ದೇಶ-ವಿದೇಶರಾಜ್ಯವೈರಲ್ ನ್ಯೂಸ್

ಸ್ವಿಗ್ಗಿ ಮತ್ತು ಜೊಮ್ಯಾಟೋದಲ್ಲಿ ಇನ್ನು ಮುಂದೆ ಮನೆ ಬಾಗಿಲಿಗೆ ಮದ್ಯ ಆರ್ಡರ್ ಮಾಡಬಹುದು..! ಯಾವ-ಯಾವ ರಾಜ್ಯಗಳಲ್ಲಿ ಜಾರಿ..?

ನ್ಯೂಸ್‌ ನಾಟೌಟ್‌: ಮನೆಯಲ್ಲಿ ಕುಳಿತು ತಿಂಡಿ ಊಟ ಆರ್ಡರ್ ಮಾಡಿದಂತೆ ಇನ್ನು ಬಿಯರ್‌, ವೈನ್‌ ಸೇರಿ ಯಾವುದೇ ಮದ್ಯದ ಬಾಟಲಿಗಳನ್ನು ಸ್ವಿಗಿ ಹಾಗೂ ಜೊಮ್ಯಾಟೋದಲ್ಲಿ ಆರ್ಡರ್‌ ಮಾಡಬಹುದು. ನೀವು ಆರ್ಡರ್‌ ಮಾಡಿದ ಮಧ್ಯ ನಿಮ್ಮ ಮನೆಯ ಬಾಗಿಲಿಗೆ ಕೆಲವೇ ಕ್ಷಣಗಳಲ್ಲಿ ಲಭ್ಯವಾಗುವಂತೆ ಈ ಸಂಸ್ಥೆಗಳು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ.

ಇನ್ನೇನು ಕೆಲವೇ ದಿನಗಳಲ್ಲಿ ಮದ್ಯದ ಬಾಟಲ್‌ಗಳು ಸಹ ಹೋಮ್‌ ಡಿಲಿವರಿ ಆಗಲಿವೆ.ಈಗ ದೆಹಲಿ, ಪಂಜಾಬ್, ಹರಿಯಾಣ, ಕೇರಳ, ಕರ್ನಾಟಕ, ಗೋವಾ, ತಮಿಳುನಾಡು ರಾಜ್ಯಗಳಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ನಡೆಸಲು ಉದ್ದೇಶಿಸಲಾಗಿದೆ. ಮದ್ಯ ತಯಾರಿಕೆಯ ದೈತ್ಯ ಕಿಂಗ್‌ ಫಿಶರ್ ಹಾಗೂ ಎಬಿ ಇನ್‌ವೆಬ್ ಸೇರಿ, ಹಲವು ಕಂಪನಿಗಳು ಈ ಯೋಜನೆಯೊಂದಿಗೆ ಕೈ ಜೋಡಿಸಲು ಮುಂದೆ ಬಂದಿವೆ.

ಈ ಯೋಜನೆಯಡಿಯಲ್ಲಿ ಆರಂಭದಲ್ಲಿ ಬಿಯರ್‌, ವೈನ್‌ ಹಾಗೂ ಕಡಿಮೆ ಪ್ರಮಾಣದ ಅಲ್ಕೋ ಹಾಲ್‌ ವಿತರಿಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.ಈ ಯೋಜನೆಯನ್ನು ಆರಂಭಿಸಲು ಸರ್ಕಾರದ ಅನುಮತಿಯ ಅವಶ್ಯಕತೆ ಇದೆ. ಹೀಗಾಗಿ ಕಂಪನಿಗಳು ಕೇಂದ್ರ ಸರ್ಕಾರದ ನಿಲುವನ್ನು ಕಾಯ್ದು ನೋಡುತ್ತಿವೆ ಎಂದು ಮದ್ಯ ಉದ್ಯಮದ ಮೂಲಗಳನ್ನು ಉಲ್ಲೇಖಿಸಿ ಈ ಮಾಹಿತಿ ಬೆಳಕಿಗೆ ಬಂದಿದೆ.

Related posts

ಸಂಗಾತಿಯನ್ನು ಕೊಂದು ಕತ್ತರಿಸಿ ಕುಕ್ಕರ್‌ನಲ್ಲಿ ಬೇಯಿಸಿದ…!, ಮುಂಬಯಿಯಲ್ಲಿ ಶ್ರದ್ಧಾ ವಾಲ್ಕರ್‌ ಮಾದರಿಯ ಭೀಕರ ಕೊಲೆ ಪ್ರಕರಣ

‘ಫೈಸ್ಟ್‌ ನೈಟ್‌’ ನಲ್ಲಿ ಮಂಚದ ಮೇಲೆ ನಾಚುತ್ತಾ ಕುಳಿತಿದ್ದ ವಧುವಿನ ಬಳಿ ಆಧಾರ್ ಕಾರ್ಡ್ ಕೇಳಿದ್ದೇಕೆ ಆತ..! ವರನ ದೂರಿನನ್ವಯ 7 ಜನರ ವಿರುದ್ಧ ಎಫ್.ಐ.ಆರ್..!

ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನ ಪ್ರವಾಸ..! ಹಾಜರಾತಿ ಹೆಚ್ಚಿಸಲು ವಿನೂತನ ಪ್ರಯತ್ನ