ಕ್ರೈಂದೇಶ-ವಿದೇಶರಾಜಕೀಯರಾಜ್ಯವೈರಲ್ ನ್ಯೂಸ್

ರೇವಣ್ಣ ಕುಟುಂಬಕ್ಕೆ ಮತ್ತೊಂದು ಆಘಾತ..! ಡಾ.ಸೂರಜ್​ ರೇವಣ್ಣ ಪ್ರಕರಣ​ ಸಿಐಡಿಗೆ ವರ್ಗಾವಣೆ..! ಎಡಿಜಿಪಿ ಬರೆದ ಪತ್ರದಲ್ಲೇನಿದೆ..?

285

ನ್ಯೂಸ್‌ ನಾಟೌಟ್‌: ಜೆಡಿಎಸ್​ ವಿಧಾನಪರಿಷತ್ ಸದಸ್ಯ ಡಾ ಸೂರಜ್ ರೇವಣ್ಣ (Dr Suraj Revanna) ವಿರುದ್ಧ ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜನ್ಯದ ಆರೋಪದ ಪ್ರಕರಣವನ್ನು ಸಿಐಡಿಗೆ(CID) ವರ್ಗಾವಣೆ ಮಾಡಲಾಗಿದೆ.

ಈಗಾಗಲೇ ಬಂಧನವಾಗಿರುವ ಸೂರಜ್‌ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಿ ಕಾನೂನು ಸುವ್ಯವಸ್ಥೆಯ ಎಡಿಜಿಪಿ ಹಿತೇಂದ್ರ ಆದೇಶ ಹೊರಡಿಸಿದ್ದಾರೆ ಎಂದು ವರದಿ ತಿಳಿಸಿದೆ.

ಕಾನೂನು ಸುವ್ಯವಸ್ಥೆಯ ಎಡಿಜಿಪಿ ಹಿತೇಂದ್ರ ಸೂರಜ್ ರೇವಣ್ಣ ವಿರುದ್ಧದ ಪ್ರಕರಣವನ್ನು ಸಿಐಡಿಗೆ ವಹಿಸಿದ್ದು, ಈ ಸಂಬಂಧ ಹಾಸನ ಎಸ್​ಪಿ, ಸಿಐಡಿ ಡಿಜಿಪಿಗೆ ಪತ್ರ ಬರೆದಿದ್ದಾರೆ. ಖುದ್ದು ಸಿಐಡಿ ಕಚೇರಿಗೆ ತೆರಳಿ ಕೇಸ್ ಫೈಲ್ ನೀಡುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ತನಿಖೆಗೆ ತಯಾರಿ ಮಾಡಿಕೊಳ್ಳಲು ಸಿಐಡಿ ಅಧಿಕಾರಿಗಳಿಗೆ ಸಹ ಸೂಚಿಸಿದ್ದಾರೆ. ಈ ಸಂಬಂಧ ಗೃಹ ಸಚಿವ ಡಾ ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಕಂಪ್ಲೇಂಟ್ ಬಂದಿದೆ, ಎಫ್​ಐಆರ್ ಸಹ ದಾಖಲಾಗಿದೆ. ಪ್ರಕರಣದ ತನಿಖೆ ಸಿಐಡಿಗೆ ವಹಿಸುತ್ತೇವೆ. ಇಂತಹ ಪ್ರಕರಣಗಳನ್ನ ಸಿಐಡಿಗೆ ಕೊಡಬೇಕಾಗುತ್ತದೆ ಎಂದಿದ್ದಾರೆ.

Click 👇

https://newsnotout.com/2024/06/suraj-revanna-arrested-after-prajwal-revanna-kannada-news
https://newsnotout.com/2024/06/naxal-couple-surrendereed-and-awarded-by-govt-kannada-news
https://newsnotout.com/2024/06/bollywood-sonakshi-marriage-and-conversion-issue-kannada-news
https://newsnotout.com/2024/06/reels-kannada-news-insat-reels-stunt-and-police-arrested-2
See also  ಮಾಲೆ ಧರಿಸಿ 41 ದಿನಗಳ ವೃತ ಕೈಗೊಂಡ ಪಾದ್ರಿಗೀಗ ಸಂಕಷ್ಟ..! ಮಾಲೆ ಧರಿಸಿ ಶಬರಿಮಲೆಗೆ ಹೋಗಲು ಚರ್ಚ್ ನಿರಾಕರಿಸಿದ್ದೇಕೆ? ಪಾದ್ರಿ ಕೆಲಸ ತೊರೆದರಾ ಆ ವ್ಯಕ್ತಿ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget