ವೈರಲ್ ನ್ಯೂಸ್

ದೀಪಾವಳಿ: ಈ ಸ್ವೀಟ್‌ ಗೆ ಬರೋಬ್ಬರಿ 21000 ರೂ.? ಆ ಸ್ವೀಟ್ ಯಾವುದು? ಚಿನ್ನದ ಬೆಲೆಯ ಸ್ವೀಟ್ ನ ವಿಶೇಷತೆಗಳೇನು?

256

ನ್ಯೂಸ್‌ ನಾಟೌಟ್‌: ದೀಪಾವಳಿಗೆ ಸಿಹಿ ತಿಂಡಿಯ ಅಂಗಡಿಗಳು ಹಬ್ಬಕ್ಕಾಗಿ ವಿಶೇಷ ಸ್ವೀಟ್‌ ಬಾಕ್ಸ್‌ ಗಳನ್ನು ತಯಾರಿ ಮಾಡುವುದು ಸಹಜ, ಆದರೆ ಕೆಲವೊಮ್ಮೆ ಅವುಗಳ ಸಿಹಿಗೆ ಇನ್ನು ಕೆಲವೊಮ್ಮೆ ಅವುಗಳ ಬೆಲೆಗೆ ಸಿಹಿ ತಿಂಡಿಗಳು ಸುದ್ದಿಯಾಗುತ್ತವೆ.
ಇಲ್ಲೊಂದು ಸಿಹಿ ಅಂಗಡಿಯಲ್ಲಿ ಬಂದಿರುವ ವಿಶೇಷ ಸ್ವೀಟ್‌ ಗೆ ಭಾರೀ ಬೇಡಿಕೆಯಿದೆ. ಆದರೆ‌ ಅದನ್ನು ಒಂದು ಕೆ.ಜಿ. ಖರೀದಿಸಲು ಹೋಗುವಾಗ ಸಾವಿರ ಸಲಿ ಯೋಚಿಸಬೇಕು. ಏಕೆಂದರೆ ಈ ಸ್ವೀಟ್‌ ನ ಒಂದು ಕೆಜಿಯ ಬೆಲೆ ಬರೋಬ್ಬರಿ 21 ಸಾವಿರ.!
ಅಹಮದಾಬಾದ್‌ ನಲ್ಲಿ ʼ’ಸ್ವರ್ಣ ಮುದ್ರಾ’ ಸ್ವೀಟ್‌ ನ ಒಂದು ಕೆಜಿಯ ಬೆಲೆ 21,000 ರೂ ಬೆಲೆ ಹೊಂದಿದೆ. ‘ಸ್ವರ್ಣ ಮುದ್ರಾ’ ಹೆಸರಿನ ಸಿಹಿತಿಂಡಿ ಅಹಮದಾಬಾದ್‌ನಲ್ಲಿ ಜನಪ್ರಿಯವಾಗುತ್ತಿದೆ. ದೀಪಾವಳಿ ಹಬ್ಬವಾಗಿರುವುದರಿಂದ ಈ ಸ್ವೀಟ್‌ ಗೆ ಹೆಚ್ಚಿನ ಬೇಡಿಕೆಯಿದೆ.
ಈ ಸ್ವೀಟ್‌ ನ ಮೇಲೆ 24-ಕ್ಯಾರೆಟ್ ಚಿನ್ನದ ಪದರವನ್ನು ಬಳಸಿ ಲೇಯರ್‌ ಮಾಡಲಾಗಿದೆ. ಇದು ʼ’ಸ್ವರ್ಣ ಮುದ್ರಾ’ ಸ್ವೀಟ್‌ ನ ವಿಶೇಷ ಆಕರ್ಷಣೆಯಾಗಿದೆ. ಇದರ ಒಂದು ತುಂಡಿನ ಬೆಲೆ 1,400 ರೂ.ಆಗಿದೆ. ಒಂದು ಕಿಲೋಗ್ರಾಂ ಸ್ವರ್ಣ ಮುದ್ರಾ ಸಿಹಿತಿಂಡಿಯಲ್ಲಿ 15 ತುಂಡುಗಳಿವೆ.
ಇದು ಬಾದಾಮಿ, ಬ್ಲೂಬೆರ್ರಿ, ಪಿಸ್ತಾ ಮತ್ತು ಕ್ರ್ಯಾನ್ಬೆರಿಗಳಂತಹ ವಿವಿಧ ಪದಾರ್ಥಗಳನ್ನು ಒಳಗೊಂಡಿದೆ. ಇದನ್ನು ಅಹಮದಾಬಾದ್‌ನ ಗ್ವಾಲಿಯಾ ಎಸ್‌ಬಿಆರ್ ಔಟ್‌ಲೆಟ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ.

ಈ ವರ್ಷ ಸ್ವರ್ಣ ಮುದ್ರಾ ಸ್ವೀಟ್‌ ನ್ನು ವಿಶೇಷವಾಗಿ ತಯಾರಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸಿಹಿತಿಂಡಿಗಳ ಆರ್ಡರ್ ಪಡೆದು ಅದರಂತೆ ತಯಾರಿ ನಡೆಸುತ್ತಿದ್ದೇವೆ ಎಂದು ರವೀನಾ ತಿಲ್ವಾನಿ ತಿಳಿಸಿದ್ದಾರೆ.

See also  ಡ್ರಗ್‌ ಕೇಸ್‌ ನಲ್ಲಿ ಸ್ಯಾಂಡಲ್ ವುಡ್ ನಟಿಯರಿಗೆ ಮತ್ತೆ ಸಂಕಷ್ಟ..! ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಸಿಸಿಬಿ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget