Latestಕ್ರೈಂವೈರಲ್ ನ್ಯೂಸ್

ಸುಪ್ರೀಂಕೋರ್ಟ್ ನಿಂದ ಸುಟ್ಟ ನೋಟಿನ ಕಂತೆಗಳ ವಿಡಿಯೋ ಬಿಡುಗಡೆ..! ಹೈಕೋರ್ಟ್ ನ್ಯಾಯಮೂರ್ತಿ ವಿರುದ್ಧ ತನಿಖೆ..!

763

ನ್ಯೂಸ್ ನಾಟೌಟ್: ಹೈಕೋರ್ಟ್ ನ್ಯಾಯಮೂರ್ತಿ ಮನೆಯಲ್ಲಿ ಬೆಂಕಿ ಆಕಸ್ಮಿಕ ನಡೆದ ಸಂದರ್ಭದಲ್ಲಿ ನೋಟಿನ ಕಂತೆಗಳು ಪತ್ತೆಯಾದ ಪ್ರಕರಣ ಇದೀಗ ಹೊಸ ತಿರುವು ಪಡೆದಿದ್ದು, ದೆಹಲಿ ಪೊಲೀಸ್ ಆಯುಕ್ತ ಸಂಜಯ್ ಅರೋರಾ ನೀಡಿದ ಸುಟ್ಟ ನೋಟಿನ ಕಂತೆಗಳ ದೃಶ್ಯದ ತುಣುಕನ್ನು ಸುಪ್ರೀಂಕೋರ್ಟ್ ಅಪ್ಲೋಡ್ ಮಾಡಿದೆ.

ಇದಕ್ಕೂ ಮುನ್ನ ದೆಹಲಿ ಪೊಲೀಸರು ಸಿಜೆಐ ಸಂಜೀವ ಖನ್ನಾ ಮತ್ತು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಕೆ.ಉಪಾಧ್ಯಾಯಗೆ ಈ ಕುರಿತ ವಿಡಿಯೋ ದಾಖಲೆಯನ್ನು ಅರೋರಾ ಹಸ್ತಾಂತರಿಸಿದ್ದರು. ಇದರಿಂದಾಗಿ ಕಳಂಕಿತ ನ್ಯಾಯಮೂರ್ತಿ ಯಶವಂತ ವರ್ಮಾ ವಿರುದ್ಧದ ಪ್ರಕರಣದ ಬಗ್ಗೆ ಆಳವಾದ ತನಿಖೆ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಪುರಾವೆಯ ನಡುವೆಯೂ ತಾನು ಅಮಾಯಕ ಹಾಗೂ ತಮ್ಮನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ನ್ಯಾಯಮೂರ್ತಿ ವರ್ಮಾ ಹೇಳಿದ್ದಾರೆ.

ಈ ಮಧ್ಯೆ ಮೂರು ಸಂದೇಹಗಳ ಬಗ್ಗೆ ನ್ಯಾಯಮೂರ್ತಿ ಯಶವಂತ ವರ್ಮಾ ಸ್ಪಷ್ಟನೆ ಪಡೆಯುವಂತೆ ಸಿಜೆಐ ಖನ್ನಾ ದೆಹಲಿ ಸಿಜೆಐಗೆ ಸೂಚನೆ ನೀಡಿದ್ದರು.

ಅವರ ಮನೆಯ ಕೊಠಡಿಯಲ್ಲಿ ಪತ್ತೆಯಾದ ಹಣದ ಕಂತೆಗಳಿಗೆ ಸಂಬಂಧಿಸಿದಂತೆ ಹೇಗೆ ಲೆಕ್ಕ ನೀಡುತ್ತಾರೆ, ಕೊಠಡಿಯಲ್ಲಿ ಪತ್ತೆಯಾದ ನಗದಿನ ಮೂಲ ಯಾವುದು ಹಾಗೂ ಮಾರ್ಚ್ 15ರಂದು ಕೊಠಡಿಯಿಂದ ಸುಟ್ಟ ನೋಟುಗಳನ್ನು ತೆಗೆದವರು ಯಾರು ಎಂಬ ಮೂರು ಅಂಶಗಳ ಬಗ್ಗೆ ಸ್ಪಷ್ಟನೆ ಬಯಸಿದ್ದರು.

ಇದನ್ನೂ ಓದಿಪತ್ನಿ ಮತ್ತು ಅತ್ತೆಗೆ ಬೈಯುತ್ತಾ ಇನ್‌ ಸ್ಟಾಗ್ರಾಂ ಲೈವ್‌ ಬಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ..! 2 ಮಹಿಳೆಯರು ಅರೆಸ್ಟ್..!

ಕಳೆದ ಆರು ತಿಂಗಳಲ್ಲಿ ಹೈಕೋರ್ಟ್ ರಿಜಿಸ್ಟ್ರಿಯಲ್ಲಿ ಸೇವೆ ಸಲ್ಲಿಸಿದವರ ವಿವರ, ಕಳಂಕಿತ ನ್ಯಾಯಮೂರ್ತಿ ನಿವಾಸಕ್ಕೆ ನಿಯೋಜನೆಯಾದ ಭದ್ರತಾ ಅಧಿಕಾರಿಗಳು ಮತ್ತು ಸಿಬ್ಬಂದಿ ವಿವರ ಸಲ್ಲಿಸುವಂತೆಯೂ ಸಿಜೆಐ ಸೂಚಿಸಿದ್ದಾರೆ. ಕಳೆದ ಆರು ತಿಂಗಳ ಅವಧಿಯಲ್ಲಿ ನ್ಯಾಯಮೂರ್ತಿ ವರ್ಮಾ ಅವರ ದೂರವಾಣಿ ಕರೆಗಳ ದಾಖಲೆಗಳನ್ನು ಒದಗಿಸುವಂತೆಯೂ ಟೆಲಿಕಾಂ ಸೇವಾ ಪೂರೈಕೆದಾರರಿಗೆ ಆದೇಶಿಸಲಾಗಿದೆ ಎಂದು ದೆಹಲಿ ಸಿಜೆಐ ಹೇಳಿದ್ದಾರೆ.

See also  ಶೋಭಕ್ಕನ ಹಾವು ಹಿಡಿದ ಸಾಹಸಮಯ ವಿಡಿಯೋ ವೈರಲ್, ಯಾರಿವರು ಶೋಭಕ್ಕ..? ಕೊನೆಗೂ ಸಿಕ್ಕಿತು ಉತ್ತರ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget