ಕರಾವಳಿಸುಳ್ಯ

ಸುಳ್ಯ:ಬಸ್ ಹತ್ತಲೆಂದು ಹೋದ ಸಂದರ್ಭ ಮಹಿಳೆಗೆ ಬೈಕ್ ಡಿಕ್ಕಿ ,ಗಂಭೀರ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು

ನ್ಯೂಸ್ ನಾಟೌಟ್ : ಮಹಿಳೆಯೋರ್ವರು ಬಸ್ ಹತ್ತಲೆಂದು ಹೋದ ಸಂದರ್ಭದಲ್ಲಿ ಬೈಕ್ ಡಿಕ್ಕಿಯಾಗಿ ತಲೆಗೆ ಗಂಭೀರ ಪ್ರಮಾಣದ ಗಾಯಗಳಾಗಿರುವ ಘಟನೆ ಜಾಲ್ಸೂರು ಗ್ರಾಮದ ಸೋಣಂಗೇರಿಯಲ್ಲಿ ಆ.26ರಂದು ಬೆಳಿಗ್ಗೆ ಸಂಭವಿಸಿದೆ.

ಸತ್ಯಭಾಮ ಎಂಬವರು ದುಗಲಡ್ಕದ ಕೆ.ಎಫ್.ಡಿ.ಸಿ. ರಬ್ಬರ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಬೆಳಿಗ್ಗೆ ಸೋಣಂಗೇರಿಯಲ್ಲಿ ಬಸ್ ಗಾಗಿ ಕಾಯುತ್ತಿದ್ದರೆನ್ನಲಾಗಿದೆ.ಸೋಣಂಗೇರಿಯ ಕುಕ್ಕಂದೂರು ನಿವಾಸಿಯಾಗಿರುವ ಸತ್ಯಭಾಮ ಅವರು ಬಸ್ ಬಂದು ಸೋಣಂಗೇರಿ ಜಂಕ್ಷನ್ ನ ಕುಕ್ಕೆ ಸುಬ್ರಹ್ಮಣ್ಯ ರಸ್ತೆಯಲ್ಲಿ ಹೋಗಿ ನಿಂತಿದ್ದಾರೆ. ಈ ವೇಳೆಗಾಗಲೇ ಮಹಿಳೆ ಬಸ್ ಹತ್ತಲೆಂದು ಹೋದ ಸಂದರ್ಭದಲ್ಲಿ ಸುಳ್ಯದಿಂದ ಬೆಳ್ಳಾರೆಗೆ ತೆರಳುತ್ತಿದ್ದ ಬೈಕ್ ಢಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.

ಬೈಕ್ ಢಿಕ್ಕಿಯಾದ ರಭಸಕ್ಕೆ ಸತ್ಯಭಾಮ ಅವರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.ಈ ವೇಳೆ ತಲೆ ಹಾಗೂ ಕೈಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.ತಲೆಗೆ ಗಂಭೀರವಾಗಿ ಗಾಯಗೊಂಡು ರಕ್ತ ಸುರಿಯುತ್ತಿದ್ದು,ಕೂಡಲೇ ಸ್ಥಳೀಯರು ಅವರನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು‌. ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

https://www.youtube.com/watch?v=jSafzs4BB_c

Related posts

ಸರ್ಕಾರಿ ಬಸ್ ಮತ್ತು ಕಾರಿನ ನಡುವೆ ಭೀಕರ ಅಪಘಾತ! ಸ್ಥಳದಲ್ಲೇ ಮೃತಪಟ್ಟ ತಾಯಿ-ಮಗ ..!

ಬೆಳ್ತಂಗಡಿ: ಮೂರು ವರ್ಷದ ಮಗು ದುರಂತ ಅಂತ್ಯ..! ರಸ್ತೆ ಬದಿಯ ಮನೆಯಿಂದ ಹೊರ ಬಂದ ಮಗು ಮತ್ತೆ ಮನೆ ಸೇರಲೇ ಇಲ್ಲ..!

ಹಿಂದೂ ಹುಡುಗಿಯ ಇಸ್ಲಾಂ ಧರ್ಮಕ್ಕೆ ಮತಾಂತರಕ್ಕೆ ಯತ್ನ