ದುಬೈ:ದುಬೈ: ಕಳಪೆ ಬ್ಯಾಟಿಂಗ್, ಬೌಲಿಂಗ್‌ಗೆ ಬೆಲೆ ತೆತ್ತ ಟೀಂ ಇಂಡಿಯಾ ವಿಶ್ವಕಪ್ ಟಿ20 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಹೀನಾಯ ಸೋಲು ಕಂಡಿದೆ, ಇದೇ ಮೊದಲ ಬಾರಿಗೆ ಪಾಕ್ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಜಯಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ವಿರಾಟ್ ಕೊಹ್ಲಿ 57 ರನ್ ನೆರವಿನಿಂದ 20 ಓವರ್‌ಗೆ 7 ವಿಕೆಟ್ ಗೆ 151 ರನ್‌ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ಮೊಹಮ್ಮದ್ ರಿಜ್ವಾನ್ ಅಜೇಯ 78 ರನ್ ಹಾಗೂ ಬಾಬರ್ ಅಜಂ ಅಜೇಯ 68 ರನ್ ಬ್ಯಾಟಿಂಗ್ ನೆರವಿನಿಂದ 17.5 ಓವರ್‌ಗೆ ವಿಕೆಟ್ ನಷ್ಟವಿಲ್ಲದೆ 152 ರನ್‌ಗಳಿಸಿ ಗೆಲುವಿನ ನಗು ಬೀರಿತು