ನ್ಯೂಸ್ ನಾಟೌಟ್ : ಕೆನರಾ ಕೈಗಾರಿಕಾ ಸಂಘ (ರಿ) ಬೈಕಂಪಾಡಿ ಇದರ ನಿರ್ದೇಶಕರುಗಳ ಚುನಾವಣೆ ಜ. 9 ರಂದು ನಡೆಯಿತು. ನಿರ್ದೇಶಕರಾಗಿ ಬೈಕಂಪಾಡಿ ಎಸ್.ಜೆ.ಆರ್.ಟೆಕ್ನಾಲಜೀಸ್ ಮಾಲಕ ಸುಂದರ ಗೌಡ ಇವರು ಅತ್ಯಧಿಕ ಸಂಖ್ಯೆಯ ಮತಗಳಿಂದ ಗೆದ್ದು ಚುನಾಯಿತರಾಗಿದ್ದಾರೆ.
ಇವರು ಗುತ್ತಿಗಾರು ಸಮೀಪದ ಬಳ್ಳಕ್ಕದ ನಿವಾಸಿಯಾಗಿದ್ದು, ಕಾಣಿಯೂರಿನ ಅಬೀರ ಕುಟುಂಬದವರು.ಸುಮಾರು 20 ವರ್ಷಗಳಿಂದ ಮಂಗಳೂರಿನಲ್ಲಿ ಎಸ್.ಜೆ.ಆರ್ ಟೆಕ್ನಾಲಜೀಸ್ ಎಂಬ ತನ್ನ ಮಾಲಿಕತ್ವದ ಸಂಸ್ಥೆಯನ್ನು ಮುನ್ನಡೆಸುತ್ತಾ ಮಂಗಳೂರಿನಲ್ಲಿ ನೆಲೆಸಿದ್ದಾರೆ.ದಿ.ಧರ್ಮಪಾಲ ಗೌಡ ಹಾಗೂ ದಿ.ರಾಮಕ್ಕ ದಂಪತಿಗಳ ಪುತ್ರರಾಗಿದ್ದಾರೆ.