ಕರಾವಳಿಸುಳ್ಯ

ಸುಳ್ಯ:ರಸ್ತೆ ಬದಿಯಲ್ಲಿ ಹೋಗುತ್ತಿದ್ದಾಗ ಯಮರೂಪದಲ್ಲಿ ಬಂದ ಕಾರು..!, ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ದುರಂತ ಅಂತ್ಯ

285

ನ್ಯೂಸ್ ನಾಟೌಟ್ : ಕಳೆದ ಕೆಲ ಸಮಯದ ಹಿಂದೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಅಪಘಾತವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.ದೊಡ್ಡಡ್ಕ ನಿವಾಸಿ ಮಹಾಲಿಂಗ (63) ದುರಂತ ಅಂತ್ಯ ಕಂಡ ವ್ಯಕ್ತಿಯೆಂದು ತಿಳಿದು ಬಂದಿದೆ.

ಕಳೆದ ಮೂರು ತಿಂಗಳ ಹಿಂದೆ ಸುಳ್ಯ ತಾಲೂಕಿನಲ್ಲಿರುವ ಕಲ್ಲುಗುಂಡಿ ಪೇಟೆಯಲ್ಲಿ ಪಾದಾಚಾರಿ ವ್ಯಕ್ತಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು.ಈ ವೇಳೆ ಸುಳ್ಯ ಕಡೆಯಿಂದ ಮಡಿಕೇರಿಯತ್ತ ಪ್ರಯಾಣಿಸುತ್ತಿದ್ದ ಕಾರೊಂದು ಅವರಿಗೆ ಡಿಕ್ಕಿಯಾಗಿತ್ತು.ಅಪಘಾತದ ರಭಸಕ್ಕೆ ವ್ಯಕ್ತಿ ರಸ್ತೆಗೆ ಬಿದ್ದಿದ್ದರು. ತಕ್ಷಣವೇ ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಗಂಭೀರ ಗಾಯಗೊಂಡಿದ್ದ ಅವರಿಗೆ ಚಿಕಿತ್ಸೆ ಮುಂದುವರಿದಿತ್ತು.ಮಂಗಳೂರಿನ ಮತ್ತೊಂದು ಆಸ್ಪತ್ರೆಗೂ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.ಆದರೂ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸಗಳಾಗಲಿಲ್ಲ. ಬಳಿಕ ತಮ್ಮ ಮನೆಗೆ ಕರೆ ತರಲಾಗಿತ್ತು.ಇದೀಗ ಅವರು ಮನೆಯಲ್ಲಿ ಅಸುನೀಗಿದ್ದಾರೆಂದು ತಿಳಿದು ಬಂದಿದೆ. ಮಹಾಲಿಂಗ ಅವರು ಪತ್ನಿ ಹಾಗೂ ಐವರು ಮಕ್ಕಳು,ಕುಟುಂಬಸ್ಥರು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

See also  ಉಡುಪಿ: 'ಕಾಂತಾರ'-1 ಸಹನಟ ಕಪಿಲ್ ನದಿಗೆ ಈಜಲು ತೆರಳಿ ಸಾವು; ಹೊಂಬಾಳೆ ಫಿಲ್ಮ್ಸ್ ಪ್ರತಿಕ್ರಿಯಿಸಿ ಹೇಳಿದ್ದೇನು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget