ದೇಶ-ಪ್ರಪಂಚವೈರಲ್ ನ್ಯೂಸ್

ಟೀ ಮಾರುತ್ತಿರುವ ಉತ್ತರ ಪ್ರದೇಶ CM ಯೋಗಿ ಆದಿತ್ಯನಾಥ್ ಸಹೋದರಿ..! ಒಂದು ರಾಜ್ಯದ ಮುಖ್ಯಮಂತ್ರಿಯ ಸಹೋದರಿಗೆ ಇದೇನಿದು ಸಂಕಷ್ಟ..?

ನ್ಯೂಸ್ ನಾಟೌಟ್: ಸಿನಿಮಾಗಳಲ್ಲಿ ಅಣ್ಣ ತನ್ನ ತಂಗಿಗಾಗಿ ತನ್ನೆಲ್ಲ ಸಂಪತ್ತನ್ನು ಧಾರೆ ಎರೆಯುವುದನ್ನು ನೋಡಿದ್ದೇವೆ. ಅಣ್ಣ-ತಂಗಿಯ ಪ್ರೀತಿಯ ಬಂಧನದ ಸಿನಿಮಾಗಳು ಇಂದಿಗೂ ಸೂಪರ್ ಹಿಟ್ ಆಗಿವೆ. ನಿಜ ಜೀವನದಲ್ಲೂ ಹಲವು ಅಣ್ಣ-ತಂಗಿಯ ಪ್ರೀತಿಯ ಕಥೆಗಳನ್ನು ಕೇಳಿದ್ದೇವೆ. ಆದರೆ ಇಲ್ಲಿ ಅಣ್ಣ ಒಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದರೂ ತಂಗಿ ಮಾತ್ರ ಅದೇ ರಾಜ್ಯದಲ್ಲಿ ಜೀವನೋಪಾಯಕ್ಕಾಗಿ ಇನ್ನೂ ಟೀ ಮಾರುತ್ತಿದ್ದಾರೆ.

ಹೌದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಗೋರಖ್ ಪುರದ ಸಿಂಹ ಎಂದೇ ಖ್ಯಾತಿ ಪಡೆದಿರುವ ಯೋಗಿ ಆದಿತ್ಯನಾಥ್‌ ಸಹೋದರಿ ಉತ್ತರ ಪ್ರದೇಶದಲ್ಲಿ ಸಣ್ಣ ಟೀ ಅಂಗಡಿಯನ್ನು ನಡೆಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಎಷ್ಟೋ ಜನರಿಗೆ ಅಣ್ಣ ಸಿಎಂ ಆಗಿದ್ದರೂ ತಂಗಿ ಯಾಕೆ ಟೀಂ ಅಂಗಡಿಯನ್ನು ನಡೆಸಿಕೊಂಡು ಇಷ್ಟು ಕಷ್ಟ ಪಡುತ್ತಿದ್ದಾರೆ ಅನ್ನುವ ಪ್ರಶ್ನೆ ಎದ್ದಿದೆ.

ಸಿಎಂ ಯೋಗಿ ಆದಿತ್ಯನಾಥ್ ಸಹೋದರಿಯ ಹೆಸರು ಶಶಿ ಪಾಯಲ್. ಇವರು ಉತ್ತರಾಖಂಡದ ಪೌರಿ ಜಿಲ್ಲೆಯ ಮಾತಾ ಭವನೇಶ್ವರಿ ದೇವಸ್ಥಾನದ ಬಳಿ ಸಣ್ಣ ಟೀ ಅಂಗಡಿ ಇಟ್ಟುಕೊಂಡಿದ್ದಾರೆ. ಈಕೆ ಟೀ ಅಂಗಡಿಯನ್ನು ನಡೆಸುತ್ತಿರುವುದನ್ನು ಹಲವು ಪ್ರವಾಸಿಗರು ಕಂಡು ಅಚ್ಚರಿಗೊಳಗಾಗಿದ್ದಾರೆ. ಸಿಎಂ ತಂಗಿಯಾಗಿ ನೀವು ಏಕೆ ಇಷ್ಟು ಕಷ್ಟಪಡುತ್ತಿದ್ದೀರಾ ಎಂದು ಕೇಳಿದ್ರೆ ಅವರ ಮುಖದಲ್ಲಿ ಸಣ್ಣ ನಗುವೊಂದು ಮೂಡುತ್ತದೆ. ಸದ್ಯ ಈಕೆಯ ವಿಡಿಯೋ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ಯುಪಿ ಮಾಜಿ ಶಾಸಕ ದಿನೇಶ್ ಚೌಧರಿ ಅವರು ಪ್ರದೇಶಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರು ಶಶಿ ಪಾಯಲ್ ಅವರನ್ನು ಮಾತನಾಡಿಸಿದ್ದಾರೆ. ಈ ವೇಳೆ ಅವರು ಶಾಸಕರ ಜೊತೆಗೆ ತಮ್ಮ ಬಾಲ್ಯದ ಅನುಭವ ಹೇಗಿತ್ತು? ಎನ್ನುವುದನ್ನು ಹಂಚಿಕೊಂಡಿದ್ದಾರೆ.

ಫೌರಿಯ ಪಂಚೂರ್ ಗ್ರಾಮದಲ್ಲಿ ಜನಿಸಿದ ಯೋಗಿಗೆ ಏಳು ಮಂದಿ ಒಡಹುಟ್ಟಿದವರಿದ್ದರು. ಇವರಲ್ಲಿ ಶಶಿ ಪಾಯಲ್ ಹಿರಿಯರು. 1994ರಲ್ಲಿ ಯೋಗಿ ಸನ್ಯಾಸ ಸ್ವೀಕರಿಸಿದರು. ಅವರ ತಂಗಿ ಶಶಿ ಕೊತ್ತರ್ ಗ್ರಾಮದ ಪುರಂಸಿಂಗ್ ಅವರನ್ನು ಮದುವೆಯಾಗಿ ಅಲ್ಲಿಯೇ ನೆಲೆಸಿದರು. ಪ್ರತಿ ವರ್ಷ ರಕ್ಷಾಬಂಧನದಂದು ತನ್ನ ಸಹೋದರನಿಗೆ ರಾಖಿ ಕಳುಹಿಸುತ್ತೇನೆ ಎಂದು ಶಶಿ ಹೇಳಿದ್ದಾರೆ. ಯೋಗಿ ಯುಪಿ ಸಿಎಂ ಆದ ನಂತರ ಒಂದೇ ಒಂದು ಬಾರಿ ತಾಯಿಯ ಬಳಿ ಹೋಗಿದ್ದರು. ಆಕೆಯ ಆಶೀರ್ವಾದ ಪಡೆದರು. 28 ವರ್ಷಗಳ ನಂತರ, ಯೋಗಿ ಫೌರಿ ಜಿಲ್ಲೆಯ ತನ್ನ ತಾಯಿಯ ತವರು ಗ್ರಾಮಕ್ಕೆ ಪಂಚೂರಿಗೆ ಬಂದರು. ಸಿಎಂ ಆದಾಗ ಐದು ವರ್ಷ ಅಮ್ಮನ ಬಳಿ ಬಂದು ಆಶೀರ್ವಾದ ಪಡೆದರು. ಬಹಳ ದಿನಗಳ ನಂತರ ಮಗನನ್ನು ನೋಡಿದ ತಾಯಿಯ ಮನದಲ್ಲಿ ಸಂತಸ ಮೂಡಿತು. ಮೇ 2022 ರಲ್ಲಿ, ಯೋಗಿ ತನ್ನ ತಾಯಿಯೊಂದಿಗೆ ಆಶೀರ್ವಾದ ತೆಗೆದುಕೊಳ್ಳುತ್ತಿರುವ ಫೋಟೋಗಳು ವೈರಲ್ ಆಗಿದ್ದವು.

Related posts

ವೈದ್ಯೆಯ ಅತ್ಯಾಚಾರ ಕೊಲೆ ಖಂಡಿಸಿ 12 ಗಂಟೆಗಳ ಕಾಲ ಬಂಗಾಳ ಬಂದ್..! ಮುಖ್ಯಮಂತ್ರಿಯಿಂದಲೇ ನ್ಯಾಯಕ್ಕಾಗಿ ಪ್ರತಿಭಟನೆ..?

ಗುಜರಾತ್ ನ ಕಛ್ ನಲ್ಲಿ 3.2 ತೀವ್ರತೆಯ ಭೂಕಂಪನ..! ಭಾರತಕ್ಕೆ ಭೂಕಂಪದ ಆತಂಕ..!

ಏನಿದು ಪೊಲೀಸ್ ಠಾಣೆಯಲ್ಲಿ ಸೀಮಂತ..? ಮಹಿಳಾ ಪೊಲೀಸ್ ಸಿಬ್ಬಂದಿಗಳಿಗೆ ಮಡಿಲಕ್ಕಿ ತುಂಬಿದ ಇನ್ಸ್ ಪೆಕ್ಟರ್