ಕರಾವಳಿಕೊಡಗುರಾಜಕೀಯಸುಳ್ಯ

ದೆಹಲಿ:ಸಂಪಾಜೆ ಗ್ರಾಮಕ್ಕೆ ವಿಶೇಷ ಅನುದಾನ ನೀಡಲು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಟಿ.ಎಂ. ಶಹೀದ್ ತೆಕ್ಕಿಲ್

ನ್ಯೂಸ್ ನಾಟೌಟ್ : ಕಳೆದ ಬಾರಿ ಭಾರೀ ಮಳೆಯಿಂದ ಸಂಪಾಜೆ ಗ್ರಾಮದ ವ್ಯಾಪ್ತಿಯಲ್ಲಿ ಆದ ನೆರೆ ಪ್ರವಾಹ ಪೀಡಿತ ಪ್ರದೇಶಕ್ಕೆ ವಿ‍ಶೇಷ ಅನುದಾನ ನೀಡಬೇಕಾಗಿ ಕಾಂಗ್ರೆಸ್ ವಕ್ತಾರ ಟಿ . ಎಂ.ಶಹೀದ್ ಮುಖ್ಯಮಂತ್ರಿ ಸಿದ್ದರಾಮಯ್ಯರವರ ದೆಹಲಿಯ ರಾಜಭವನಕ್ಕೆ ಭೇಟಿಯಾಗಿ ಮನವಿ ಮಾಡಿದ್ದಾರೆ.

ಕಳೆದ ವರ್ಷ ಸಂಪಾಜೆ ,ಕಲ್ಲುಗುಂಡಿಯ ಪ್ರದೇಶದಲ್ಲಿ ನೆರೆ, ಮಳೆ, ಜಲ ಪ್ರಳಯ,ಭೂಕಂಪದಿಂದಾಗಿ ಅತೀ ಹೆಚ್ಚು ಹಾನಿಗೊಳಗಾಗಿದೆ.ಜನರು ತಮ್ಮ ಜೀವನೋಪಾಯಕ್ಕಾಗಿ ಮಾಡಿದ ಕೃಷಿ ನೀರಲ್ಲಿ ಕೊಚ್ಚಿ ಹೋಗಿ ಸಂಪೂರ್ಣವಾಗಿ ನಾಶವಾಯಿತು. ಜನರು ತಮ್ಮ ಮನೆಗಳನ್ನು ಕಳೆದುಕೊಂಡು, ಗಂಜಿ ಕೇಂದ್ರದಲ್ಲಿ ಇರಬೇಕಾಯಿತು . ಹೀಗಾಗಿ ಟಿ.ಎಂ.ಶಹೀದ್ ಅವರು ಸಂಪಾಜೆ ಗ್ರಾಮಕ್ಕೆ ವಿಶೇಷ ಅನುದಾನಕ್ಕೆ ಮನವಿ ಮಾಡಿದರು. 2013 ರಲ್ಲಿ ನೀಡಿದ ಅನುದಾನದ ಬಗ್ಗೆ ಪರಿಶೀಲಿಸಿ ತಕ್ಷಣ ವಿಶೇಷ ಅನುದಾನ ನೀಡಲು ಸಂಬಂಧ ಪಟ್ಟವರಿಗೆ ಆದೇಶಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಭರವಸೆ ನೀಡಿದ್ದಾರೆ.

Related posts

ಸುಳ್ಯ: ಮದುವೆ ಮನೆಗೆ ಬಂದ ಮಾಜಿ ಪತ್ನಿಗೆ ಚೂರಿಯಿಂದ ಇರಿಯಲು ಹೋದ ಪತಿ..!

ಸುಳ್ಯ: ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಗುದ್ದಿ ಕಾರು ಸಹಿತ ಪರಾರಿಯಾದ ಚಾಲಕ , ದಿನೇ ದಿನೇ ಹೆಚ್ಚುತ್ತಿದೆ ಹಿಟ್ ಅಂಡ್ ರನ್ ಕೇಸ್ ..!

ಸಚಿವ ಅಂಗಾರರೇ ಕೂಡಲೇ ಗೋಳಿತೊಟ್ಟು- ಕೊಕ್ಕಡ ರಸ್ತೆ ಸರಿಪಡಿಸಿ, ಜನರ ಜೀವ ಉಳಿಸಿ, ನ್ಯೂಸ್ ನಾಟೌಟ್ ಕಳಕಳಿ