ಕರಾವಳಿ

ಸುರತ್ಕಲ್ : ಮನೆ ಮುಂದೆ ಆಟವಾಡುತ್ತಿದ್ದ ಮಗುವಿನ ಅಪಹರಣಕ್ಕೆ ಯತ್ನ?

415

ನ್ಯೂಸ್ ನಾಟೌಟ್: ನಗರದ ಹೊರವಲಯದ ಚೊಕ್ಕಬಿಟ್ಟು ಎಂಬಲ್ಲಿ ಮನೆ ಮುಂದೆ ನಿಂತಿದ್ದ ಮಗುವನ್ನು ಅಪರಿಚಿತ ವ್ಯಕ್ತಿಯೋರ್ವ ಅಪಹರಿಸಲು ಯತ್ನಿಸಿದ್ದಾನೆ. ಈ ಘಟನೆ ಡಿ.5ರ ರಾತ್ರಿ ನಡೆದಿದೆ. ಈ ದೃಶ್ಯಾವಳಿ ಸಿಸಿ ಟಿವಿಯಲ್ಲಿ ದಾಖಲಾಗಿದ್ದು ಸ್ಥಳೀಯರನ್ನು ಭಾರಿ ಆತಂಕಕ್ಕೆ ದೂಡಿದೆ,

ಸೋಮವಾರ ರಾತ್ರಿ ಪರಿಸರದಲ್ಲಿ ವಿದ್ಯುತ್ ಕಡಿತಗೊಂಡಿದ್ದು ಈ ವೇಳೆ ಚೊಕ್ಕಬೆಟ್ಟು ಮಸೀದಿ ಪಕ್ಕದ ಮನೆಯ ಮುಂದೆ ಮಗುವೊಂದು ಆಟವಾಡುತ್ತಿತ್ತು. ಇದೇ ವೇಳೆ ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿ ಮಗುವಿನ ಕೈ ಹಿಡಿದು ಎಳೆದು ಅಪಹರಣಕ್ಕೆ ಯತ್ನಿಸಿದ್ದಾನೆ. ಮಗು ಆತನ ಕೈಯಿಂದ ತಪ್ಪಿಸಿಕೊಂಡು ಮನೆಗೆ ಓಡಿ ಹೋಗಿದೆ. ಇದು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಸ್ಥಳಕ್ಕೆ ಸುರತ್ಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

See also  ಕಲ್ಲುಗುಂಡಿಯಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಸೆರೆ, ವಿಡಿಯೋ ವೀಕ್ಷಿಸಿ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget