ಕರಾವಳಿರಾಜ್ಯವೈರಲ್ ನ್ಯೂಸ್

ಕೇರಳದ ಭೂಕುಸಿತ ಉಲ್ಲೇಖಿಸಿ ಭಯಾನಕ ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ..! ಅಮಾವಾಸ್ಯೆಯ ಬಳಿಕ ಎಲ್ಲವೂ ಬದಲಾಗುತ್ತಾ..?

236

ನ್ಯೂಸ್‌ ನಾಟೌಟ್‌: ಕೋಡಿಮಠದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಆಗಾಗ ತಮ್ಮ ಭವಿಷ್ಯವಾಣಿಗಳ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಭಾರೀ ಮಳೆಯಿಂದ ಅನಾಹುತಗಳು ಸೃಷ್ಟಿಯಾಗುತ್ತಿರುವ ಈ ಸಮಯದಲ್ಲಿ ಸ್ವಾಮೀಜಿ ಬೆಳಗಾವಿಯಲ್ಲಿ ಭಯಾನಕ ಭವಿಷ್ಯ ನುಡಿದಿದ್ದಾರೆ.

ಕೇರಳದಲ್ಲಿ ಭೂಕುಸಿತದ ಬಗ್ಗೆ ಪ್ರತಿಕ್ರಿಯಿಸಿ ನೀಡಿರುವ ಸ್ವಾಮೀಜಿ, ಕಳೆದ ಇಪ್ಪತ್ತು ದಿನದಿಂದ ಹಿಂದೆ ನಾನು ಧಾರವಾಡದಲ್ಲಿ ಈ ತರಾ ಆಗುತ್ತೆ ಅಂತಾ ಹೇಳಿದ್ದೆ ಎಂದು ತಿಳಿಸಿದ್ದಾರೆ. ಮಳೆ ಆಗುತ್ತೆ, ಗುಡ್ಡ ಉರುಳುತ್ತೆ, ಜನರು ಸಾಯುತ್ತಾರೆ.. ರೋಗರುಜಿನಗಳು ಹೆಚ್ಚಾಗುತ್ತವೆ ಅಂತಾ ಹೇಳಿದ್ದೆ, ಭಾರತದಲ್ಲಿ ಅಂತ ಅಷ್ಟೇ ಹೇಳಿರಲಿಲ್ಲ, ಜಾಗತಿಕ ಮಟ್ಟದಲ್ಲಿ ಕೆಲವು ರಾಜ್ಯಗಳು ಮುಳುಗುತ್ತವೆ ಅಂತಾ ಹೇಳಿದ್ದೆ ಎಂದು ಕೋಡಿ ಶ್ರೀಗಳು ಹೇಳಿದ್ದಾರೆ.

ನನ್ನ ಪ್ರಕಾರ ಅಮಾವಾಸ್ಯೆವರೆಗೆ(ಜು.4) ಮಳೆ ಇರುತ್ತೆ ಬಳಿಕ ಬೇರೆ ಭಾಗಕ್ಕೆ ಹೋಗುತ್ತೆ. ಇದು ಕ್ರೋಧಿ ನಾಮ ಸಂವತ್ಸರ, ಕ್ರೋಧ ಅಂದರೆ ಸಿಟ್ಟು ಇದರಲ್ಲಿ ಒಳ್ಳೆಯದು ಕೆಟ್ಟದ್ದು ಎರಡೂ ಇದೆ. ಆ ಪೈಕಿ ಕೆಟ್ಟದ್ದೆ ಜಾಸ್ತಿ ಇರುತ್ತೆ ಎಂದು ವಿವರಿಸಿದರು. ಅಲ್ಲದೇ, ಪ್ರಾಕೃತಿಕ ದೋಷ ಮುಂದುವರೆಯುತ್ತೆ ಎಂದಿದ್ದಾರೆ. ಅಮವಾಸ್ಯೆಯವರೆಗೆ ಒಂದು ಭಾಗಕ್ಕೆ ನಿಲ್ಲುತ್ತೆ ಮತ್ತೊಂದು ಭಾಗದಲ್ಲಿ ಅನಾಹುತಗಳು ಶುರುವಾಗುತ್ತವೆ ಎಂದಿದ್ದಾರೆ. ಮುಂದೆ ಅನಿಷ್ಟ ಜಾಸ್ತಿ ಇದೆ, ಕತ್ತಲು ಬೆಳಕು ಎರಡು ಇರುತ್ತೆ ಅದರಲ್ಲಿ ಕತ್ತಲು ಜಾಸ್ತಿ ಇರುತ್ತೆ ಎಂದು ಭಯಾನಕ ಭವಿಷ್ಯ ನುಡಿದಿದ್ದಾರೆ. ಬರುವ ದಿನಗಳಲ್ಲಿ ರೋಗರುಜಿನ ಸ್ವಲ್ಪ ಜಾಸ್ತಿಯಾಗುತ್ತೆ, ಅಲ್ಪಾಯಸ್ಸು ಕಡಿಮೆ ಆಗುತ್ತೆ, ಜನರು ಮಾನಸಿಕ ಸ್ಥೈರ್ಯ ಕಳೆದುಕೊಳ್ಳುತ್ತಿದ್ದಾರೆ ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

Click

https://newsnotout.com/2024/07/andra-river-flood-flow-with-vessel-kannada-news-viral-news/
https://newsnotout.com/2024/07/bhagamandala-kodagu-temple-kannada-news/
https://newsnotout.com/2024/07/wayanad-kerala-narendra-modi-kannada-news-landslide-video/
https://newsnotout.com/2024/07/charmadi-kannada-news-landslide-kannada-news-rain-dakshina-kannada/
https://newsnotout.com/2024/07/harshita-and-gunda-love-story-husband-issued-viral-news/
https://newsnotout.com/2024/07/state-govt-kannada-news-beer-price-increase-5-times-from-last-15-months/
See also  ಸಂಪಾಜೆ: ಕಮರಿಗೆ ಜಾರಿದ ರಿಕ್ಷಾ, ಗ್ಲಾಸ್ ಸೇರಿದಂತೆ ಮುಂಭಾಗ ಜಖಂ
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget