Latestಕ್ರೈಂದೇಶ-ವಿದೇಶರಾಜ್ಯಸಿನಿಮಾ

ನಾಳೆ(ಎ.2) ಮತ್ತೆ ನಟ ದರ್ಶನ್ ಪ್ರಕರಣದ ವಿಚಾರಣೆ..! ಜಾಮೀನು ರದ್ದು ಕೋರಿ ಸುಪ್ರಿಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ವಕೀಲರು..!

614

ನ್ಯೂಸ್‌ ನಾಟೌಟ್: ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದರು. 131 ದಿನಗಳ ಬಳಿಕ ಸೆರೆವಾಸದಿಂದ ಮುಕ್ತಿ ಪಡೆದಿರುವ ದರ್ಶನ್​ಗೆ ಇದೀಗ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ನಾಳೆ(ಎ.2) ಸುಪ್ರೀಂಕೋರ್ಟ್‌ನಲ್ಲಿ ದರ್ಶನ್ ಅವರ ಬೇಲ್ ರದ್ದು ಮಾಡುವಂತೆ ಸರ್ಕಾರ ಪರ ವಕೀಲರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಯಲಿದೆ.

ನಾಳೆ ಸುಪ್ರೀಂಕೋರ್ಟ್​ನಲ್ಲಿ ದರ್ಶನ್​ ಬೇಲ್ ಅರ್ಜಿ ವಿಚಾರಣೆ ನಡೆಯುತ್ತಿದೆ. ಇಂದು(ಎ.1) ಸರ್ಕಾರಿ ಪರ ವಕೀಲರು ದರ್ಶನ್ ಪ್ರಕರಣ ಅರ್ಜಿ ವಿಚಾರವನ್ನು ಪ್ರಸ್ತಾಪ ಮಾಡಿದರು. ಶೀಘ್ರವೇ ವಿಚಾರಣೆಗೆ ಕೈಗೆತ್ತಿಕೊಳ್ಳಲು ಮನವಿ ಮಾಡಿದರು.
ನ್ಯಾ. ಪರ್ದೀವಾಲ ನಾಳೆ ನ್ಯಾಯಪೀಠದ ಮುಂದೆ ಪ್ರಸ್ತಾಪಿಸಲು ಸೂಚನೆ ನೀಡಿದರು. ಸುಪ್ರೀಂಕೋರ್ಟ್‌ ನ್ಯಾ. ಪರ್ದೀವಾಲ, ನ್ಯಾ. ಮಹದೇವನ್ ಪೀಠ ನಾಳೆ ದರ್ಶನ್ ಬೇಲ್ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ತೂಗುದೀಪ ಸೇರಿ ಒಟ್ಟು 7 ಆರೋಪಿಗಳಿಗೆ ಹೈಕೋರ್ಟ್‌ 2024 ಡಿಸೆಂಬರ್ 13ರಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಹೈಕೋರ್ಟ್ ನೀಡಿರುವ ಜಾಮೀನು ರದ್ದು ಕೋರಿ ಸರ್ಕಾರ ಸುಪ್ರೀಂಕೋರ್ಟ್​​ ಮೊರೆ ಹೋಗಿದೆ.

ದರ್ಶನ್ ಜಾಮೀನು ರದ್ದು ಮಾಡಲು ರಾಜ್ಯ ಸರ್ಕಾರದ ಪ್ರಾಸಿಕ್ಯೂಷನ್ ಮನವಿ ಮಾಡಿದ್ದು, ಎ1 ಪವಿತ್ರಾಗೌಡ, ಎ2 ದರ್ಶನ್, ಎ6 ಜಗದೀಶ್‌, ಎ7 ಅನುಕುಮಾರ್‌, ಎ11 ನಾಗರಾಜ್, ಎ12 ಎಂ.ಲಕ್ಷ್ಮಣ್‌ ಹಾಗೋ ಎ 14 ಪ್ರದೂಶ್ ​ಗೆ ಮತ್ತೆ ಸಂಕಷ್ಟ ಎದುರಾಗಿದೆ.

ಹೈಕೋರ್ಟ್‌ ನೀಡಿರುವ ಜಾಮೀನು​ ಅವಸರದಿಂದ ಕೂಡಿದಂತಿದೆ. ಯಾಕಂದ್ರೆ ಖ್ಯಾತ ನಟ ದರ್ಶನ್ ಸಾಕ್ಷ್ಯಗಳನ್ನು ತಿರುಚುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಸೆಷನ್ಸ್ ಕೋರ್ಟ್​ನಲ್ಲಿ ಕೇಸ್ ಚಾರ್ಜ್ ಫ್ರೇಮ್ ಇನ್ನೂ ಹಂತಕ್ಕೆ ಬಂದಿಲ್ಲ. ನಟ ದರ್ಶನ್ ​ಗೆ 6 ವಾರಗಳು ಮಧ್ಯಂತರ ಬೇಲ್ ನೀಡಿದ್ದಾಗಲೂ ಶಸ್ತ್ರಚಿಕಿತ್ಸೆ ಮಾಡಿಸಿಲ್ಲ. ನಟ ದರ್ಶನ್​ & ಗ್ಯಾಂಗ್ ಹೈಕೋರ್ಟ್​ ಜಾಮೀನಿಗೆ ಅರ್ಹರಾಗಿಲ್ಲ. ಕೇಸ್​​ನಲ್ಲಿ ಪ್ರಬಲ ಸಾಕ್ಷಿಗಳಿದ್ದರೂ ಪರಿಗಣಿಸಲು ಕೋರ್ಟ್​​​​ ವಿಫಲವಾಗಿದೆ. ಹೀಗಾಗಿ ಹೈಕೋರ್ಟ್ ಜಾಮೀನು ಆದೇಶಕ್ಕೆ ತಡೆ ನೀಡುವಂತೆ ವಕೀಲರು ಸುಪ್ರೀಂಕೋರ್ಟ್‌ಗೆ ಮನವಿ ಮಾಡಲಿದ್ದಾರೆ.

ಇದನ್ನೂ ಓದಿವಿವಾದಿತ ಆಧ್ಯಾತ್ಮಿಕ ಗುರು ನಿತ್ಯಾನಂದ ಸಾವು ವದಂತಿ..! ಆ ಒಂದು ವಿಡಿಯೋ ನೀಡಿದ ಸುಳಿವೇನು..?

See also  ಗಗನಯಾತ್ರಿ ಸುನಿತಾ ವಿಲಿಯಮ್ಸ್ ಇನ್ನು ಭೂಮಿಗೆ ಮರಳುವುದು 2025ಕ್ಕೆ..! ನಾಸಾ ಈ ಬಗ್ಗೆ ಹೇಳಿದ್ದೇನು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget