ದೇಶ-ಪ್ರಪಂಚ

ನನಗೆ ಸೆಲ್ಯೂಟ್ ಕೊಡು: ಪೊಲೀಸ್ ಅಧಿಕಾರಿಗೆ ಖ್ಯಾತ ನಟ ಸುರೇಶ್ ಗೋಪಿ ಅವಾಜ್

ತ್ರಿಶ್ಯೂರ್: ಮಲಯಾಳಂ ನಟ ಹಾಗೂ ರಾಜ್ಯಸಭಾ ಸದಸ್ಯ ಸುರೇಶ್ ಗೋಪಿ ತ್ರಿಶ್ಯೂರ್ ನಲ್ಲಿ ಪೊಲೀಸ್‌ ಸಬ್ ಇನ್ಸ್ ಪೆಕ್ಟರ್ ಅವರಿಗೆ ಸೆಲ್ಯೂಟ್ ಕೇಳಿರುವುದು ದೊಡ್ಡ ವಿವಾದವಾಗಿದೆ. ಕೇರಳದಲ್ಲಿ ಪಾಲಕ್ಕಾಡ್ ಜಿಲ್ಲೆಯ ಯುವ ಕಾಂಗ್ರೆಸ್ ಕಾರ್ಯಕರ್ತರು ನಟ-ರಾಜಕಾರಣಿಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಯುವ ಕಾಂಗ್ರೆಸ್ ಕಾರ್ಯಕರ್ತರು ಸುರೇಶ್ ಗೋಪಿಯ ಚಲನಚಿತ್ರದ ಡೈಲಾಗ್ ನ್ನು ಹೇಳಿದ್ದು, ಅದರಲ್ಲಿ ಅವರು ನಿಮಗೆ ಯಾಕೆ ಸೆಲ್ಯೂಟ್ ನೀಡಬೇಕು? ಎಂದು ಕೇಳುವುದನ್ನು ಆವರ್ತಿಸಿದ್ದಾರೆ. ಪ್ರತಿಭಟನಾಕಾರರು ಚಪ್ಪಲಿಗಳೊಂದಿಗೆ ಸುರೇಶ್ ಗೋಪಿಗೆ ಅಣಕು ವಂದನೆ ಸಲ್ಲಿಸಿದರು. ಅವರು ಸೆಲ್ಯೂಟ್ ಮಾಡುವಾಗ ತಮ್ಮ ಬಲಗೈಯಲ್ಲಿ ಚಪ್ಪಲ್ ಹಿಡಿದಿದ್ದರು, ಚಿತ್ರದ ಸಂಭಾಷಣೆಯನ್ನು  ಹಿನ್ನೆಲೆಯಲ್ಲಿ  ಹೇಳಲಾಯಿತು. ಇದೇ ವೇಳೆ ಸುರೇಶ್ ಗೋಪಿ ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿ ನನ್ನನ್ನು ನೋಡಿ ಸುಮ್ಮನಿದ್ದ ಆಗ ನಾನು ಹೇಳಿದ್ದು ನಿಜ. ಅದನ್ನು ನಯವಾಗಿ ಹೇಳಿದ್ದೇನೆ. ಇದರಲ್ಲಿ ತಪ್ಪೇನಿದೆ ಎಂದು ತಿಳಿಸಿದ್ದಾರೆ.

Related posts

ಪ್ರಧಾನಿ ಮೋದಿಗೆ ರಷ್ಯಾದಲ್ಲಿ ಅದ್ದೂರಿ ಸ್ವಾಗತ, ಉಕ್ರೇನ್ ಯುದ್ಧದ ಬಳಿಕ ಮೋದಿಯ ಮೊದಲ ರಷ್ಯಾ ಭೇಟಿ

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠಕ್ಕೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿ

ದೆಹಲಿಯಲ್ಲಿ ಮತದಾನದ ವೇಳೆ ಬಿಜೆಪಿ-ಎಎಪಿ ಕಾರ್ಯಕರ್ತರ ನಡುವೆ ಹೊಡೆದಾಟ..! ಇಲ್ಲಿದೆ ವಿಡಿಯೋ