ಕರಾವಳಿ

ಸುಳ್ಯ : ತೆಂಗಿನ ಮರವೇರಿ ಒಂದೇ ಗ್ರಾಮದ ಇಬ್ಬರು ಯುವಕರು ಬಲಿ

307

ನ್ಯೂಸ್ ನಾಟೌಟ್ : ಯುವಕನೋರ್ವ ತೆಂಗಿನ ಮರದಿಂದ ಬಿದ್ದು ದುರಂತ ಸಾವನ್ನಪ್ಪಿರುವ ಘಟನೆ ಸುಳ್ಯದ ನೆಲ್ಲೂರು ಕೆಮ್ರಾಜೆ ಗ್ರಾಮದಿಂದ ವರದಿಯಾಗಿದೆ.ನೆಲ್ಲೂರು ಕೆಮ್ರಾಜೆ ಗ್ರಾಮದ ನಾರ್ಣಕಜೆ ದಿ|ಕುಂಞ ಎಂಬವರ ಪುತ್ರ ಹರೀಶ (29 ವರ್ಷ ) ಮೃತ ದುರ್ದೈವಿ.

ನಾರ್ಣಕಜೆಯ ಬೊಳ್ಳಾಜೆ ಎಂಬಲ್ಲಿ ತೆಂಗಿನ ಕಾಯಿ ಕೀಳುವ ವೇಳೆ ಆಕಸ್ಮಿಕವಾಗಿ ತೆಂಗಿನ ಮರದಿಂದ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.ಹರೀಶ್ ಇಂದು ಬೆಳಿಗ್ಗೆ ನೆಲ್ಲೂರು ಕೆಮ್ರಾಜೆಯ ಬೊಳ್ಳಾಜೆ ಬಳಿಯ ಮನೆಯೊಂದರ ಸಮೀಪದಲ್ಲಿದ್ದ ತೆಂಗಿನ ಮರದಲ್ಲಿದ್ದ ಕಾಯಿ ಕೀಳಲು ಮರಕ್ಕೆ ಹತ್ತಿ ಇಳಿಯುತ್ತಿದ್ದಾಗ ಸ್ಮೃತಿ ತಪ್ಪಿ ಕೆಳಗೆ ಬಿದ್ದಿದ್ದಾರೆನ್ನುವ ಮಾಹಿತಿ ಸಿಕ್ಕಿದೆ.ಕೂಡಲೇ ಸ್ಥಳೀಯರು ಅಸ್ಪತ್ರೆಗೆ ಸಾಗಿಸಿದರೂ ದಾರಿ ಮಧ್ಯದಲ್ಲೇ ಮೃತಪಟ್ಟರೆನ್ನಲಾಗಿದೆ‌.ಮೃತರು ಪತ್ನಿ, ಎರಡು ಮಕ್ಕಳು, ತಾಯಿ ಮತ್ತುಸಹೋದರ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

———–

ಪ್ರತ್ಯೇಕ ಪ್ರಕರಣದಲ್ಲಿ ನಿನ್ನೆಯಷ್ಟೇ ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ದಾಸನಕಜೆ ಎಂಬಲ್ಲಿಯ ಯುವಕ ತೆಂಗಿನ ಕಾಯಿ ಕೀಳುವ ಸಂದರ್ಭ ಆಕಸ್ಮಿಕವಾಗಿ ತೆಂಗಿನ ಮರದಿಂದ ಬಿದ್ದು ಮೃತಪಟ್ಟಿರುವ ಬಗ್ಗೆ ವರದಿಯಾಗಿತ್ತು. ಸತೀಶ ಮಣಿಯಾಣಿ ( 35 ವರ್ಷ ) ಮೃತ ದುರ್ದೈವಿಯಾಗಿದ್ದರು.

ಸತೀಶರವರು ಎಂದಿನಂತೆ ಕೆಲಸಕ್ಕೆ ಹೋಗಿದ್ದು, ಮಧ್ಯಾಹ್ನ ಊಟ ಮುಗಿಸಿ ಅಲ್ಲೇ ಸಮೀಪದ ಎಲಿಮಲೆ ಎಂಬಲ್ಲಿರುವ ಮನೆ ಬಳಿಯಿದ್ದ ತೆಂಗಿನ ಕಾಯಿ ಕೀಳಲು ಮರವೇರಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ಮರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದು,ಸುಳ್ಯ ಆಸ್ಪತ್ರೆಗೆ ಕರೆತರಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು.ಮೃತ ಸತೀಶ ಮಣಿಯಾಣಿ ಅವರು ನೆಲ್ಲೂರು ಕೆಮ್ರಾಜೆ ಗ್ರಾಮದ ದಾಸನಕಜೆ ದಿ| ಶಿವರಾಮ ಮಣಿಯಾಣಿಯವರ ಪುತ್ರರಾಗಿದ್ದು, ಅವಿವಾಹಿತರಾಗಿದ್ದರು.

See also  ಕೊಕ್ಕಡ:ಇಳೆಯನ್ನು ಸ್ಪರ್ಶಿಸಿದ ಮಳೆರಾಯ..! ಭಾರಿ ಗಾಳಿ ಮಳೆಗೆ ಮನೆಯ ಮೇಲ್ಚಾವಣಿ ಕುಸಿತ!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget