ಕರಾವಳಿಸುಳ್ಯ

ಸುಳ್ಯ: ರಾತ್ರೋರಾತ್ರಿ ಅಂಗಡಿಯೊಳಕ್ಕೆ ನುಗ್ಗಿದ ಕಳ್ಳರು,ಬೀಡಿ ಬ್ರಾಂಚ್‌ನಲ್ಲಿದ್ದ ಸಾವಿರಾರು ಮೌಲ್ಯದ ಬೀಡಿ ಕದ್ದೊಯ್ದು ಎಸ್ಕೇಪ್..!

ನ್ಯೂಸ್ ನಾಟೌಟ್: ರಾತ್ರಿ ವೇಳೆ ಅಂಗಡಿಯೊಂದಕ್ಕೆ ಕಳ್ಳರು ನುಗ್ಗಿ ಮೂವತ್ತು ಸಾವಿರ ಬೀಡಿಯನ್ನು ಕಳವುಗೈದು ಪರಾರಿಯಾದ ಘಟನೆ ಸುಳ್ಯದಿಂದ ವರದಿಯಾಗಿದೆ.ಸುಳ್ಯದ ಜಾಲ್ಸೂರಿನಲ್ಲಿ ಈ ಘಟನೆ ನಡೆದಿದ್ದು,ಜಾಲ್ಸೂರು ಪರಿಸರದಲ್ಲಿ ಕಳೆದೊಂದು ತಿಂಗಳಿನಿಂದ ಅಲ್ಲಲ್ಲಿ ಕಳ್ಳತನ ಪ್ರಕರಣಗಳು ನಡೆಯುತ್ತಿದೆ.

ಆ.20ರ ರಾತ್ರಿ ಜಾಲ್ಸೂರಿನ ಗೋಳಿಕಟ್ಟೆ ಸಮೀಪವಿರುವ ಪ್ರಮೀತ್‌ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಶೇಷಪ್ಪ ರೈ ದುಗಲಡ್ಕ ಅವರ ಬೀಡಿ ಬ್ರಾಂಚ್‌ನಿಂದ ರಾತ್ರಿ ಬೀಡಿ ಕಳವಾಗಿದೆ. ರಾತ್ರಿ ವೇಳೆ ಅಂಗಡಿಗೆ ನುಗ್ಗಿದ ಕಳ್ಳರು ಅಂಗಡಿಯ ಶೆಟರ್‌ ಮುರಿದು ಗೋಣಿಯಲ್ಲಿ ತುಂಬಿಸಿಟ್ಟಿದ್ದ ಸುಮಾರು ಹದಿನೈದು ಸಾವಿರ ಮೌಲ್ಯದ ಮೂವತ್ತು ಸಾವಿರ ಬೀಡಿ ಕಳವುಗೈದಿರುವುದಾಗಿ ತಿಳಿದುಬಂದಿದೆ.

ಮರುದಿನ ಬೆಳಿಗ್ಗೆ ಶೇಷಪ್ಪ ರೈ ಅವರು ಅಂಗಡಿಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.ಸದ್ಯ ಈ ಪ್ರಕರಣ ಕುರಿತಂತೆ ತನಿಖೆ ನಡೆಯುತ್ತಿದೆ.ಜಾಲ್ಸೂರು ಪರಿಸರದಲ್ಲಿ ಕಳ್ಳತನ ಪ್ರಕರಣಗಳು ಆಗಾಗ ಮರುಕಳಿಸುತ್ತಿವೆ.

Related posts

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ, ನಾಳೆ (ಜು.20) ಕೂಡ ಶಾಲಾ- ಕಾಲೇಜಿಗೆ ರಜೆ

ಭೂ ಕುಸಿತದಿಂದ ನಿಂತಿದ್ದ ಮಂಗಳೂರು-ಬೆಂಗಳೂರು ರೈಲು ಸಂಚಾರ ಪುನರಾರಂಭ, 12 ದಿನದ ಬಳಿಕ ಕಾರ್ಯಾರಂಭ

ತಾಲೂಕು ಪಂಚಾಯತ್ ಕ್ವಾಟ್ರಸ್‌ನಲ್ಲಿ ಆತ್ಮಹತ್ಯೆಗೆ ಶರಣಾದ 15 ವರ್ಷದ ಬಾಲಕ..!