ಕ್ರೈಂವೈರಲ್ ನ್ಯೂಸ್

ಇಸ್ಲಾಂನಂತೆ ಲಿಂಗಾಯತರೂ ಮೂರ್ತಿ ಪೂಜೆ ನಿರಾಕರಿಸುತ್ತಾರೆ ಎಂದ ಸ್ವಾಮೀಜಿ..! ಲಿಂಗಾಯತ ಧರ್ಮದಲ್ಲಿ ಬಹುದೇವತಾರಾಧನೆಯನ್ನು ಒಪ್ಪುವುದಿಲ್ಲ ಎಂದ ಮಠಾಧೀಶ..!

ನ್ಯೂಸ್ ನಾಟೌಟ್: ದೇವರು ಒಬ್ಬ, ಮೂರ್ತಿ ಪೂಜೆ ಬೇಡ ಎಂಬ ಮಾತನ್ನು ಹೇಳಿದ್ದಾರೆ. ಲಿಂಗಾಯತ ಧರ್ಮ ಹಾಗೂ ಇಸ್ಲಾಂ ಧರ್ಮಗಳು ಬೇರೆ ಬೇರೆ ಆಗಿದ್ದರೂ, ಎರಡೂ ಧರ್ಮಗಳಲ್ಲಿ ಬಹುತೇಕ ಅಂಶಗಳಲ್ಲಿ ಸಾಮ್ಯತೆ ಇವೆ ಎಂದು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯ ತರಳಬಾಳು ಶಾಖಾ ಮಠದ ಪಂಡಿತಾರಾದ್ಯ ಸ್ವಾಮೀಜಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ.

ಚಿತ್ರದುರ್ಗ ನಗರದ ತರಾಸು ರಂಗಮಂದಿರದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಆಯೋಜನೆ ಮಾಡಲಾಗಿದ್ದ ಕುರ್‌ಆನ್ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವದ ಬಹುತೇಕ ಧರ್ಮಗಳಲ್ಲಿ ಅಹಿಂಸೆ ಮತ್ತು ಹೊಂದಾಣಿಕೆಯ ಜೀವನ ಮಾಡುವ ಅಂಶಗಳನ್ನು ಸಾರಿದ್ದಾರೆ. ಇಸ್ಲಾಂ ಧರ್ಮದ ಸಂಸ್ಥಾಪಕರಾದ ಮಹಮ್ಮದ್ ಪೈಗಂಪರ್ ಕೂಡ ನಾವೆಲ್ಲರೂ ಒಂದಾಗಿ ಬಾಳುವ ಅಂಶಗಳನ್ನೇ ಹೇಳಿದ್ದಾರೆ.

ಸ್ಥಾವರಗಳಿಗೆ ಪೂಜಿಸಬೇಡಿ, ಮೂರ್ತಿ ಪೂಜೆ ಬೇಡ ಎಂಬ ಮಾತನ್ನು ಹೇಳಿದ್ದಾರೆ. ಹೀಗಾಗಿ, ಲಿಂಗಾಯತ ಧರ್ಮ ಹಾಗೂ ಇಸ್ಲಾಂ ಧರ್ಮಗಳು ಬೇರೆ ಬೇರೆ ಆಗಿದ್ದರೂ, ಎರಡೂ ಧರ್ಮಗಳಲ್ಲಿ ಬಹುತೇಕ ಅಂಶಗಳಿವೆ ಎಂದಿದ್ದಾರೆ.

ವಿಚಾರವಂತರು, ವಿವೇಕವಂತರು ಜಾತಿ, ಧರ್ಮದ ಬೇರುಗಳನ್ನು ಕಿತ್ತುಹಾಕಿ, ಗೋಡೆಗಳನ್ನು ಕೆಡವಿ ಒಬ್ಬರು ಮತ್ತೊಬ್ಬರನ್ನು ಗೌರವಿಸುವಂತಹ ಪ್ರೀತಿಸುವಂತಹ ಹೃದಯ ಶ್ರೀಮಂತಿಕೆಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಲಿಂಗಾಯತ ಧರ್ಮದಲ್ಲಿ ಬಹುದೇವತಾರಾಧನೆಯನ್ನು ನಿರಾಕರಣೆ ಮಾಡಿದೆ. ಲಿಂಗಾಯತ ಧರ್ಮದಲ್ಲಿ ಮೂರ್ತಿ ಪೂಜೆಯನ್ನು ಅಲ್ಲಗಳೆದಿದೆ. ಲಿಂಗಾಯತ ಧರ್ಮದಲ್ಲಿ ಇಷ್ಟಲಿಂಗವನ್ನು ನಿಷ್ಠೆಯಿಂದ ಪೂಜೆ ಮಾಡಬೇಕು ಎಂಬುದನ್ನು ತಿಳಿಸಲಾಗಿದೆ. ಸ್ಥಾವರಗಳಿಗೆ ಪೂಜೆ ಮಾಡಬೇಡಿ. ಭೂಮಿಯ ಮೇಲೆ ಹಲವು ದೇವರುಗಳಿಲ್ಲ ಎಂದಿದೆ. ದೇವನೊಬ್ಬ ನಾಮ ಹಲವು ಇವೆ.ನಾವು ಅಲ್ಲಾನನ್ನು ಮಾತ್ರ ಪೂಜಿಸಬೇಕು, ಧ್ಯಾನ ಮಾಡಬೇಕು ಎಂದು ಹೇಳಿದ್ದಾರೆ.

Click

https://newsnotout.com/2024/09/darshan-thugudeepa-women-protest-infront-of-jail-kannada-news-ballary/
https://newsnotout.com/2024/09/airplane-parts-are-droped-to-house-kannada-news-control-room/
https://newsnotout.com/2024/09/tulunadu-culture-are-misused-in-maharatra-kanada-news-kantara-effect/
https://newsnotout.com/2024/09/ksrtc-and-school-bus-collision-rayachur-40-students-in-kannada-news/
https://newsnotout.com/2024/09/pattanagere-shed-bengaluru-renukaswami-photo-leaked-kannada-news/
https://newsnotout.com/2024/09/konkana-railway-job-vacancy-kannada-news-karnataka-190-jobs/

Related posts

ಆಕೆಯ ನಕಲಿ ಫೋಟೋ ಮತ್ತು ಮದುವೆ ಪ್ರಮಾಣಪತ್ರ ಸೃಷ್ಟಿಸಿದವರು ಪೊಲೀಸರ ಬಲೆಗೆ! ಇವರ ಖತರ್ನಾಕ್ ಪ್ಲಾನ್ ಹಿಂದಿದೆ ರೋಚಕ ಸ್ಟೋರಿ!

ಕೊಡಗು-ಮೈಸೂರು ಬಿಜೆಪಿ ಅಭ್ಯರ್ಥಿ ಮೆರವಣಿಗೆ, ಯದುವೀರ್ ನಾಮಪತ್ರ ಸಲ್ಲಿಕೆ

ವಿಪರೀತ ಜ್ವರದಿಂದ ಬಾಲಕ ಸಾವು