ದೇಶ-ವಿದೇಶವೈರಲ್ ನ್ಯೂಸ್

ಸುಪ್ರೀಂ ಕೋರ್ಟ್‌ನ ನೂತನ ಸಿಜೆಐ ಆಗಿ ಸಂಜೀವ್‌ ಖನ್ನಾ ನೇಮಕ, ಅಧಿಸೂಚನೆ ಹೊರಡಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ನ್ಯೂಸ್ ನಾಟೌಟ್ : ನ್ಯಾ.ಸಂಜೀವ್‌ ಖನ್ನಾ ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯನ್ಯಾಮೂರ್ತಿಯನ್ನಾಗಿ (CJI) ನೇಮಕ ಮಾಡಲು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಮುಂದಿನ ಸಿಜೆಐ ಆಗಿ ನ್ಯಾ. ಸಂಜೀವ್ ಖನ್ನಾ ಅವರನ್ನು ನೇಮಕ ಮಾಡಿ ಅಧಿಸೂಚನೆ ಹೊರಡಿಸಿದ್ದಾರೆ.
ನವೆಂಬರ್‌ 11ರಂದು ಸಿಜೆಐ ಹುದ್ದೆಯಿಂದ ಹಾಲಿ ಸಿಜೆಐ ಚಂದ್ರಚೂಡ್‌ ನಿವೃತ್ತಿಯಾಗಲಿದ್ದಾರೆ. ಅಂದೇ ಸಂಜೀವ್‌ ಖನ್ನಾ ಅಧಿಕಾರ ವಹಿಸಿಕೊಳ್ಳಲಿದ್ದು, 2025ರ ಮೇ 13ರ ವರೆಗೆ ಕರ್ತವ್ಯ ನಿರ್ವಹಿಸಲಿದ್ದಾರೆ. 2019ರ ಜನವರಿ 18ರಂದು ನ್ಯಾ.ಸಂಜೀವ್‌ ಖನ್ನಾ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌‌ ಹುದ್ದೆಗೆ ನೇಮಿಸಲಾಗಿತ್ತು.

2022ರ ನವೆಂಬರ್ 8ರಂದು ಸಿಜೆಐ ಉದಯ್ ಉಮೇಶ್ ಲಲಿತ್ ಅವರು ನಿವೃತ್ತಿ ಹೊಂದಿದ ಬಳಿಕ ಚಂದ್ರಚೂಡ್‌ ಸುಪ್ರೀಂ ಕೋರ್ಟ್‌ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ್ದರು.

Click

https://newsnotout.com/2024/10/lawyer-jagadeesh-kannada-news-viral-news-bigboss-house/
https://newsnotout.com/2024/10/traffic-police-kannada-news-viral-news-car-issue-viral-video-shivamogga/
https://newsnotout.com/2024/10/indian-army-attacked-by-kannada-news-viral-news-4-are-nomore/

Related posts

ರೈತನ ಟೊಮ್ಯಾಟೋ ತೋಟಕ್ಕೆ ಖ್ಯಾತ ನಟಿಯರೇ ಕಾವಲು..? ರಚಿತಾ ರಾಮ್​, ಸನ್ನಿ ಲಿಯೋನ್ ಟೊಮ್ಯಾಟೋ ತೋಟದಲ್ಲಿ…!

ಮಾಟ-ಮಂತ್ರ ಮಾಡಿದ್ದಾಳೆ ಎಂದು ನೆರೆಹೊರೆಯವರು ಸೇರಿ 77 ವರ್ಷದ ಮಹಿಳೆಗೆ ಬಲವಂತವಾಗಿ ಮೂತ್ರ ಕುಡಿಸಿ ಹಲ್ಲೆ..! ಆಕೆಯ ಕೈ – ಕಾಲುಗಳ ಮೇಲೆ ಬಿಸಿ ಕಬ್ಬಿಣದ ಸರಳಿನಿಂದ ಥಳಿತ..!

ದೇವಿ ದೇವಸ್ಥಾನಕ್ಕೆ ಬಿಟ್ಟಿದ್ದ ಕೋಣ ನಾಪತ್ತೆ..! ಹುಡುಕಿ-ಹುಡುಕಿ ಸಿಗದಿದ್ದಾಗ ಪೊಲೀಸ್ ಠಾಣೆ ಮೆಟ್ಟಿಲೇರಿದ ಗ್ರಾಮಸ್ಥರು