ಕರಾವಳಿಸುಳ್ಯ

ಸುಳ್ಯ:ಈಚರ್ ಲಾರಿ ಅಪಘಾತಗೊಂಡು ಅರ್ಧ ಗಂಟೆ ಲಾರಿಯಲ್ಲೇ ಬಾಕಿಯಾದ ಚಾಲಕ..!,ಸ್ಥಳೀಯರ ಸಹಕಾರದಿಂದ ಚಾಲಕ ಅಪಾಯದಿಂದ ಪಾರು..!

273

ನ್ಯೂಸ್ ನಾಟೌಟ್ : ಸುಳ್ಯದ ಜಾಲ್ಸೂರು ಸಮೀಪ ಈಚರ್ ಲಾರಿ ಅಪಘಾತಗೊಂಡು ಚಾಲಕ ಅಲ್ಪಸಲ್ಪ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿರುವ ಘಟನೆ ವರದಿಯಾಗಿದೆ. ಪರಿಣಾಮ ಲಾರಿಯ ಎದುರು ಭಾಗ ಸಂಪೂರ್ಣ ಜಖಂಗೊಂಡಿದೆ ಎಂದು ತಿಳಿದು ಬಂದಿದೆ.

ಈಚರ್ ಲಾರಿಯು ಬೆಂಗಳೂರಿನಿಂದ ಈಶ್ವರಮಂಗಲಕ್ಕೆ ತೆರಳುತ್ತಿತ್ತು ಎಂದು ಹೇಳಲಾಗಿದೆ.ಈ ವೇಳೆ ಜಾಲ್ಸೂರು ಸಮೀಪದ ನಡುವಡ್ಕ ಎಂಬಲ್ಲಿ ಅಪಘಾತವಾಗಿದೆ.ಇದೇ ವೇಳೆ ಲಾರಿ ಎದುರು ಭಾಗದಿಂದ ಸಂಪೂರ್ಣ ನಜ್ಜುಗುಜ್ಜು ಆಗಿದೆ ಎಂದು ತಿಳಿದು ಬಂದಿದೆ.ಚಾಲಕ ಜಯರಾಜ್ ರವರು ಸುಮಾರು ಅರ್ಧ ಗಂಟೆ ಕಾಲ ಲಾರಿಯಲ್ಲೇ ಬಾಕಿಯಾಗಿರುವ ಪ್ರಸಂಗವೂ ನಡೆಯಿತು.

https://newsnotout.com/2023/10/guttigaru-men-deadbody-found/

ಸಂಪೂರ್ಣ ಜಖಂಗೊಂಡ ಪರಿಣಾಮ ಅವರ ಕಾಲು ಜಾಮ್ ಆಗಿ ಲಾರಿಯಿಂದ ಹೊರಗೆ ಬರಲು ಕಷ್ಟವಾಯಿತು.ಈ ವೇಳೆ ಹತ್ತಾರು ಮಂದಿ ಸ್ಥಳೀಯರು ಸ್ಥಳದಲ್ಲಿ ನೆರೆದಿದ್ದರು.ನಂತರ ಸ್ಥಳೀಯರ ಸಹಕಾರದಿಂದ ಅವರನ್ನು ಹೊರಗೆ ಕರೆತರಲಾಯಿತು ಎಂದು ತಿಳಿದು ಬಂದಿದೆ.ಬಳಿಕ ಗಾಯಾಳು ಜಯರಾಜ್ ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಯಿತು.

See also  ಕೊಡಗಿನಲ್ಲಿ ಮೂವರಿಗೆ ಕೊರೊನಾ,ಬೆಂಗಳೂರಿಗೆ ಮಾದರಿ ರವಾನೆ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget