ಕರಾವಳಿಸುಳ್ಯ

ಸುಳ್ಯ: ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಕಾರು..! ಸಂಭಾವ್ಯ ದುರಂತದಿಂದ ಪಾರಾದ ಪ್ರಯಾಣಿಕರು

ನ್ಯೂಸ್ ನಾಟೌಟ್: ಸುಳ್ಯ ತಾಲೂಕಿನ ಬಳ್ಪದಲ್ಲಿ ಮಂಗಳವಾರ ರಾತ್ರಿ ಕಾರೊಂದು ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿದೆ.


ಸ್ವಿಫ್ಟ್ ಡಿಸೈರ್ ಕಾರು ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ಹೇಳಲಾಗಿದೆ.

ಸ್ವಲ್ಪ ಮುಂದುಗಡೆ ಒಂದು ವಿದ್ಯುತ್ ಕಂಬವಿದ್ದು ಅದಕ್ಕೆ ಗುದ್ದಿದ್ದರೆ ಭಾರಿ ಅಪಾಯ ಸಂಭವಿಸುವ ಸಾಧ್ಯತೆ ಇತ್ತು. ಆದರೆ ಪವಾಡಸದೃಶ್ಯವಾಗಿ ಪ್ರಯಾಣಿಕರು ಪಾರಾಗಿದ್ದಾರೆ.

Related posts

ಸುಳ್ಯ: ಫಾಸ್ಟ್‌ ಫುಡ್ ಅಂಗಡಿಗೆ ನುಗ್ಗಿದ ಬೋಲೆರೋ ಕಾರು

ಸುಳ್ಯ: ಎನ್ನೆಂಸಿಯಲ್ಲಿ ಗ್ರಂಥಾಲಯ ಮಾಹಿತಿ ಕಾರ್ಯಾಗಾರ

ಸುಳ್ಯ: ಎನ್‌ಎಂಪಿಯುಸಿಯಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮ