ನ್ಯೂಸ್ ನಾಟೌಟ್: 8 ವರ್ಷದ ಬಾಲಕನೊಬ್ಬನು ಅಮೆಜಾನ್ ನಲ್ಲಿ 70,000 ಲಾಲಿಪಾಪ್ ಗಳನ್ನು ಆರ್ಡರ್ ಮಾಡಿದ ಆಘಾತಕಾರಿ ಘಟನೆ ಅಮೆರಿಕದಲ್ಲಿ ಬೆಳಕಿಗೆ ಬಂದಿದೆ. ಇದರ ಬೆಲೆ ಬರೋಬ್ಬರಿ 3.3 ಲಕ್ಷ ರೂಪಾಯಿ ಆಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಗುವಿನ ತಾಯಿ ವಿಷಯ ಹಂಚಿಕೊಂಡಿದ್ದಾರೆ.
ಮಗುವು ಆನ್ಲೈನ್ ನಲ್ಲಿ ಲಾಲಿಪಾಪ್ ಆರ್ಡರ್ ಮಾಡಿರುವುದೇ ತಾಯಿಗೆ ತಿಳಿದಿರಲಿಲ್ಲ. ತನ್ನ ಕ್ರೆಡಿಟ್ ಕಾರ್ಡ್‌ನಿಂದ ಭಾರಿ ಮೊತ್ತವನ್ನು ಕಡಿತಗೊಳಿಸಲಾಗಿದೆ ಎಂಬ ಮೆಸೇಜ್ ಬಂದಾಗ ಶಾಕ್ ಆಗಿದೆ. ಅದಲ್ಲದೇ, ಮನೆಯ ಬಾಗಿಲಿಗೆ ಲಾಲಿಪಾಪ್ ಗಳ ಬಾಕ್ಸ್ ಗಳನ್ನು ಡೆಲಿವರಿ ಬಾಯ್ ತಂದಿದ್ದರು, ಇದನ್ನು ಪರಿಶೀಲಿಸಿದಾಗ ತನ್ನ ಮಗ ಆನ್ಲೈನ್ ನಲ್ಲಿ ಲಾಲಿಪಾಪ್ ಆರ್ಡರ್ ಮಾಡಿರುವುದು ತಿಳಿದು ಬಂದಿದೆ. ಅದಲ್ಲದೇ ಈಗಾಗಲೇ ಆರ್ಡರ್ ಮಾಡಿದ್ದ 22 ಬಾಕ್ಸ್ ಗಳು ಮನೆಗೆ ಬಂದು ತಲುಪಿದ್ದು, ಇನ್ನು 8 ಬಾಕ್ಸ್ ಲಾಲಿಪಾಪ್ ಬರಬೇಕಿತ್ತು ಎನ್ನಲಾಗಿದೆ.
ಅದಲ್ಲದೇ ತನ್ನ ಖಾತೆಯಿಂದ 3.3 ಲಕ್ಷ ರೂ ಹಣವು ಕಡಿತ ಆಗಿದ್ದು, ಕೊನೆಗೆ ಇನ್ನು ಡೆಲಿವರಿ ಆಗಬೇಕಿದ್ದ 8 ಬಾಕ್ಸ್ ಗಳನ್ನು ಅಮೆಜಾನ್ ಅವರ ಮನವೊಲಿಸಿ ಹಿಂದಿರುಗಿಸಲು ಮುಂದಾದಾಗ ಅವರು ನಿರಾಕರಿಸಿದ್ದಾರೆ. ಆದರೆ ಆಕೆ ಮಾತ್ರ ಬ್ಯಾಂಕ್ ಹಾಗೂ ಮಾಧ್ಯಮದವರನ್ನು ಸಂಪರ್ಕಿಸಿದ್ದು, ಅಮೆಜಾನ್ ಅವರು ಆಕೆಗೆ ಕರೆ ಮಾಡಿ ಹಣವನ್ನು ಮರುಪಾವತಿಸುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.