ಕರಾವಳಿಸುಳ್ಯ

ಸುಳ್ಯ: ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ..!ಕಳೆದ ವರ್ಷವೂ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕನ ಈ ನಿರ್ಧಾರಕ್ಕೆ ಕಾರಣವೇನು?

ನ್ಯೂಸ್ ನಾಟೌಟ್ : ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಎಂಬಲ್ಲಿಂದ ವರದಿಯಾಗಿದೆ.ಈತ ಕಳೆದ ವರ್ಷವೂ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು,ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಆದರೆ ದುರಂತವೆಂದರೆ ಅದೇ ಬಾಲಕ ಮತ್ತೆ ಈ ಕೃತ್ಯವೆಸಗಿದ್ದು ನೇಣು ಬಿಗಿದುಕೊಂಡು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಶಮಂತ್ ದುರಂತ ಅಂತ್ಯ ಕಂಡಿರುವ ವಿದ್ಯಾರ್ಥಿ.ಈತ ಸುಳ್ಯದ ಎಲಿಮಲೆ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.

ಮೂಲತಃ ಈತ ಚೊಕ್ಕಾಡಿಯವನಾಗಿದ್ದು, ಪ್ರಸ್ತುತ ನೆಲ್ಲೂರು ಕೆಮ್ರಾಜೆ ಗ್ರಾಮದ ಹೊಟ್ಟುಚೋಡಿಯಲ್ಲಿ ನೆಲೆಸಿದ್ದ.ದಿ| ವಾಸುದೇವ  ಎಂಬವರ ಪುತ್ರ. ಶಮಂತ್ ಇಂದು ಬೆಳಿಗ್ಗಿನ ಜಾವ 6 ಗಂಟೆಯ ಸಂದರ್ಭ ಮನೆಯಿಂದ ಹೊರಟು ಬಂದಿದ್ದ ಎನ್ನಲಾಗಿದೆ. ಈ ವೇಳೆ ಶಾಲಾ ಆವರಣದ ಹಿಂಬದಿಯಲ್ಲಿರುವ ಸಣ್ಣ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.ಸ್ಥಳೀಯರು ಈ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Related posts

ನೆಲ್ಯಾಡಿ: ಬಸ್ –ಕಾರು ಡಿಕ್ಕಿ, ಇಬ್ಬರಿಗೆ ಗಾಯ

ಉಪ್ಪಿನಂಗಡಿ: ಹಿಜಾಬ್ ಧರಿಸಿ ಕಾಲೇಜಿಗೆ ಬಂದ 6 ವಿದ್ಯಾರ್ಥಿನಿಯರು ಅಮಾನತು

ಸುಳ್ಯ:ಲ್ಯಾಂಪ್ ಸೊಸೈಟಿ ಬಳಿ ಅಂತರಾಷ್ಟ್ರೀಯ ‘ಪ್ರಜಾಪ್ರಭುತ್ವ ದಿನಾಚರಣೆ’