ಕರಾವಳಿಸುಳ್ಯ

ಸುಳ್ಯ:ವಿಷ ಸೇವಿಸಿದ್ದ ಯುವಕ ಚಿಕಿತ್ಸೆ ಫಲಿಸದೇ ಕೊನೆಯುಸಿರು..!

ನ್ಯೂಸ್ ನಾಟೌಟ್ :ಕಳೆದ ಐದು ದಿನಗಳ ಹಿಂದೆ ವಿಷ ಸೇವಿಸಿದ್ದ ಯುವಕನೋರ್ವ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದ ಘಟನೆ ಸುಳ್ಯದ ಆಲೆಟ್ಟಿ ಗ್ರಾಮದಿಂದ ವರದಿಯಾಗಿದೆ.ಅಶೋಕ ಉಸಿರು ಚೆಲ್ಲಿದ ಯುವಕ.

ಈತ ಡಿ.28ರಂದು ತಡರಾತ್ರಿ ವಿಷ ಸೇವಿಸಿದ್ದ ಎನ್ನಲಾಗಿದೆ.ಅರಂತೋಡಿನ ಸರ್ವೀಸ್ ಸ್ಟೇಷನ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ ವಿಷ ಸೇವಿಸಿ ಮನೆಗೆ ತೆರಳಿದ್ದ.ಇದನ್ನು ಗಮನಿಸಿದ ಮನೆಯವರು ಕೂಡಲೇ ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದ್ದರು.

ಬಳಿಕ ವೈದ್ಯರ ಸಲಹೆಯಂತೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಯಿತು.ಅಲ್ಲಿಂದ ಚಿಕಿತ್ಸೆಗಾಗಿ ಸುರತ್ಕಲ್‌ನಲ್ಲಿರುವ ಶ್ರೀನಿವಾಸ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.ಆದರೆ ನಿನ್ನೆ(ಡಿ.2) ತಡರಾತ್ರಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.ಯುವಕ ತಾಯಿ, ಸಹೋದರ ಹಾಗೂ ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

Related posts

ಕಳ್ಳತನ ಮಾಡೋಕೆ ಮನೆಗೆ ನುಗ್ಗಿದ ಕಳ್ಳನಿಗೆ AC ಕೆಳಗೆ ಗಡದ್ ನಿದ್ದೆ..!, ಬೆಳಗ್ಗೆ ಪೊಲೀಸರು ಬಂದು ಎದುರು ಕುಳಿತರೂ ಎಚ್ಚರಿಕೆಯೇ ಆಗಲಿಲ್ಲ..!

ಯಡಿಯೂರಪ್ಪ ಕೈಗೆ ಒಂದೂವರೇ ತೆಂಗಿನ ಕಾಯಿ ಇಟ್ರಾ ವಿನಯ್ ಗುರೂಜಿ?

ಸುಳ್ಯ: ಗ್ಯಾರೇಜ್ ಮಾಲಕರ ಸಂಘದ ವಾರ್ಷಿಕ ಮಹಾಸಭೆ