ರಾಜ್ಯವೈರಲ್ ನ್ಯೂಸ್

ಸುತ್ತೂರು ಮಠಕ್ಕೆ ರೋಬೋ ಆನೆ..! ಈ ಗಜರಾಜನ ವಿಶೇಷತೆಗಳೇನು..?

ನ್ಯೂಸ್ ನಾಟೌಟ್: ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಮುಖ ಧಾರ್ಮಿಕ ಕೇಂದ್ರವಾದ ಸುತ್ತೂರು ಶ್ರೀಕ್ಷೇತ್ರಕ್ಕೆ ವಿಶಿಷ್ಟ ಆನೆಯೊಂದರ ಆಗಮನವಾಗಿದೆ. ಈ ಗಜರಾಜ ಇನ್ಮುಂದೆ ಸುತ್ತೂರು ಕ್ಷೇತ್ರದಲ್ಲಿ ನಡೆಯುವ ಎಲ್ಲ ಉತ್ಸವಾದಿಗಳಲ್ಲಿ ಪ್ರಮುಖ ಆಕರ್ಷಣೆಯ ಕೇಂದ್ರವಾಗಲಿದೆ.

ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ ಇಂಡಿಯಾದವರು ಸುತ್ತೂರು ಶ್ರೀಮಠಕ್ಕೆ ನೀಡಿದ ರೋಬೋಟಿಕ್‌ ಆನೆ ಆಗಿದೆ. ಸುಮಾರು 10 ಅಡಿ ಎತ್ತರದ ಈ ಆನೆಯನ್ನು ಉಡುಗೊರೆಯಾಗಿ ನೀಡಲಾಗಿದೆ. ರೋಬೋಟಿಕ್ ಆನೆಗೆ ಶಿವ ಎಂದು ನಾಮಕರಣ ಮಾಡಲಾಗಿದೆ. ಕೇರಳದ ಕಲಾವಿದ ಪ್ರಶಾಂತ್ ಎನ್ನುವವರು ಈ ರೋಬೋಟಿಕ್‌ ಆನೆಯನ್ನು ತಯಾರಿಸಿದ್ದಾರೆ. ನಿಜವಾದ ಆನೆಗಳನ್ನು ಸಾಕುವಂತಿಲ್ಲ ಎಂಬ ಕಾನೂನು ಇರುವುದರಿಂದ ಈ ಒಂದು ಎಲೆಕ್ಟ್ರಿಕಲ್ಸ್ ರೋಬೋ ಆನೆಯನ್ನು ಇಟ್ಟುಕೊಂಡು ಇನ್ನು ಮುಂದೆ ಸುತ್ತೂರು ಮಠದಲ್ಲಿ ಉತ್ಸವ ನಡೆಸಲು ಮುಂದಾಗಿದೆ.

ಈ ರೋಬೋಟಿಕ್ ಶಿವ ಆನೆ ತನ್ನ ಕಿವಿಗಳನ್ನು ನಿಜವಾದ ಆನೆಗಳ ರೀತಿ ಅಲ್ಲಾಡಿಸುತ್ತದೆ, ಕಣ್ಣು ಮಿಟಕಿಸುತ್ತದೆ, ಕತ್ತು ಅಲ್ಲಾಡಿಸುತ್ತದೆ, ಸೊಂಡಿಲನ್ನು ಮೇಲೆ ಎತ್ತಿ ಆಶೀರ್ವದಿಸುತ್ತದೆ. ಇದಲ್ಲದೇ ಆನೆ ಮೇಲೆ ಅಂಬಾರಿ ಮಾದರಿಯಲ್ಲಿ ಮಂಟಪ ಕೂಡಾ ಇದೆ. ಇನ್ನು ಈ ವಿದ್ಯುತ್‌ ಚಾಲಿತ ರೋಬೋ ಶಿವನನ್ನ ಎಷ್ಟು ದೂರ ಬೇಕಾದರೂ ತೆಗೆದುಕೊಂಡು ಹೋಗಬಹುದು. ಸೂತ್ತೂರು ಮಠದಲ್ಲಿ ಸಾಕಾನೆಯನ್ನು ನೋಡಿ ಸುಮಾರು ವರ್ಷಗಳು ಕಳೆದಿತ್ತು. ಆದರೆ ಈ ರೋಬೋ ಆನೆಯನ್ನು ನಿಜವಾದ ಆನೆಯಂತೆ ಮಾಡಿರುವುದರಿಂದ ಸೂತ್ತೂರಿಗೆ ಮತ್ತೆ ಆನೆ ಬಂದಂತಾಗಿದೆ.

Related posts

ತಲೆಯಿಂದ ಗುದ್ದಿ ಹಡಗನ್ನೇ ಮುಳುಗಿಸಿದ ತಿಮಿಂಗಿಲ..! ಇಲ್ಲಿದೆ ಭಯಾನಕ ವಿಡಿಯೋ..!

ನಟಿಗೆ ಪ್ರಭಾವಿ ರಾಜಕಾರಣಿಯಿಂದ ಲೈಂಗಿಕ ಕಿರುಕುಳ ಆರೋಪ..! 3 ಐಪಿಎಸ್ ಅಧಿಕಾರಿಗಳು ಅಮಾನತ್ತು..!

ಸುಳ್ಯ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಬೀದಿಗಿಳಿದು ಬಿಜೆಪಿ ಹೋರಾಟ, ಸಿಎಂ ಸಿದ್ದು ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ‘ನ್ಯಾನೋ’ ಕಾರಿಗೆ ಹಗ್ಗ ಕಟ್ಟಿ ಎಳೆದು ಆಕ್ರೋಶ