ಬೆಂಗಳೂರುರಾಜಕೀಯರಾಜ್ಯ

ಸ್ವಾಮೀಜಿಗಳು ವೇದಿಕೆ, ಸಂದರ್ಭ ನೋಡಿ ಮಾತಾಡಿದ್ರೆ ಒಳ್ಳೆಯದು..! ಸ್ವಾಮೀಜಿ ಹೇಳಿಕೆಗೆ ಪರಂ ಗರಂ..?

ನ್ಯೂಸ್ ನಾಟೌಟ್ : ಇತ್ತೀಚೆಗೆ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ 515ನೇ ಜಯಂತೋತ್ಸವ ಸಮಾರಂಭದಲ್ಲಿ ಮಾತನಾಡಿದ್ದ ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ (Chandrashekharnath Swamiji), ಸಿದ್ದರಾಮಯ್ಯನವರು ಮುಂದೆ ಡಿ.ಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂದು ಹೇಳಿದ್ದರು ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. ಈಗ ಗೃಹಸಚಿವ ಜಿ.ಪರಮೇಶ್ವರ್ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಸ್ವಾಮೀಜಿಗಳು ವೇದಿಕೆ, ಸಂದರ್ಭ ನೋಡಿ ಮಾತಾಡಿದ್ರೆ ಒಳ್ಳೆಯದು. ಸ್ವಾಮೀಜಿಗಳ ಹೇಳಿಕೆ ತಪ್ಪು ಅಂತ ಹೇಳಕ್ಕಾಗಲ್ಲ, ಅವರಿಗೂ ಕಾಳಜಿ ಇರಬಹುದು. ಅವರು ಅವರ ಅಭಿಪ್ರಾಯ ಹೇಳಿದ್ದಾರೆ ಅಷ್ಟೇ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಸಿಎಂ, ಡಿಸಿಎಂ ಹುದ್ದೆಗಳ ವಿಚಾರ ಪ್ರಸ್ತುತ ಅಪ್ರಸ್ತುತ ಅಂತ ಅಲ್ಲ. ಹೈಕಮಾಂಡ್ ನವರು ಆ ರೀತಿ ಬದಲಾವಣೆ ಮಾಡುವುದಾದರೆ ವೀಕ್ಷಕರನ್ನು ಕಳುಹಿಸಿ ಅಭಿಪ್ರಾಯ ಪಡೆಯುತ್ತಾರೆ ಎಂದು ಹೇಳಿದ್ದಾರೆ.

ನಾವು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರನ್ನೂ ಭೇಟಿ ಮಾಡಿದ್ದೆವು. ರಾಜಕೀಯವಾಗಿ ಚರ್ಚೆ ಮಾಡಲಾಯಿತು. ಸೌಹಾರ್ದಯುತವಾಗಿ ಚರ್ಚೆ ನಡೆದಿದೆ. ಹೆಚ್ಚುವರಿ ಡಿಸಿಎಂ ಬಗ್ಗೆ ಯಾರೂ ಪ್ರಸ್ತಾಪ ಮಾಡಲಿಲ್ಲ. ಹೆಚ್ಚುವರಿ ಡಿಸಿಎಂ ಬಗ್ಗೆ ಅವರವರು ಅವರವರ ಅಭಿಪ್ರಾಯ ಹೇಳ್ತಾರೆ. ಆದರೆ ಎಲ್ಲವೂ ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ತಿಳಿಸಿದ್ದಾರೆ.

Click 👇

https://newsnotout.com/2024/06/dengue-6-year-old-baby-nomre-health-care-kannada-news-chikkamagaluru
https://newsnotout.com/2024/06/shawarma-food-quality-and-bactiria-kannada-news-banning-shawarma
https://newsnotout.com/2024/06/school-sindhi-tamanna-bhatia-text-in-school-text-book-perents-opp
https://newsnotout.com/2024/06/actress-rakshita-met-darshan-in-jail-and-reaction-with-prem-kannada-news
https://newsnotout.com/2024/06/t20-cricket-lover-cm-siddaramayya-kannada-news-world-cup-won-by-india

Related posts

ಪತ್ನಿಯನ್ನೇ ಕಾಲ್ ಗರ್ಲ್ ಎಂದು ಪೋಸ್ಟ್ ಮಾಡಿದ ಗಂಡ..! ಅಕ್ಕ ಮತ್ತು ತಮ್ಮನಿಗೆ ಎಡೆಬಿಡದೆ ಬರುತ್ತಿರುವ ಕರೆಗಳು..!

ಆದಿವಾಸಿ ಯುವಕನ ಮೇಲೆ ಮೂತ್ರ ವಿಸರ್ಜನೆ..! ಬಿಜೆಪಿ ಯುವ ನಾಯಕನೆನ್ನಲಾದ ಓರ್ವನ ಬಂಧನ!

ರಾಜ್ಯದ ಮೊದಲ ಸರ್ಕಾರಿ ಮದ್ಯದಂಗಡಿ..! ಏನಿದರ ವಿಶೇಷ..?