. ಸುದ್ದಿಯಾಗಲೆಂದೇ ಮಾಡುವ ಅಂತಹ ವಿಚಿತ್ರ ಘಟನೆಗಳ ಸಾಲಿಗೆ ಫ್ಯಾಶನ್‌ ಶೋಗಳಲ್ಲಿ ಚಿತ್ರ-ವಿಚಿತ್ರ ಉಡುಪುಗಳ ಧರಿಸಿ ಮಾಡಿದ ಬೆಡಗಿಯ ನಡಿಗೆ ಹೊಸ ಟ್ರೆಂಡ್‌ ಆಗಿದೆ.
ಟೇಬಲ್‌ ಕ್ಲೋತ್ (Table cloth) ಸಮೇತ ರೂಪದರ್ಶಿ ರ್‍ಯಾಂಪ್‌ ವಾಕ್‌ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ವೀಡಿಯೋದಲ್ಲಿ, ರೂಪದರ್ಶಿ ಸಾರಾ ಡಾಲ್‌ ಅತಿಥಿಗಳೊಂದಿಗೆ ಊಟಕ್ಕೆ ಕೂತಿರುತ್ತಾರೆ. ರೌಂಡ್‌ ಟೇಬಲ್‌ನಲ್ಲಿ ಆಕೆಯ ಅಕ್ಕ-ಪಕ್ಕ ಕೂತಿರುವವರು ಅರ್ಧ ಊಟ ಮುಗಿಸಿರುತ್ತಾರೆ. ಸಾರಾ ಹಾಕಿರುವ ಉಡುಪು ಟೇಬಲ್‌ ಕ್ಲೋತ್ ಜೊತೆ ಸೇರಿರುತ್ತದೆ.

https://www.instagram.com/reel/CoIQhhmAC3O/?utm_source=ig_web_button_share_sheet


ಮೇಜಿನಲ್ಲಿ ಭಕ್ಷ್ಯ ಭೋಜನಗಳನ್ನು ಇಟ್ಟಿರುವಂತೆಯೇ ಆಕೆ ಟೇಬಲ್‌ ಕ್ಲೋತ್ ಸಮೇತ ರ್‍ಯಾಂಪ್‌ ವಾಕ್‌ ಮಾಡುತ್ತಾರೆ. ಈ ವೀಡಿಯೋ ವೀಕ್ಷಿಸಿದ ಕೆಲವರು ಇದನ್ನು ಪ್ರಶಂಸಿದರೆ, ಇನ್ನು ಹಲವರು ಆಹಾರವನ್ನು ವ್ಯರ್ಥ ಮಾಡಿದ್ದಕ್ಕಾಗಿ ಮತ್ತು ಅಗೌರವ ತೋರಿದ್ದಕ್ಕಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Related posts

ನೈಟಿ ಹಾಕಿಕೊಂಡು ಬಂದು ದುಬಾರಿ ಶೂ ಕದಿಯೋ ವಿಚಿತ್ರ ಕಳ್ಳ..! ಇಲ್ಲಿದೆ ಸಿಸಿ ಟಿವಿ ದೃಶ್ಯ

ಮುಲಾಯಂ ಸಿಂಗ್ ಯಾದವ್ ಸೊಸೆ ಬಿಜೆಪಿಗೆ ಸೇರ್ಪಡೆ..!

Madikeri love story: ಮಡಿಕೇರಿ:ಪ್ರಿಯಕರನನ್ನು ಮನೆಗೆ ಕರೆಸಿ ಬಿಸಿ ನೀರು ಎರಚಿದ ಯುವತಿ ಮನೆಯವರು..! ಸಾಧಿಕ್ ಸ್ಥಿತಿ ಗಂಭೀರ..!