ಕರಾವಳಿ

ಕಾರ್ಕಳ ಶಾಸಕ ಸುನಿಲ್ ಕುಮಾರ್ ಗೆ ಅನಾರೋಗ್ಯ, ಉಡುಪಿಯ ಆಸ್ಪತ್ರೆಗೆ ದಾಖಲು

240

ನ್ಯೂಸ್ ನಾಟೌಟ್ : ಕಾರ್ಕಳದ ಜನಪ್ರಿಯ ಶಾಸಕ ಮಾಜಿ ಸಚಿವ ವಿ. ಸುನೀಲ್ ಕುಮಾರ್ ಅನಾರೋಗ್ಯಕ್ಕೆ ತುತ್ತಾಗಿ ಗುರುವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅವರಿಗೆ ವಿಪರೀತ ಬೆನ್ನು ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನ್ಯೂಸ್ ನಾಟೌಟ್ ಗೆ ಅವರ ಆಪ್ತ ಮೂಲಗಳು ಮಾಹಿತಿ ನೀಡಿವೆ.

ಕಳೆದ ಹಲವಾರು ವರ್ಷಗಳಿಂದ ಸುನಿಲ್ ಕುಮಾರ್ ಅವರಿಗೆ ಪದೇ ಪದೇ ಬೆನ್ನು ನೋವಿನಿಂದ ಕಾಣಿಸಿಕೊಳ್ಳುತ್ತಿತ್ತು. ಆದರೆ ಬಿಡುವಿಲ್ಲದ ಕೆಲಸದ ಒತ್ತಡದಿಂದ ಸುನಿಲ್ ಅವರಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಕ್ಕೆ ಸಾಧ್ಯವಾಗಲಿಲ್ಲ. ಇದೀಗ ವೈದ್ಯರಿಗೆ ಸುನಿಲ್ ತೋರಿಸಿಕೊಂಡಿದ್ದಾರೆ. ಈ ವೇಳೆ ವೈದ್ಯರು ಒಂದು ವಾರಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಸಾರ್ವಜನಿಕ ಸಂಪರ್ಕದಿಂದ ಕೆಲವು ದಿನಗಳ ಕಾಲ ಸುನಿಲ್ ದೂರ ಉಳಿಯಲಿದ್ದಾರೆ ಎಂದು ನ್ಯೂಸ್ ನಾಟೌಟ್ ಗೆ ತಿಳಿಸಲಾಗಿದೆ.

See also  ಆರೋಗ್ಯ ಸ್ಥಿರ, ಸಿಟಿ ಸ್ಕ್ಯಾನ್‌ ಕೂಡ ನಾರ್ಮಲ್‌, ಆದ್ರೂ ಡಿಸ್ಚಾರ್ಜ್‌ ಆಗೊಲ್ಲ ಅಂತಾಳೆ ಚೈತ್ರಾ ಕುಂದಾಪುರ! ಚೈತ್ರಾ ಕುಂದಾಪುರ ಹೈಡ್ರಾಮಾಕ್ಕೆ ಕಾರಣವೇನು?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget