Latestಕರಾವಳಿ

ಸುಳ್ಯ: ವಿದ್ಯಾಮಾತಾ ಅಕಾಡೆಮಿಯಲ್ಲಿ UGC-NET / K-SET ಪರೀಕ್ಷೆಗಳ ತರಬೇತಿ ನಾಳೆಯಿಂದ(ಮೇ 7) ಪ್ರಾರಂಭ, ಈ ತರಬೇತಿಯಿಂದ ನಿಮಗೇನು ಲಾಭ?ಇಲ್ಲಿದೆ ಸಂಪೂರ್ಣ ಮಾಹಿತಿ

355

ನ್ಯೂಸ್‌ ನಾಟೌಟ್:ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರತಿಷ್ಠಿತ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯು ಕಳೆದ ಐದು ವರ್ಷಗಳ ಅವಧಿಯಲ್ಲಿ ಮಹತ್ತರ ಸಾಧನೆ ಮಾಡಿದೆ. ಯುವ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರಕಾರಿ ಮತ್ತು ಸರಕಾರಿ ಸ್ವಾಮ್ಯದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ನೀಡುತ್ತಾ ಯಶಸ್ವಿಯಾಗಿ ಮುನ್ನಡೆಯುತ್ತಿದೆ.ಆನ್ಲೈನ್ ಮೂಲಕವೂ ಕ್ರ್ಯಾಶ್ ಕೋರ್ಸ್ ತರಬೇತಿಯನ್ನು ಈ ಅಕಾಡೆಮಿ ಪ್ರಾರಂಭಿಸಿದೆ. ಇದೀಗ ವಿದ್ಯಾಮಾತಾ ಅಕಾಡೆಮಿಯಲ್ಲಿ 2025ನೇ ಸಾಲಿನ ರಾಷ್ಟ್ರೀಯ ಅರ್ಹತಾ ಪರೀಕ್ಷೆ (NET ಮತ್ತು K SET) ಪೂರ್ವ ತಯಾರಿ ತರಬೇತಿ ನಾಳೆಯಿಂದ (ಮೇ.7)ಆರಂಭಗೊಳ್ಳಲಿದೆ. ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನು ಸರಕಾರವು 2025ರ ಜೂನ್ ತಿಂಗಳಲ್ಲಿ ನಡೆಸಲು ಸಿದ್ಧವಾಗಿದೆ.

ಅಕಾಡೆಮಿಯ ಅಮೋಘ ಸಾಧನೆ !

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KAR-TET), ಶಿಕ್ಷಕರ ನೇಮಕಾತಿ, ರಾಷ್ಟ್ರೀಯ ಅರ್ಹತಾ ಪರೀಕ್ಷೆ (NET/ K-SET) ಹಾಗೂ ಸರಕಾರಿ ಶಿಕ್ಷಕರ ನೇಮಕಾತಿ, ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆಗಳಿಗೆ ತರಬೇತಿ ನೀಡುತ್ತಾ ಬಂದಿರುವ ವಿದ್ಯಾಮಾತಾ ಅಕಾಡೆಮಿಯ 190ಕ್ಕೂ ಅಧಿಕ ಅಭ್ಯರ್ಥಿಗಳು ತಮ್ಮ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನೇಮಕಾತಿಗೊಂಡಿದ್ದು, ಈ ಅಕಾಡೆಮಿಯ ಸಾಧನೆಯ ಮೆಟ್ಟಿಲಾಗಿದೆ.

ಅರ್ಜಿ ಸಲ್ಲಿಸಲು ಅವಕಾಶ:

ಇನ್ನು ರಾಷ್ಟ್ರೀಯ ಮಟ್ಟದಲ್ಲಿ ಉಪನ್ಯಾಸಕರಾಗಲು ನಡೆಯಲಿರುವ ಅರ್ಹತಾ ಪರೀಕ್ಷೆಗೆ ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಹೊಂದಿರುವ ಮತ್ತು ಪ್ರಸ್ತುತ ವ್ಯಾಸಂಗ ಮಾಡುತ್ತಿರುವವರು ಅರ್ಜಿ ಸಲ್ಲಿಸಬಹುದು.

K-SET/NET ಪ್ರಯೋಜನ

K-SET/NET ತರಬೇತಿ ಪಡೆಯುವ ಮೊದಲ ಇದರ ಪ್ರಯೋಜನಗಳನ್ನು ನೀವು ತಿಳಿದು ಕೋಳ್ಳಲೇ ಬೇಕು. ಕೆ ಸೆಟ್ ಪಾಸಾದರೆ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಲು ಅವಕಾಶ ಇರುತ್ತದೆ. ಪಿ ಎಚ್ ಡಿ ರಿಸರ್ಚ್ ಅಪ್ಲೈ ಮಾಡಿದಾಗ ಲಿಖಿತ ಪರೀಕ್ಷೆ ಇರದೇ ಮೌಖಿಕ ಪರೀಕ್ಷೆ ಮಾತ್ರ ಇರುತ್ತದೆ. ಕೆ ಸೆಟ್ ಉತ್ತೀರ್ಣರಾದವರು NET ಎಕ್ಸಾಮ್ ಉತ್ತೀರ್ಣರಾದರೆ ಆಲ್ ಓವರ್ ಇಂಡಿಯಾ ಅಸಿಸ್ಟೆಂಟ್ ಪ್ರೊಫೆಸರ್ ಗೆ ಅಪ್ಲೈ ಮಾಡಬಹುದು. ಸರಕಾರಿ ಸ್ವಾಮ್ಯದಲ್ಲಿರುವ ವಿಶ್ವವಿದ್ಯಾನಿಲಯದಲ್ಲಿ ಡೈಲಿ ವೇಜಸ್ , ಪಾರ್ಟ್ ಟೈಮ್ ಗೆ ಮೊದಲ ಆದ್ಯತೆ ಪಡೆಯಬಹುದು.

ಇನ್ನು ಕೆ ಸೆಟ್ ಪಾಸಾದವರು NET +JRF (ಜೂನಿಯರ್ ರಿಸರ್ಚ್ ಫೆಲೋಶಿಪ್) ಪರೀಕ್ಷೆ ಕೂಡ ಉತ್ತೀರ್ಣರಾದರೆ ಪಿ ಎಚ್ ಡಿ ಗೆ ಖಾಲಿ ಇರುವ ಯೂನಿವರ್ಸಿಟಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಪಿ ಎಚ್ ಡಿ ಮಾಡುತ್ತಿರುವಾಗಲೇ ನಾಲ್ಕು ವರ್ಷದ ಅವಧಿಯಲ್ಲಿ ಪ್ರತಿ ತಿಂಗಳು 45ರಿಂದ 50,000 ರಿಸರ್ಚ್ ಸಬ್ಮಿಟ್ ಆಗುವವರೆಗೆ ಫೇಲೋ ಶಿಪ್ ಬರುತ್ತದೆ. ವಿದ್ಯಾಮಾತಾ ಅಕಾಡೆಮಿಯನ್ನು 9620468869/ 9148935808 ಸಂಖ್ಯೆಗಳಲ್ಲಿ ಈ ಕೂಡಲೇ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು.

See also  ಸುಳ್ಯ: ಎನ್‌ಎಂಸಿಯಲ್ಲಿ ಮಹಿಳಾ ಏಕತಾ ದಿನಾಚರಣೆ, ವಿದ್ಯಾರ್ಥಿಗಳೊಂದಿಗೆ ಸಂವಾದ ವಿಚಾರ ವಿನಿಮಯ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget