ಕ್ರೈಂರಾಜ್ಯವೈರಲ್ ನ್ಯೂಸ್

ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು..! 10 ಲಕ್ಷಕ್ಕೆ ‘ಸೆಟಲ್ ಮೆಂಟ್’ ಆರೋಪ..!

252

ನ್ಯೂಸ್ ನಾಟೌಟ್ : ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದ್ದು, 10ಲಕ್ಷ ರೂಪಾಯಿಗೆ ಸೆಟಲ್ ಮೆಂಟ್ ಮಾಡಲು ಮುಂದಾಗಿದ್ದರು ಎಂಬ ಆರೋಪವು ರಾಯಚೂರಿನ ದೇವದುರ್ಗ ತಾಲೂಕಿನ ಸುಲ್ತಾನ್​ಪುರದಲ್ಲಿರುವ ಪ್ರಣವ ಪಂಚಾಕ್ಷರಿ ಗುರುಪೀಠದ ಶ್ರೀಗಳ ವಿರುದ್ಧ ಕೇಳಿಬಂದಿದ್ದು, ಪ್ರಕರಣ ದಾಖಲಾಗಿದೆ.

ನನ್ನ ವಿರುದ್ಧದ ಆರೋಪ ಸುಳ್ಳು ಎಂದ ಶಂಭು ಸೋಮನಾಥ ಶಿವಾಚಾರ್ಯಶ್ರೀಗಳು ತಿಳಿಸಿದ್ದಾರೆ. ಸಂತ್ರಸ್ತೆಗೆ ಒತ್ತಡ ಹಾಕಿ 10 ಲಕ್ಷ ನೀಡಿ ಸೆಟ್ಲ್​ಮೆಂಟ್ ಮಾಡಿರುವ ಆರೋಪವೂ ಸುಳ್ಳು. ಆ ಮಹಿಳೆಯನ್ನು ನಾವೇ ಕೆಲಸದಿಂದ ತೆಗೆದು ಕಳಿಸಿದ್ದೇವೆ ಎಂದು ಶ್ರೀಗಳು ತಿಳಿಸಿದ್ದಾರೆ.

ಪ್ರಣವ ಪಂಚಾಕ್ಷರಿ ಗುರುಪೀಠದ ಶಂಭು ಸೋಮನಾಥ ಶಿವಾಚಾರ್ಯಶ್ರೀ ತಮ್ಮ ಮಠದ ಸೇವೆಗೆ ಬಂದಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮೂಲತಃ ಆಂಧ್ರಪ್ರದೇಶ ಮೂಲದವರಾದ ಸಂತ್ರಸ್ತ ಮಹಿಳೆ ಕಳೆದ 6 ತಿಂಗಳಿಂದ ಅಪ್ರಾಪ್ತ ಪುತ್ರಿ ಜೊತೆ ಮಠದಲ್ಲೇ ವಾಸ್ತವ್ಯ ಹೂಡಿದ್ದರು ಅನ್ನೋ ಮಾಹಿತಿ ಸಿಕ್ಕಿದೆ.

ದೌಜನ್ಯದ ಬಳಿಕ ಸ್ವಾಮೀಜಿ ವಿರುದ್ಧ ದೂರು ನೀಡಲು‌ ಸಂತ್ರಸ್ತೆ ಠಾಣೆಗಳಿಗೆ ಅಲೆದಾಡಿದ್ದಾರೆ. ಠಾಣೆಯ ವಿಜಿಟರ್ ರಿಜಿಸ್ಟರ್ ಬುಕ್​​ನಲ್ಲಿ ಸಂತ್ರಸ್ತ ಮಹಿಳೆಯ ಹೆಸರು, ವಿಳಾಸ ದಾಖಲಾಗಿದೆ. ಆದರೆ ಈಗ ಎಲ್ಲೂ ಕಾಣಿಸಿಕೊಳ್ಳದೆ ಮಗಳ ಜೊತೆ ಮಹಿಳೆ ತೆರಳಿದ್ದಾರೆ. ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Click

https://newsnotout.com/2024/09/bike-royal-enfield-kannada-news-viral-news-fire-issue-cigarate/
https://newsnotout.com/2024/09/fir-kannada-news-statement-kananda-news-ganesha-chaturti-issue/
See also  ನಕಲಿ ಆಧಾರ್ ಕಾರ್ಡ್,ನಕಲಿ ಪಾನ್ ಕಾರ್ಡ್ ನಿರ್ಮಿಸಿಕೊಡುತ್ತಿರುವ ChatGPT..!ಒಪನ್ ಎಐ ಬಗ್ಗೆ ಆತಂಕ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget