ಕ್ರೈಂವೈರಲ್ ನ್ಯೂಸ್

ಮೃತಪಟ್ಟ ಸನ್ಯಾಸಿ ಮನೆಯ ಅಟ್ಟದ ಮೇಲೆ ಹಣದ ಗಂಟುಗಳು ಪತ್ತೆ..! ಗ್ರಾಮಸ್ಥರು ಮಾಡಿದ್ದೇನು?

ನ್ಯೂಸ್ ನಾಟೌಟ್ : ಮೃತಪಟ್ಟ ಸನ್ಯಾಸಿ ಗಂಗಾಧರಯ್ಯ ಶಾಸ್ತ್ರಿ ಅವರ ಮನೆಯಲ್ಲಿ ಲಕ್ಷಾಂತರ ರೂಪಾಯಿ ಹಣ ಪತ್ತೆಯಾಗಿದ್ದು, ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯಲ್ಲಿ ಘಟನೆ ನಡೆದಿದೆ. ಅವರಿಗೆ ವಾರಸುದರಾರರು ಇಲ್ಲದ ಕಾರಣ, ಗ್ರಾಮಸ್ಥರು ಮನೆ ಒಳಗೆ ಪ್ರವೇಶಿಸಿ ಪರಿಶೀಲಿಸಿದಾಗ 30 ಲಕ್ಷ ರೂಪಾಯಿಯಷ್ಟು ಹಣ ಪತ್ತೆಯಾಗಿದೆ.
ಹೊಳಲ್ಕೆರೆಯ ಸನ್ಯಾಸಿ ಗಂಗಾಧರಯ್ಯ ಶಾಸ್ತ್ರಿ ಕಳೆದ ವಾರ ಮೃತರಾಗಿದ್ದು, ಅವರಿಗೆ ವಾರಸುದಾರರು ಇಲ್ಲದ ಕಾರಣ ಅವರ ಮನೆ ಪ್ರವೇಶಿಸಿದ ಗ್ರಾಮಸ್ಥರಿಗೆ ಲಕ್ಷಾಂತರ ರೂಪಾಯಿ ದುಡ್ಡು, ತೆಂಗಿನ ಕಾಯಿ ಮತ್ತು ಇತರೆ ವಸ್ತುಗಳು ಕಂಡುಬಂದಿದೆ.

ಮನೆಯ ಅಟ್ಟದ ಮೇಲೆ ಹಣದ ಗಂಟುಗಳು ಪತ್ತೆಯಾಗಿದ್ದವು. ಚಲ್ಲರೆ ಹಣದ ಮೌಲ್ಯ 46,000 ರೂಪಾಯಿ ಇದ್ದು, ಉಳಿದವರು 10 ರೂ., 20 ರೂ., 50 ರೂ., 100 ರೂ., 200 ರೂ. ಹಾಗೂ 500 ರೂ. ಮುಖಬೆಲೆಯ ನೋಟುಗಳು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಗಂಗಾಧರಯ್ಯ ಅವರು ಬೇರೆಯವರು ಅಡುಗೆ ಮಾಡಿದ ಆಹಾರ ಸೇವಿಸುತ್ತಿರಲಿಲ್ಲ. ತಾವೇ ಅಡುಗೆ ಮಾಡಿಕೊಳ್ಳುತ್ತಿದ್ದರು. ಮನೆಯ ಒಳಗೆ ಯಾರನ್ನೂ ಬಿಟ್ಟುಕೊಳ್ಳುತ್ತಿರಲಿಲ್ಲ. ಚಪ್ಪಲಿ ಕೂಡ ಧರಿಸುತ್ತಿರಲಿಲ್ಲ. ಈಗ ಸಿಕ್ಕ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇರಿಸಿ, ಅವರ ಮನೆಯನ್ನು ಗದ್ದುಗೆಯನ್ನಾಗಿ ಪರಿವರ್ತಿಸಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ. ನಾಲ್ಕು ಎಕರೆ ತೆಂಗಿನ ತೋಟವೂ ಇದ್ದು, ಟ್ರಸ್ಟ್‌ ರೂಪಿಸಿ ಸಮಾಜ ಸೇವೆಗೆ ಎಲ್ಲವನ್ನೂ ಬಳಸಲು ಗ್ರಾಮಸ್ಥರು ನಿರ್ಣಯಿಸಿದ್ದಾರೆ ಎಂದು ವರದಿ ತಿಳಿಸಿದೆ.

Related posts

ವಿದ್ಯಾರ್ಥಿ ಜೊತೆ ಮದುವೆ ನಾಟಕ ಮಾಡಿದ್ದ ಶಿಕ್ಷಕಿ ಹುದ್ದೆಗೆ ರಾಜೀನಾಮೆ..! ಆಕೆ ಕುಲಸಚಿವರಿಗೆ ಮಾಡಿದ ಈ ಮೇಲ್ ನಲ್ಲೇನಿದೆ..?

ಪವಿತ್ರಾ ಮನೆಯಿಂದ ನಟ ದರ್ಶನ್ ಒಳ ಉಡುಪು, ಹೇರ್ ಸ್ಯಾಂಪಲ್ ಅನ್ನು ವಶಕ್ಕೆ ಪಡೆದ ಪೊಲೀಸರು..!, ಮಾಧ್ಯಮಗಳಿಗೆ ಮಧ್ಯದ ಬೆರಳು ತೋರಿಸಿದ ನಟನಿಗೆ ಮತ್ತೆ ಸಂಕಷ್ಟ

ಸಂಸತ್‌ ದಾಳಿಯ ಮಾಸ್ಟರ್‌ ಮೈಂಡ್‌ ಇನ್ನೂ ಸಿಕ್ಕಿಲ್ಲವೇಕೆ..? ಸಿಕ್ಕ 4 ಆರೋಪಿಗಳು ಹೇಳುತ್ತಿರುವುದೇನು?