ಕರಾವಳಿಸುಳ್ಯ

ಸುಳ್ಯ:ಅಗಲಿದ ವೀರ ಯೋಧ ಕ್ಯಾ.ಪ್ರಾಂಜಲ್ ಎಂ.ವಿ.ರಿಗೆ ಗೌರವಾರ್ಪಣೆ,NMC ರೋವರ್ಸ್ ರೇಂಜರ್ಸ್ ವತಿಯಿಂದ ಕಾರ್ಯಕ್ರಮ

ನ್ಯೂಸ್ ನಾಟೌಟ್ : ವೀರ ಯೋಧ ಹುತಾತ್ಮ ಕ್ಯಾ.ಪ್ರಾಂಜಲ್ ಎಂ.ವಿ. ಇವರಿಗೆ ಗೌರವ ನಮನ ಕಾರ್ಯಕ್ರಮವು ನೆಹರು ಸ್ಮಾರಕ ಮಹಾವಿದ್ಯಾಲಯದ ರೋವರ್ಸ್-ರೇಂಜರ್ಸ್ ಘಟಕದ ವತಿಯಿಂದ ಕಾಲೇಜಿನ ಎ.ವಿ.ಹಾಲ್ ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ರುದ್ರ ಕುಮಾರ್ ಎಂ.ಎಂ., ಹಿರಿಯ ಉಪನ್ಯಾಸಕ ಪ್ರೊ. ತಿಪ್ಪೇಸ್ವಾಮಿ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹರಿಪ್ರಸಾದ್, ವಿಷ್ಣು ಪ್ರಶಾಂತ್, ರಾಜೇಶ್ವರೀ, ರೋವರ್ಸ್ ಸ್ಕೌಟ್ ಲೀಡರ್ ಉಮೇಶ್, ರೇಂಜರ್ಸ್ ಲೀಡರ್ ಶೋಭಾ ಎ. ರೋವರ್ಸ್ ಹಾಗೂ ರೇಂಜರ್ಸ್ ವಿದ್ಯಾರ್ಥಿಗಳು ಪುಷ್ಪ ನಮನ ಸಲ್ಲಿಸಿ, ಮೌನ ಪ್ರಾರ್ಥನೆ ಮಾಡಿದರು.

ರೇಂಜರ್ ಶ್ರೇಯಾಶ್ರೀ ವೀರ ಯೋಧನ ವ್ಯಕ್ತಿ ಪರಿಚಯ ಮಾಡಿದರು. ರೋವರ್ ನೂತನ್ ಅಗಲಿದ ವೀರ ಯೋಧ ಕ್ಯಾ. ಪ್ರಾಂಜಲ್ ಇವರ ಸಾಧನೆಯ ವಿಡಿಯೋ ಪ್ರದರ್ಶನ ಮಾಡಿದರು. ರೋವರ್ಸ್ ಸ್ಕೌಟ್ ಲೀಡರ್ ಉಮೇಶ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ವೃಂದ, ಉಪನ್ಯಾಸಕರು, ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ: ಗುತ್ತು ಮನೆಯಲ್ಲಿ ಪತ್ನಿ ಸ್ಪಂದನ ಆತ್ಮವನ್ನು ಹಿರಿಯರ ಜೊತೆ ಸೇರಿಸಿದ ನಟ ವಿಜಯ್ ರಾಘವೇಂದ್ರ ಕುಟುಂಬ..! ಏನಿದು ತುಳುನಾಡ ಸಂಸ್ಕೃತಿ..?

ಶಾಂತಿ ಕದಡಿದರೆ ಬಜರಂಗದಳ, ಆರ್‌ಎಸ್‌ಎಸ್‌ ಕೂಡ ನಿಷೇಧ: ಸಚಿವ ಪ್ರಿಯಾಂಕ್ ಖರ್ಗೆ

ಬಿದ್ದು ಸಿಕ್ಕಿದ 17 ಸಾವಿರ ರೂ. ಹಿಂತಿರುಗಿಸಿ ಮಾನವೀಯತೆ ಮೆರೆದ ಸುಳ್ಯದ ಟೆಂಪೋ ಚಾಲಕರು..! ಇಂತಹ ಪ್ರಾಮಾಣಿಕರಿಗೊಂದು ಮೆಚ್ಚುಗೆ ಸೂಚಿಸಿ