ದೇಶ-ಪ್ರಪಂಚ

ಬಡವರಿಗಾಗಿ ಮಿಡಿದ ಸೂಪರ್‌ ಸ್ಟಾರ್ ರಜನಿಕಾಂತ್ ಹೃದಯ..!12 ಎಕರೆ ಜಮೀನಿ​​ನಲ್ಲಿ ಆಸ್ಪತ್ರೆ ನಿರ್ಮಿಸಲು ಮುಂದಾದ ತಲೈವಾ..!ಏನಿದರ ಸ್ಪೆಶಾಲಿಟಿ

ನ್ಯೂಸ್ ನಾಟೌಟ್‌:ಬಡವರಿಗಾಗಿ ಸೂಪರ್​ ಸ್ಟಾರ್​ ರಜನಿಕಾಂತ್​ ಅವರ ಹೃದಯ ಮಿಡಿದಿದೆ.ಹೌದು,ಬಹುಸಂಖ್ಯಾ ಅಭಿಮಾನಿಗಳನ್ನು ಹೊಂದಿರುವ ನಟ ಇದೀಗ ೧೨ ಎಕರೆ ಎಕರೆ ಜಮೀನ್​​ನಲ್ಲಿ ಆಸ್ಪತ್ರೆ ನಿರ್ಮಿಸಲು ತಲೈವಾ ಮುಂದಾಗಿದ್ದಾರೆ.

ಸದ್ಯ ‘ಲಾಲ್​ ಸಲಾಂ’ ಸಿನಿಮಾದ ಬಳಿಕ ‘ವೆಟ್ಟೈಯನ್’​ ಸಿನಿಮಾದಲ್ಲಿ ರಜನಿ ಬ್ಯುಸಿಯಾಗಿರುವ ನಟ ಇದೇ ವರ್ಷ ಈ ಸಿನಿಮಾ ರಿಲೀಸ್​​ ಆಗುವ ಸಾಧ್ಯತೆ ಇದೆಯಾದರೂ ನಟ ರಜನಿಕಾಂತ್​​ ಬಡವರ ಚಿಕಿತ್ಸೆಗಾಗಿ ಚೆನ್ನೈನಲ್ಲಿ ಆಸ್ಪತ್ರೆ ನಿರ್ಮಿಸುತ್ತಿದ್ದಾರೆ. 12 ಎಕರೆ ಜಮೀನ್​​ನಲ್ಲಿ ಆಸ್ಪತ್ರೆ ನಿರ್ಮಿಸಲು ತಲೈವಾ ಮುಂದಾಗಿದ್ದಾರೆ.

ಇತ್ತೀಚೆಗೆ ಸೂಪರ್​ ಸ್ಟಾರ್​ ಚೆನ್ನೈನ ತಿರುಪ್ಪೋರೂರಿನ ರಿಜಿಸ್ಟಾರ್​ ಕಚೇರಿ ಭೇಟಿ ಕೊಟ್ಟಿದ್ದರು. ಅಲ್ಲಿ ಹೊಸದಾಗಿ ನಿರ್ಮಿಸಿರುವ ಜಮೀನಿನ ದಾಖಲೆ ಪತ್ರ ಪರಿಶೀಲನೆ ನಡೆಸಿದ್ದರು. ಇನ್ನು ತಿರುಪ್ಪೋರೂರಿಗೆ ತಲೈವಾ ಬರುತ್ತಾರೆಂದು ಗೊತ್ತಾಗುತ್ತಿದ್ದಂತೆ ಅಭಿಮಾನಿಗಳು ಸೇರಿದ್ದರು.

ಮಾಹಿತಿಯಂತೆಯೇ, ರಜನಿಕಾಂತ್​ ಚೆನ್ನೈನಿಂದ ಒಎಂಆರ್​ ರಸ್ತೆಯ ಮೂಲಕ ತಲಂಬೂರಿಗೆ ಹೋಗುವ ಮಾರ್ಗದಲ್ಲಿ ಆಸ್ಪತ್ರೆ ನಿರ್ಮಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.ಸುಮಾರು 12 ಎಕರೆ ಜಮೀನಿನಲ್ಲಿ ಆಸ್ಪತ್ರೆ ನಿರ್ಮಾಣವಾಗುತ್ತಿದೆ.ಸಿನಿಮಾ ವಿಚಾರಕ್ಕೆ ಬರೋದಾದ್ರೆ ಲಾಲ್​ ಸಲಾಂ ಸಿನಿಮಾದ ಬಳಿಕ ವೆಟ್ಟೈಯನ್​ ಸಿನಿಮಾದಲ್ಲಿ ನಟಿಸುತ್ತಿದ್ದು,ಈ ಸಿನಿಮಾ ಅಂತಿಮ ಹಂತ ತಲುಪಿದೆ. ಹೈದರಾಬಾದ್​ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ರಿತಿಕಾ ಸಿಂಗ್​, ರಾಣಾ ದಗ್ಗುಬಾಟಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Related posts

ಐದು ವರ್ಷದ ಬಾಲಕ ಕಾನ್‌ಸ್ಟೇಬಲ್ ! ಪೊಲೀಸ್‌ ವರಿಷ್ಠಾಧಿಕಾರಿ ಆದೇಶ!

ಯಶ್ ನೋಡಲು ಬಂದ ಅಭಿಮಾನಿಯ ಕಾಲಿನ ಸ್ಥಿತಿ ಹೇಗಿದೆ ನೋಡಿ..! ಕಾಲ ಮೇಲೆಯೇ ಹತ್ತಿದ ನಟನ ಬೆಂಗಾವಲು ಕಾರು..!

ಮ್ಯಾನ್ಮಾರ್‌ ಉಗ್ರರ ಮೇಲೆ ಭಾರತ ಬಾಂಬ್‌ ದಾಳಿ! ಅಷ್ಟಕ್ಕೂ ಅಂದು ಅಲ್ಲೇನಾಯ್ತು..?