ಕರಾವಳಿಸುಳ್ಯ

ಸುಳ್ಯ: ಎನ್‌ಎಮ್‌ಸಿಯಲ್ಲಿ ಮನೆ ಮಾಡಿದ ವಾರ್ಪಿಕೋತ್ಸವ ಸಂಭ್ರಮ, ಕಲರ್ಫುಲ್ ಉಡುಗೆಯಲ್ಲಿ ಮಿಂಚಿದ ವಿದ್ಯಾರ್ಥಿ,ವಿದ್ಯಾರ್ಥಿನಿಯರು..!

212

ನ್ಯೂಸ್ ನಾಟೌಟ್ :ಸುಳ್ಯದ ಎನ್.ಎಂ.ಸಿ. ಪ.ಪೂ. ಕಾಲೇಜಿನಲ್ಲಿ ವಾರ್ಷಿಕೋತ್ಸವ ವಿಜೃಂಭಣೆಯಿಂದ ನಡೆಯಿತು. ಲೇಖಕ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ. ನಾರಾಯಣ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ.ಓ.ಎಲ್.ಇ. ಉಪಾಧ್ಯಕ್ಷೆ ಶ್ರೀಮತಿ ಶೋಭಾ ಚಿದಾನಂದ ವಹಿಸಿದ್ದರು. ಅತಿಥಿಗಳಾಗಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ, ಕಾಲೇಜಿನ ಶೈಕ್ಷಣಿಕ ಸಲಹೆಗಾರ ಚಂದ್ರಶೇಖರ ಪೇರಾಲ್ ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಟಿ. ನಾರಾಯಣ ಭಟ್ ಅವರು ‘ ವಿದ್ಯಾರ್ಥಿಗಳಿಗೆ ಗುರಿ ಮುಖ್ಯ.ಪ್ರತಿಯೊಂದು ಹಂತದಲ್ಲಿಯೂ ಗುರಿಯನ್ನು ನೆನಪಿಸಿಕೊಂಡು ಅದನ್ನು ಹಿಂಬಾಲಿಸುತ್ತಾ ಸಾಗಬೇಕು.ಹೀಗೆ ಮಾಡಿದ್ದಲ್ಲಿ ಯಶಸ್ಸು ಖಂಡಿತ ಲಭಿಸುತ್ತದೆ.ಸದಾ ಧನಾತ್ಮಕವಾಗಿ ಯೋಚನೆಗಳನ್ನು ಮಾಡಬೇಕು.ನಮ್ಮ ನಡೆ ನುಡಿ ಉತ್ತಮವಾಗಿರಬೇಕು.ಸ್ಪಷ್ಟ ಉದ್ದೇಶದೊಂದಿಗೆ ಆತ್ಮವಿಶ್ವಾಸದಲ್ಲಿ ಹೆಜ್ಜೆ ಇಟ್ಟರೆ ನೀವಂದು ಕೊಂಡ ಸಾಧನೆಯನ್ನು ಸಾಧಿಸಲು ಖಂಡಿತ ಸಾಧ್ಯ.ಇದಕ್ಕೆ ಡಾ. ಕುರುಂಜಿಯವರೇ ನಮಗೆಲ್ಲರಿಗೂ ಮಾದರಿ ಎಂದರು.

ಬಳಿಕ ಮಾತನಾಡಿದ ಎ.ಓ.ಎಲ್.ಇ. ಉಪಾಧ್ಯಕ್ಷೆ ಶ್ರೀಮತಿ ಶೋಭಾ ಚಿದಾನಂದ ಅವರು ‘ಶಿಕ್ಷಣದ ಜತೆ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಳ್ಳಿ.ಕಠಿಣ ಪರಿಶ್ರಮದ ಮೂಲಕ ಯಶಸ್ಸುನ್ನು ನಿಮ್ಮದಾಗಿಸಿಕೊಳ್ಳಿ,ಯಾರಿಗೂ ಕೀಳರಿಮೆ, ಹಿಂಜರಿಕೆ ಬೇಡ.ನಿಮ್ಮ ಭವಿಷ್ಯವನ್ನು ನೀವೇ ನಿರ್ಧರಿಸಿ, ಆತ್ಮವಿಶ್ವಾಸದಿಂದ ಮುನ್ನಡೆಯಿರಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ‘ನಿಮ್ಮ ಕಮ್ಯುನಿಕೇಶನ್ ಸ್ಕಿಲ್ ಸುಧಾರಿಸಿಕೊಳ್ಳಿ,ಆಂಗ್ಲ ಭಾಷೆಯನ್ನೂ ಹಿಂಜರಿಕೆಯಿಲ್ಲದೆ ಮಾತನಾಡುವುದಕ್ಕೆ ಅಭ್ಯಾಸ ಮಾಡಿ.ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಕ್ರೀಡಾ ಚಟುವಟಿಕೆಯಲ್ಲಿಯೂ ಹೆಚ್ಚಿನ ಆಸಕ್ತಿ ವಹಿಸಿ ಪಾಲ್ಗೊಳ್ಳಿ,ಯಾವುದೇ ದುಶ್ಚಟಗಳಿಗೆ ಬಲಿಯಾಗದೇ,ಸಾಧಿಸಬೇಕೆನ್ನುವ ಹಠದೊಂದಿಗೆ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.

ವೇದಿಕೆಯಲ್ಲಿ ಪ್ರಾಚಾರ್ಯರಾದ ಮಿಥಾ ಲಿ.ಪಿ ರೈ, ವಿದ್ಯಾರ್ಥಿ ಕ್ಷೇಮಾಧಿಕಾರಿ ರೇಷ್ಮಾ ಎಂ.ಎಂ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಅಕ್ಷಯ್ ರೈ, ಆಜ್ಞಾ ಐಪಲ್, ಅಬ್ದುಲ್ ರೌಫ್, ಮನೋಜ್ ಎಸ್.ಆರ್ , ಅಂಬಿಕಾ ಕೆ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಅಭಿಜ್ಞಾ ಎನ್.ಎಂ ಪ್ರಾರ್ಥಿಸಿದರು. ವಿದ್ಯಾರ್ಥಿ ನಾಯಕ ಅಕ್ಷಯ್ ರೈ ಸ್ವಾಗತಿಸಿದರು. ಪ್ರಾoಶುಪಾಲೆ ಮಿಥಾಲಿ ಪಿ.ರೈ ವಾರ್ಷಿಕ ವರದಿ ವಾಚಿಸಿದರು.ಉಪನ್ಯಾಸಕಿ ನಯನ ಎಂ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ದತ್ತಿನಿಧಿ, ಶೈಕ್ಷಣಿಕ ಸಾಧಕರ ಪಟ್ಟಿಯನ್ನು ವಿದ್ಯಾರ್ಥಿ ಕ್ಷೇಮಾಧಿಕಾರಿ ರೇಷ್ಮಾ ಎಂ.ಎಂ, ಸಂದೇಶ ಪತ್ರ, ಕ್ರೀಡಾ ಸಾಧಕರ ಪಟ್ಟಿಯನ್ನು ಉಪನ್ಯಾಸಕಿ ಬೇಬಿ ವಿದ್ಯಾ ಪಿ.ಬಿ, ಸಾಂಸ್ಕೃತಿಕ, ಕ್ರೀಡಾ ವಿಜೇತರ ಪಟ್ಟಿಯನ್ನು ಉಪನ್ಯಾಸಕ ವಿನಯ ಎನ್.ಬಿ ವಾಚಿಸಿದರು. ವಿದ್ಯಾರ್ಥಿ ನಾಯಕಿ ಆಜ್ಞ ಐಪಲ್ ವಂದಿಸಿ, ವಿದ್ಯಾರ್ಥಿಗಳಾದ ಪಿ.ಆರ್ ಸ್ಮಿತಾ, ಕೃತ ಸ್ವರ ದೀಪ್ತ ಕೆ ಕಾರ್ಯಕ್ರಮ ನಿರೂಪಿಸಿದರು.

See also  ಕೆ.ವಿ.ಜಿ. ಕಾನೂನು ಕಾಲೇಜಿನಲ್ಲಿ ಕುರುಂಜಿ ವೆಂಕಟ್ರಮಣ ಗೌಡರ ಪುಣ್ಯಸ್ಮರಣೆ, ಭಾವಚಿತ್ರಕ್ಕೆ ಪುಷ್ಪಾರ್ಚನೆ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget