ಬೆಂಗಳೂರು

ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಇನ್ಸ್ಪೆಕ್ಟರ್ ಪತ್ನಿ,ಪತಿ ವಿರುದ್ದ ಕೊಲೆ ಆರೋಪ-ದೂರು ದಾಖಲು

188

ನ್ಯೂಸ್ ನಾಟೌಟ್ : ಬೆಂಗಳೂರಿನಲ್ಲಿ ಇನ್ ಸ್ಪೆಕ್ಟರ್ ಪತ್ನಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.ಮೃತ ಮಹಿಳೆಯನ್ನು ಶಿಲ್ಪಾ (33) ಎಂದು ಗುರುತಿಸಲಾಗಿದ್ದು, ಮಹಿಳೆಯ ಪತಿ ರಮೇಶ್ ಅವರ ಮೇಲೆ ಶಿಲ್ಪಾ ಪೊಷಕರು ಕೊಲೆ ಆರೋಪ ಹೊರಿಸಿದ್ದಾರೆ. ಅಲ್ಲದೆ ನಿರಂತರ ಪತ್ನಿಗೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. 

ರಮೇಶ್ ಹಾಗೂ ಶಿಲ್ಪಾ ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದು, ಕಳೆದ ಐದಾರು ವರ್ಷಗಳಿಂದ ಲಿವಿಂಗ್ ಟುಗೇದರ್ (Living Together) ರಿಲೇಶನ್‍ಶಿಪ್‍ನಲ್ಲಿದ್ದರು ಎಂದು ತಿಳಿದು ಬಂದಿದೆ. ಆದರೆ ಮದುವೆಯಾಗಲು (Marriage) ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಬಳಿಕ ಹಠಬಿಡದೆ ಪೊಲೀಸರ ಸಮ್ಮುಖದಲ್ಲಿ ಶಿಲ್ಪಾ ಅವರು ರಮೇಶ್‍ನನ್ನು ಮದುವೆಗೆ ಒಪ್ಪಿಸಿದ್ದರು ಎಂಬ ಮಾಹಿತಿಯಿದೆ.

ಮದುವೆ ಬಳಿಕ ಮನೆಯವರು ಒಪ್ಪುತ್ತಿಲ್ಲ ಎಂದು ಪತ್ನಿಗೆ ಪ್ರತ್ಯೇಕ ಮನೆ ಮಾಡಿಕೊಟ್ಟಿದ್ದು,ಜೀವನಕ್ಕೆ ಯಾವುದೇ ಅರ್ಥಿಕ ನೆರವು ನೀಡುತ್ತಿರಲಿಲ್ಲ. ಪದೇ ಪದೇ ಜಾತಿ ನಿಂದನೆ ಮಾಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ತನ್ನ ಅಕ್ಕನ ಮಗಳನ್ನು ಮದುವೆಯಾಗಲು ನೀನು ಅಡ್ಡಿಯಾಗಿದ್ದೀಯಾ ಮನೆಬಿಟ್ಟು ಹೋಗು ಎಂದು ಪದೇ ಪದೇ ಕಿರುಕುಳ ನೀಡುತ್ತಿದ್ದ ಎಂದು ಮಹಿಳೆಯ ಪೋಷಕರು ದೂರಿದ್ದಾರೆ.

ಶುಕ್ರವಾರ ರಾತ್ರಿ ಕುಟುಂಬದವರ ಜೊತೆ ಫೋನಿನಲ್ಲಿ ಮಾತನಾಡಿದ್ದ ಶಿಲ್ಪಾ ಖರ್ಚಿಗೆ ಹಣ ಬೇಕು ಎಂದು ಹಾಕಿಸಿಕೊಂಡಿದ್ದಳು. ಆದರೆ ಇಂದು ಬೆಳಗ್ಗೆ ಶಿಲ್ಪಾ ಅವರು ಬಾಗಿಲು ತೆರೆಯದನ್ನು ಗಮನಿಸಿ ಮನೆಯ ಮಾಲೀಕರು ಕುಟುಂಬಸ್ಥರಿಗೆ ತಿಳಿಸಿದ್ದಾರೆ.ಕುಟುಂಬದವರು ಬರುವ ಮುನ್ನವೇ ಶವವನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು,ಈ ಬಗ್ಗೆ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಶಿಲ್ಪಾ ಕುಟುಂಬ ಆಗ್ರಹಿಸಿದೆ.

See also  ಲವ್ ಫೇಲ್ಯೂರ್‌ , ಡೆತ್‌ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ,ಡೆತ್‌ನೋಟ್‌ನಲ್ಲೇನಿದೆ?
  Ad Widget   Ad Widget   Ad Widget   Ad Widget   Ad Widget   Ad Widget   Ad Widget