ನ್ಯೂಸ್ ನಾಟೌಟ್: ಸ್ಯಾಂಡಲ್‌ವುಡ್ ನಟ ದರ್ಶನ್ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಆಪ್ತರನ್ನು ಅನ್ ಫಾಲೋ ಮಾಡಿದ ಬೆನ್ನಲ್ಲೇ ತಾಯಿ ಸಮಾನರು ಎಂದು ಹೇಳಿಕೊಂಡಿದ್ದ ಸುಮಲತಾ ಅಂಬರೀಶ್ ಪೋಸ್ಟ್ ವೊಂದನ್ನು ಹಾಕಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
ಬೆಸ್ಟ್ ಆಕ್ಟಿಂಗ್ ಆಸ್ಕರ್ ಅವಾರ್ಡ್ ಯಾರಿಗೆ ಹೋಗುತ್ತೆ ಅಂದ್ರೆ.. ಯಾರು ಸತ್ಯವನ್ನ ತಿರುಚುತ್ತಾರೋ, ತಮ್ಮದೇ ತಪ್ಪು ಇಟ್ಕೊಂಡು ಬೇರೆಯವರ ಮೇಲೆ ಹಾಕಿ ನೋವು ಮಾಡೋದು, ತಮ್ಮ ಮೇಲಿನ ನಿಂದನೆಯನ್ನ ಬೇರೆಯವರ ಮೇಲೆ ಹಾಕೋದು, ಗೂಬೆ ಕೂರಿಸೋದು ಮಾಡಿ ತಮ್ಮನ್ನ ತಾವು ಹೀರೋ ಎಂಬಂತೆ ಬಿಂಬಿಸಿಕೊಳ್ಳೋದು ಎಂದು ಸುಮಲತಾ ಪೋಸ್ಟ್ ಮಾಡಿದ್ದಾರೆ.
ತಾಯಿ ಸಮಾನರಾದ ಸುಮಲತಾ, ತಮ್ಮನ ಸಮಾನರಾದ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಅವರು ಸೇರಿದಂತೆ ಆರು ಮಂದಿ ಆಪ್ತರನ್ನು ನಟ ದರ್ಶನ್ ಇನ್ಟಾಗ್ರಾಂ ನಲ್ಲಿ ಅನ್ ಫಾಲೋ ಮಾಡಿದ್ದಾರೆ. ದರ್ಶನ್ ಈ ನಡೆ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
ಆರು ಮಂದಿಯನ್ನು ದರ್ಶನ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಫಾಲೋ ಮಾಡುತ್ತಿದ್ದರು. ಆದರೆ, ಈಗ ಅವರ ಇನ್ ಸ್ಟಾ ಖಾತೆಯಲ್ಲಿ ‘೦’ ಫಾಲೋ ಇದೆ.