ನ್ಯೂಸ್ ನಾಟೌಟ್: ಸುಳ್ಯ ಮೂಲದ ವಿವಾಹಿತ ಮಹಿಳೆ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಭಾರಿ ಸಂಚಲನ ಮೂಡಿಸಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹತ್ವದ ಮತ್ತೊಂದು ಬೆಳವಣಿಗೆ ನಡೆದಿದೆ. ಐಶ್ವರ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಸ್ಟಡಿಯಲ್ಲಿದ್ದ ಐಶ್ವರ್ಯ ಗಂಡ, ಮಾವ ಹಾಗೂ ಮನೆಯವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಐಶ್ವರ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಆಕೆಯ ಗಂಡ ರಾಜೇಶ್, ಮಾವ ಕಾಪಿಲ ಗಿರಿಯಪ್ಪ ಗೌಡ,ಅತ್ತೆ ಸೀತಾ, ಮೈದುನ ವಿಜಯ್,ಓರಗಿತ್ತಿ ತಸ್ಮಯ್ ಇದುವರೆಗೆ ಪೊಲೀಸ್ ವಶದಲ್ಲಿದ್ದರು. ಗುರುವಾರ ಅವರನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ತಿಳಿದು ಬಂದಿದೆ. ಆತ್ಮಹತ್ಯೆ ಮಾಡಿಕೊಂಡಿದ್ದ ಗೃಹಿಣಿ ಐಶ್ವರ್ಯ ಮದುವೆಗದ್ದೆ ಈಕೆಯ ಪತಿ ರಾಜೇಶ್ ಉದ್ಯಮಿ,ಸುಳ್ಯ ತಾಲೂಕಿನ ಕನಕಮಜಲು ಕಾಪಿಲ ನಿವಾಸಿ. ಐಶ್ವರ್ಯ ಐಸ್ ಕ್ರೀಮ್ ಉದ್ಯಮ ನಡೆಸುತ್ತಿದ್ದ ಗಿರಿಯಪ್ಪ ಗೌಡ ಅವರ ಸೊಸೆಯಾಗಿದ್ದರು. ಇದೇ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ಮದುವೆಗದ್ದೆ ನಿವಾಸಿಗಳಾದ ಸುಬ್ರಹ್ಮಣ್ಯ ಗೌಡ ಮತ್ತು ಉಷಾ ದಂಪತಿಯ ಪುತ್ರಿ ಈ ಐಶ್ವರ್ಯ. 5 ವರ್ಷಗಳ ಹಿಂದೆ ಕಾಪಿಲ ಗಿರಿಯಪ್ಪ ಗೌಡ ಅವರ ಮಗ, ಡೈರಿ ರಿಚ್ ಐಸ್‌ಕ್ರೀಂ ಕಂಪೆನಿ (ಸೀತಾ ಐಸ್‌ಕ್ರಿಂ ಪ್ರೈವೆಟ್ ಲಿಮಿಟೆಡ್) ಮಾಲೀಕ ರಾಜೇಶ್ ಎಂಬಾತನಿಗೆ ಮದುವೆ ಮಾಡಿ ಕೊಡಲಾಗಿತ್ತು ಐಶ್ವರ್ಯಾ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ರಾಜೇಶ್ ಸ್ವಂತ ಐಸ್ ಕ್ರೀಂ ಉದ್ಯಮ ನಡೆಸುತ್ತಿದ್ದ. ಇಬ್ಬರೂ ಬೆಂಗಳೂರಿನಲ್ಲಿ ನೆಲೆಸಿದ್ದರು. ಐಶ್ವರ್ಯಾ ಅವರ ಪೋಷಕರು ಕೂಡ ಬೆಂಗಳೂರಿನಲ್ಲಿ ನೆಲೆಸಿದ್ದರು.
ಗಂಡನ ಮನೆ ಕಿರುಕುಳಕ್ಕೆ ಬೇಸತ್ತು ಅ.3ರಂದು ಐಶ್ವರ್ಯಾ ತನ್ನ ಪೋಷಕರ ಮನೆಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಕೆ ಈ ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ. ಮನೆಯಲ್ಲಿ ಅ.26 ರಂದು ಯಾರೂ ಇಲ್ಲದ ವೇಳೆ ಫ್ಯಾನ್ಗೆ ನೇಣು ಬಿಗಿದುಕೊಂಡು ಗೃಹಿಣಿ ಐಶ್ವರ್ಯ ಆತ್ಮಹತ್ಯೆ ಮಾಡಿದ್ದ ಪ್ರಕರಣ ಸಂಬಂಧ ಗೋವಿಂದರಾಜನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಐಶ್ವರ್ಯ ಆತ್ಮಹತ್ಯೆ ಬಳಿಕ ದೂರು ದಾಖಲಾಗುತ್ತಿದ್ದಂತೆ ರಾಜೇಶ್ ಕುಟುಂಬಸ್ಥರು ಗೋವಾಗೆ ಎಸ್ಕೇಪ್ ಆಗಿ ಅಲ್ಲಿ ಮೋಜು ಮಸ್ತಿ ಪಾರ್ಟಿ ಮಾಡಿದ್ದರು. ಅಲ್ಲಿಂದ ಮುಂಬೈ ತೆರಳುವ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದರು. ಐಶ್ವರ್ಯ ಮತ್ತು ರಾಜೇಶ್‌ಗೆ ಸಂಬಂಧಿಕರೇ ಹೇಳಿ ಮದುವೆ ಮಾಡಿಸಿದ್ದರು. ಅದೇ ಸಂಬಂಧಿಕರು ಮದುವೆ ಮುರಿಯಲು ಕಾರಣರಾಗಿದ್ದಾರೆ. ಮದುವೆ ಮುರಿದುಬಿದ್ದ ಕಾರಣ ಗೃಹಿಣಿ ಐಶ್ವರ್ಯ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ 5 ವರ್ಷಗಳ ಹಿಂದೆ ಕುಟುಂಬಸ್ಥರ ನಿಶ್ಚಯದಂತೆ ರಾಜೇಶ್ ಜೊತೆ ಐಶ್ವರ್ಯ ಮದುವೆಯಾಗಿದ್ದರು. ಐಶ್ವರ್ಯ ಯುಎಸ್ ನಲ್ಲಿ ಎಂ ಎಸ್ ಮಾಡಿದ್ದು ಪ್ರತಿಭಾವಂತೆ ಹುಡುಗಿಯಾಗಿದ್ದಳು.
ರಾಜೇಶ್ ಕುಟುಂಬ ಪ್ರಸಿದ್ಧ ಸೀತ ಡೈರಿ ರಿಚ್ ಐಸ್ ಕ್ರೀಮ್ ಕಂಪನಿ ನಡೆಸುತ್ತಿತ್ತು. ಇದೇ ಕಂಪನಿಯಲ್ಲಿ ಐಶ್ವರ್ಯ ಸಂಬಂಧಿ ರವೀಂದ್ರ ಆಡಿಟರ್ ಆಗಿದ್ದ. ರವೀಂದ್ರ ಎಂಬಾತ ಐಶ್ವರ್ಯ ತಂದೆ ಸುಬ್ರಹ್ಮಣ್ಯ ಗೌಡರ ತಂಗಿಯ ಗಂಡ. ರವೀಂದ್ರನೇ ಮುಂದೆ ನಿಂತು ರಾಜೇಶ್ ಹಾಗೂ ಐಶ್ವರ್ಯ ಮದುವೆ ಮಾಡಿಸಿದ್ದ. ಕಾಲನಂತರ ಆಸ್ತಿ ವಿಚಾರವಾಗಿ ರವೀಂದ್ರ ಮತ್ತು ಸುಬ್ರಮಣ್ಯ ಕುಟುಂಬಕ್ಕೆ ಕಲಹ ಉಂಟಾಗಿತ್ತು. ತಂದೆ ಮೇಲಿನ ದ್ವೇಷಕ್ಕೆ ಮಗಳ ಸಂಸಾರದಲ್ಲಿ ದಾಯಾದಿಗಳು ಹುಳಿ ಹಿಂಡಿದ್ದಾರೆ. ಐಶ್ವರ್ಯ ಮೇಲೆ ಕೆಟ್ಟದಾಗಿ ರಾಜೇಶ್ ಕುಟುಂಬಕ್ಕೆ ರವೀಂದ್ರ ಕುಟುಂಬ ಚೂ ಬಿಟ್ಟಿದೆ, ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ರವೀಂದ್ರ ಕುಟುಂಬ ಐಶ್ವರ್ಯ ಚಾರಿತ್ರ್ಯ ವಧೆ ಮಾಡಿ ಪತಿ ರಾಜೇಶ್ ಕುಟುಂಬಕ್ಕೆ ಇಲ್ಲ ಸಲ್ಲದ ಕಟ್ಟುಕಥೆ ಹೇಳಿದ್ದಾರೆ. ಅಷ್ಟೇ ಅಲ್ಲದೇ ಐಶ್ವರ್ಯಳ ಪೋಟೋಗಳನ್ನ ಕಳುಹಿಸಿ ನಿಮ್ಮ ಸೊಸೆ ಸರಿಯಿಲ್ಲ ಎಂದು ಕೆಟ್ಟದಾಗಿ ಬಿಂಬಿಸಿದ್ದಾರೆ. ಇದರಿಂದಾಗಿ ರಾಜೇಶ್ ಕುಟುಂಬ ಪ್ರತಿನಿತ್ಯ ಐಶ್ವರ್ಯಳಿಗೆ ಕಿರುಕುಳ ನೀಡುತ್ತಿತ್ತು. ಐಶ್ವರ್ಯ ಮಾವ ಗಿರಿಯಪ್ಪ, ಅತ್ತೆ ಸೀತಾ ಹಾಗೂ ಮೈದುನ ವಿಜಯ್ ಹಾಗೂ ಆತನ ಪತ್ನಿ ತಸ್ಮಯ್ ಕೂಡ ಕಿರುಕುಳ ನೀಡಿದ್ದಾರೆ. ವರದಕ್ಷಿಣೆ ತರುವಂತೆಯೂ ಹೇಳಿ ಕಿರುಕುಳ ಆರೋಪ ಕೇಳಿಬಂದಿದೆ. ಎಷ್ಟೇ ಕಿರುಕುಳ ಕೊಟ್ರು ಗಂಡನಿಗಾಗಿ ಐಶ್ವರ್ಯ ಸುಮ್ಮನಿದ್ದಳು.
ತಾನು ದುಡಿದ ಹಣದಲ್ಲಿ ಗಂಡನಿಗೆ ಐಶಾರಾಮಿ ಸೂಪರ್ ಬೈಕ್ ಹಾಗೂ ಚಿನ್ನದ ಒಡವೆ ಸಹ ಕೊಡಿಸಿದ್ದಳಂತೆ ಐಶ್ವರ್ಯ. ಆದ್ರೆ ಕುಟುಂಬಸ್ಥರ ಮಾತನ್ನ ಕೇಳಿ ಗಂಡ ರಾಜೇಶ್ ಕೂಡ ಹೆಂಡತಿಗೆ ನಿಂದಿಸಿ, ಕಿರುಕುಳ ನೀಡಲು ಆರಂಭಿಸಿದ್ದಾನೆ. ಇದರಿಂದಾಗಿ ನೊಂದು ಕಳೆದ 20 ದಿನಗಳ ಹಿಂದೆ ಗಂಡನ ಮನೆಬಿಟ್ಟು ಬೆಂಗಳೂರಿನಲ್ಲಿರುವ ತವರು ಮನೆಗೆ ಐಶ್ವರ್ಯ ಬಂದಿದ್ದಳು. ಅಕ್ಟೋಬರ್ 26 ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಳು. ಘಟನೆ ಸಂಬಂಧ ಐಶ್ವರ್ಯ ತಾಯಿ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗಂಡ ರಾಜೇಶ್, ಅತ್ತೆ ಸೀತ, ಮಾವ ಗಿರಿಯಪ್ಪ, ಮೈದುನ ವಿಜಯ ಹಾಗೂ ಆತನ ಪತ್ನಿ ತಸ್ಮೈ ಮೇಲೆ ದೂರು ನೀಡಿದ್ದಾರೆ. ಜೊತೆಗೆ ಸಂಸಾರ ಒಡೆಯಲು ಪ್ರೇರೆಣೆ ನೀಡಿದ್ದ ಸಂಬಂಧಿಕರಾದ ರವೀಂದ್ರ , ಗೀತಾ , ಶಾಲಿನಿ , ಓಂಪ್ರಕಾಶ್ ಎಂಬುವವರ ಮೇಲೂ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿ ಐಶ್ವರ್ಯ ಪತಿ ರಾಜೇಶ್ ಸೇರಿ 5 ಮಂದಿ ಆರೋಪಿಗಳನ್ನ ಸದ್ಯಕ್ಕೆ ಗೋವಿಂದರಾಜನಗರ ಪೊಲೀಸರು ಬಂಧಿಸಿದ್ದಾರೆ. ಸದ್ಯ ಐಶ್ವರ್ಯ ತಂದೆಯ ಸಹೋದರಿ ಶಾಲಿನಿ ಹಾಗೂ ಓಂಪ್ರಕಾಶ್ ಅಮೆರಿಕಾದಲ್ಲಿದ್ದಾರೆ. ಸಾವಿನಲ್ಲೂ ಮಾನವೀಯತೆ ಮೆರೆದ ಐಶ್ವರ್ಯ ಕುಟುಂಬಸ್ಥರು ಆಕೆಯ ಸಾವಿನ ಬಳಿಕ ಆಕೆಯ ಕಣ್ಣುದಾನ ಮಾಡಿದ್ದಾರೆ.