ಕರಾವಳಿಸುಳ್ಯ

ಸುಳ್ಯ: ಪೆರುವಾಜೆಯಲ್ಲಿ ಅಡಿಕೆ ಸೇರಿದಂತೆ ಇಲೆಕ್ಟ್ರಿಕ್ ಸ್ವತ್ತುಗಳು ,ಪಾತ್ರೆ ,ಸಾಮಾಗ್ರಿಗಳ ಕಳವು;ನಾಲ್ವರ ವಿರುದ್ಧ ಪೊಲೀಸ್‌ ದೂರು:ದೂರಿನಲ್ಲೇನಿದೆ?

185

ನ್ಯೂಸ್ ನಾಟೌಟ್: ಕಟ್ಟಡಕ್ಕೆ ಅಳವಡಿಸಲಾಗಿದ್ದ ವಿದ್ಯುತ್ ಮೀಟರ್, ಸ್ವಿಚ್ ಬೋರ್ಡ್, ಬಲ್ಬ್ ಹಾಗೂ ಇತರ ಇಲೆಕ್ಟ್ರಿಕ್ ಸ್ವತ್ತುಗಳನ್ನು ಹಾಗೂ ಕಟ್ಟಡದ ಒಳಗೆ 4 ಗೋಣಿಚೀಲಗಳಲ್ಲಿ ಸಂಗ್ರಹಿಸಿಟ್ಟ ಹಣ್ಣು ಅಡಿಕೆ ಮತ್ತು ಪಾತ್ರೆ ಸಾಮಾಗ್ರಿಗಳನ್ನು ಕಳವು ಮಾಡಿರುವುದಾಗಿ ಆರೋಪಿಸಿ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.ಈ ಕುರಿತಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೆರುವಾಜೆ ನಿವಾಸಿ, ಅಮರನಾಥ ಶೆಟ್ಟಿ ಎಂಬವರು ನೀಡಿರುವ ದೂರಿನ ಮೇರೆಗೆ ನಾಲ್ಕು ಜನರ ವಿರುದ್ಧ ಪ್ರಕರಣದ ದಾಖಲಾಗಿದೆ. ಹರೀಶ್ ರೈ, ರೇಷ್ಮಾ, ಕಿರಣ್, ಕಿಶೋರ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಅಮರನಾಥ ಶೆಟ್ಟಿ ಎಂಬವರು ಸುಳ್ಯ ತಾಲೂಕು ಪೆರುವಾಜೆ ಗ್ರಾಮದಲ್ಲಿ ಕಟ್ಟಡವನ್ನು ಹೊಂದಿದ್ದು, ಸದ್ರಿ ಕಟ್ಟಡಕ್ಕೆ ಅಳವಡಿಸಿದ್ದ ವಿದ್ಯುತ್ ಮೀಟರ್, ಸ್ವಿಚ್ ಬೋರ್ಡ್, ಬಲ್ಬ್ ಇತ್ಯಾದಿ ಎಲೆಕ್ಟ್ರಿಕ್ ಸ್ವತ್ತುಗಳು ಹಾಗೂ ಕಟ್ಟಡದ ಒಳಗೆ 4 ಗೋಣಿಚೀಲ ಗಳಲ್ಲಿ ಸಂಗ್ರಹಿಸಿಟ್ಟ ಹಣ್ಣು ಅಡಿಕೆ ಹಾಗೂ ಪಾತ್ರೆ ಸಾಮಾಗ್ರಿ ಇತ್ಯಾದಿ ಸ್ವತ್ತುಗಳನ್ನು ನ.1ರಿಂದ 3ರ ಅವಧಿಯಲ್ಲಿ ಹರೀಶ್, ರೇಷ್ಮಾ, ಕಿರಣ, ಕಿಶೋರ್ ಎಂಬವರು ತೆಗೆದುಕೊಂದು ಹೋಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

See also  ಕುಕ್ಕುಜಡ್ಕ: ಸೈಡ್ ಕೊಡೋ ವೇಳೆ ಹೊಂಡಕ್ಕೆ ಬಿದ್ದ ಶಾಲಾ ಬಸ್..! ಸ್ವಲ್ಪದರಲ್ಲೇ ಪಾರಾದ ವಿದ್ಯಾರ್ಥಿಗಳು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget